ಫೈಜರ್ ಮತ್ತು ಮಾಡೆರ್ನಾ ಲಸಿಕೆ ಕಂಪನಿಗಳು ರಾಜ್ಯಗಳ ಜತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದಿವೆ. ಆದರೆ ಕೇಂದ್ರ ಸರ್ಕಾರ ಈಗಾಗಲೇ ಅವುಗಳ ಜತೆ ಮಾತುಕತೆ ನಡೆಸುತ್ತಿದೆ. ಲಸಿಕೆ ಲಭ್ಯತೆ ಮತ್ತು ಅವುಗಳನ್ನು ಬಳಸಲು ಅನುಮತಿ ನೀಡುವ ಪ್ರಶ್ನೆಯೂ ಇರುತ್ತದೆ. ಹೀಗಾಗಿ ಕೇಂದ್ರವೇ ಈ ಕಂಪನಿಗಳ ಜತೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳಲಿದೆ.
ಅಂತರಾಷ್ಟ್ರೀಯ ನಿಯತಕಾಲಿಕವೊಂದರಲ್ಲಿ ಪ್ರಕಟವಾದಂತೆ ಚೀನಾದ ವುಹಾನ್ ಪ್ರಯೋಗಾಲಯದಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಇದರಲ್ಲಿ ಚೀನಾದ ಕೈವಾಡ ಇದೆ ಎಂಬ ಆರೋಪವಿದೆ. ಈ ಬಗ್ಗೆ ಭಾರದತ ನಿಲುವೇನು? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ಕೊರೊನಾ ವೈರಸ್ ಸೋರಿಕೆ ಬಗ್ಗೆ ಹಲವು ವ್ಯಾಖ್ಯಾನಗಳು ಕೇಳಿಬರುತ್ತಲೇ ಇವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ತನಿಖೆ ನಡೆಸುತ್ತಿದೆ. ಈಗಲೇ ಭಾರತ ಯಾವ ನಿಲುವನ್ನೂ ತಳೆಯುವುದಿಲ್ಲ ಎಂದು ತಿಳಿಸಿದರು.
ಮಕ್ಕಳಲ್ಲಿ ಕೊವಿಡ್ ಕಂಡುಬಂದರೂ ಹೆಚ್ಚಿನ ಗುಣಲಕ್ಷಣಗಳು ಕಂಡುಬಂದಿಲ್ಲ. ಆದರೆ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಕೊವಿಡ್ ತೊಂದರೆ ನೀಡು ಸಾಧ್ಯತೆಯಿದೆ. ಟೆಕ್ ಸ್ಯಾವಿ ಮಕ್ಕಳು ಮಾನಸಿಕವಾಗಿ ದುರ್ಬಲಗೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಪಾಲಕರು, ಆಶಾ ಕಾರ್ಯಕರ್ತೆಯರು,ನೆರೆಹೊರೆಯವರು ಗೆಳೆಯರು ಎಲ್ಲರೂ ಸೇರಿ ಮಕ್ಕಳ ಆರೋಗ್ಯದ ಮೇಲೆ ಗಮನವಿರಿಸಬೇಕು ಎಂದು ಅವರು ಸೂಚಿಸಿದರು.
ಬ್ಲ್ಯಾಕ್ ಫಂಗಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಲ್ಲ ಎಂಬುದು ಸಮಾಧಾನಕರ ಸಂಗತಿ. ಬ್ಲ್ಯಾಕ್ ಫಂಗಸ್ ಶೇ.90 ರಷ್ಟು ಡಯಾಬಿಟಿಸ್, ಸ್ಟೀರಾಯ್ಡ್ ತೆಗೆದುಕೊಂಡವರಲ್ಲಿ ಮಾತ್ರ ಪತ್ತೆಯಾಗಿದೆ. ಮನೆಯಲ್ಲಿದ್ದು ಸ್ಟೀರಾಯ್ಡ್ ತೆಗೆದುಕೊಂಡವರು, ಡಯಾಬಿಟಿಸ್ ಇರುವವರಿಗೆ ಬಂದಿದೆ. ಆಸ್ಪತ್ರೆಗೆ ದಾಖಲಾಗಿ ಮೆಡಿಕಲ್ ಆಕ್ಸಿಜನ್ ಬಳಸದೇ ಇರುವವರಿಗೂ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ. ಆಕ್ಸಿಜನ್ ಬಳಸುವವರು ಸಾಮಗ್ರಿಗಳು ಸ್ವಚ್ಚವಾಗಿರುವಂತೆ ನೋಡಿಕೊಳ್ಳಬೇಕು ಎಂದು ದೆಹಲಿ ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ತಿಳಿಸಿದರು.
ದೇಶದಲ್ಲಿ ಕಂಡುಬರು ಶೇ 99ರಷ್ಟು ಫಂಗಸ್ ಸೋಂಕುಗಳು ಮಧುಮೇಹ ಇದ್ದವರಿಗೆ ಹೆಚ್ಚಿನ ಸ್ಟಿರಾಯ್ಡ್ ಕೊಟ್ಟೇ ಬಂದಿದೆ.ಕಳೆದ 11ದಿನಗಳಿಂದ ಹೊಸ ಕೊವಿಡ್ ಪ್ರಕರಣಗಳಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ 22 ದಿನಗಳಿಂದ ದೇಶದಲ್ಲಿ ಸಕ್ರಿಯ ಕೊವಿಡ್ ಸೋಂಕಿತರ ಸಂಖ್ಯೆಯಲ್ಲೂ ಇಳಿಮುಖವಾಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಏಮ್ಸ್ ನಿರ್ದೇಶಕ ಡಾ.ಗುಲೇರಿಯಾ ಸಹ ಉಪಸ್ಥಿತರಿದ್ದಾರೆ. ಕೊವಿಡ್ ನಂತರ ಕಂಡುಬರುವ ವಿವಿಧ ಫಂಗಸ್ ಬಗ್ಗೆ ಅವರು ವಿವರಣೆ ನೀಡುತ್ತಿದ್ದಾರೆ. ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಜತೆಗೆ ಇಂದು ಯೆಲ್ಲೋ ಫಂಗಸ್ ಸಹ ಕಂಡುಬಂದಿದ್ದು, ಅವುಗಳ ಬಗ್ಗೆ ಡಾ.ಗುಲೇರಿಯಾ ವಿವರಣೆ ನೀಡುತ್ತಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರ ಸುದ್ದಿಗೋಷ್ಠಿ ಆರಂಭವಾಗಿದೆ. ಈವರೆಗೆ 9.60 ಕೋಟಿ ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ದೇಶದ ಅರೆ ನಗರ, ಗ್ರಾಮೀಣ ಭಾಗಗಳಲ್ಲಿ ಕೊವಿಡ್ ಲಸಿಕೆ ನೀಡುವ ಬಗ್ಗೆ ವಿಶೇಷ ಮುತುವರ್ಜಿ ವಹಿಸುತ್ತಿರುವುದಾಗಿ ಅವರು ತಿಳಿಸಿದರು.
ಬ್ಲ್ಯಾಕ್, ವೈಟ್ ಫಂಗಸ್ ಬಳಿಕ ಈಗ ದೇಶದಲ್ಲಿ ಮೊದಲ ಬಾರಿಗೆ ಯೆಲ್ಲೋ ಫಂಗಸ್ ಪ್ರಕರಣವೊಂದು ಪತ್ತೆಯಾಗಿದೆ. ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಯೆಲ್ಲೋ ಫಂಗಸ್ ಪತ್ತೆಯಾಗಿದೆ. ಯೆಲ್ಲೋ ಫಂಗಸ್‌ನಿಂದ ಅಂಗಾಂಗಗಳು ವೈಫಲ್ಯವಾಗುತ್ತವೆ ಎಂದು ಹೇಳಲಾಗಿದ್ದು, ಬ್ಲ್ಯಾಕ್, ವೈಟ್ ಫಂಗಸ್‌ಗಿಂತ ಯೆಲ್ಲೋ ಫಂಗಸ್ ಹೆಚ್ಚು ಅಪಾಯಕಾರಿ ಎಂದು ಹೇಳಲಾಗಿದೆ.
ಕೊರೊನಾ ವಿರುದ್ಧದ ಹೋರಾಟಕ್ಕೆ ಬಿಸಿಸಿಐ ನೆರವು ನೀಡಲು ಮುಂದಾಗಿದೆ. 10 ಲೀಟರ್ ಸಾಮರ್ಥ್ಯದ 2,000 ಆಮ್ಲಜನಕ ಸಾಂದ್ರಕಗಳನ್ನು ಪೂರೈಸಲು ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಈ ಮೂಲಕದ ದೇಶ ನಡೆಸುತ್ತಿರುವ ಕೊವಿಡ್ ವಿರುದ್ಧದ ಹೋರಾಟಕ್ಕೆ ತಾನೂ ಕೈಜೋಡಿಸಲು ಬಿಸಿಸಿಐ ಮುಂದಾಗಿದೆ.
ಮುಂಬೈ ಮಹಾನಗರ ಪಾಲಿಕೆ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಕೊವಿಡ್ ಲಸಿಕೆ ನೀಡಲು ಪ್ರಾರಂಭಿಸಿದೆ. ಕಳೆದ ವಾರವೇ ಕೇಂದ್ರ ಸರ್ಕಾರ ಗರ್ಭಿಣಿಯರು, ಬಾಣಂತಿಯರಿಗೆ ಲಸಿಕೆ ನೀಡಲು ಒಪ್ಪಿಗೆ ನೀಡಿದ್ದ ಕಾರಣ ಮುಂಬೈ ಮಹಾನಗರ ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ.
18 ರಿಂದ 44 ವಯೋಮಾನದವರು ಲಸಿಕಾ ಕೇಂದ್ರದಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಕೊವಿಡ್ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಸ್ಥಳದಲ್ಲೇ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಲಸಿಕೆ ಪಡೆಯಲು ಕೇಂದ್ರ ಆರೋಗ್ಯ ಇಲಾಖೆ ಅನುಮತಿ ನೀಡಿದೆ. ಇದುವರೆಗೂ 18-44 ವರ್ಷದವರು ಕೋವಿನ್ ಪೋರ್ಟಲ್ ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡು ಅಪಾಯಿಂಟ್ಮೆಂಟ್ ತೆಗೆದುಕೊಂಡು ಮಾತ್ರ ಲಸಿಕೆ ಪಡೆಯಲು ಅವಕಾಶ ನೀಡಲಾಗಿತ್ತು.
ದೇಶದಲ್ಲಿ ಕೊವಿಡ್ ಸೋಂಕಿನ ಪರಿಸ್ಥಿತಿ ಮತ್ತು ಸರ್ಕಾರ ನಿರ್ವಹಿಸುತ್ತಿರುವ ಬಗೆಯ ಕುರಿತು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಇಂದು 4 ಗಂಟೆಗೆ ಮಾಧ್ಯಮಗಳಿಗೆ ವಿವರಣೆ ನೀಡಲಿದ್ದಾರೆ. ಅವರ ಜತೆ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್, ಏಮ್ಸ್ ನಿರ್ದೇಶಕ ಡಾ.ಗುಲೇರಿಯಾ ಸಹ ಉಪಸ್ಥಿತರಿರುವ ಸಾಧ್ಯತೆಯಿದೆ. ಸುದ್ದಿಗೋಷ್ಠಿಯಲ್ಲಿ ದೇಶದಲ್ಲಿ ಕೊವಿಡ್ ಇಳಿಮುಖವಾಗುತ್ತಿದೆ ಎಂದು ಲವ್ ಅಗರ್ವಾಲ್ ಮಾಹಿತಿ ನೀಡಿದ್ದರು. ಜತೆಗೆ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್, ಕೊರೊನಾ ಸೋಂಕಿಗೂ ಮೊದಲೇ ಬ್ಲ್ಯಾಕ್ ಫಂಗಸ್ ಸೋಂಕು ಇತ್ತು. ಹೆಚ್ಚಾಗಿ ಡಯಾಬಿಟಿಸ್ ಇರುವವರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಿವೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಸ್ಥಿರವಾಗುತ್ತಿದೆ. ಪಾಸಿಟಿವಿಟಿ ಪ್ರಮಾಣ, ಸಕ್ರಿಯ ಕೇಸ್ ಸಂಖ್ಯೆ ಕುಸಿತವಾಗುತ್ತಿದೆ. ಯಾವುದೇ ರಾಜ್ಯಕ್ಕೆ ಕೊವಿಡ್ ಲಸಿಕೆ ಕೊರತೆಯಾದರೆ ತುರ್ತಾಗಿ ಪೂರೈಸುತ್ತೇವೆ ಎಂದ ಕೊವಿಡ್ ಚಿಕಿತ್ಸೆ ವೇಳೆ ಅನಗತ್ಯವಾಗಿ ಸ್ಟಿರಾಯ್ಡ್ ಅನ್ನು ಬಳಸಬಾರದು ಎಂದು ವಿವರಿಸಿದ್ದರು.
(Union Health Secretary PC Live Luv Agarwal briefing on Coronavirus situation in India MOHFW Updates in Kannada)