ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ 18-44 ವರ್ಷ ವಯಸ್ಸಿನವರಿಗೆ ನೇರ ನೋಂದಣಿ, ಲಸಿಕೆ ವ್ಯರ್ಥವಾಗದಂತೆ ಕ್ರಮ: ಕೇಂದ್ರ ಆರೋಗ್ಯ ಸಚಿವಾಲಯ

|

Updated on: May 24, 2021 | 5:56 PM

Walk-in Vaccine Registration: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 18-44 ವಯೋಮಾನದವರಿಗೆ ಚುಚ್ಚುಮದ್ದು ನೀಡಲು ಆನ್‌ಲೈನ್ ಅಪಾಯಿಂಟ್ಮೆಂಟ್​ಗಳನ್ನು ಕಡ್ಡಾಯಗೊಳಿಸುವುದರಿಂದ  ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಜನದಟ್ಟಣೆ ತಡೆಯಲಾಗುತ್ತಿತ್ತು . ಆದರೆ ಲಸಿಕೆ ವ್ಯರ್ಥವಾಗುವುದನ್ನು ತಡೆಗಟ್ಟುವ ಸಲುವಾಗಿ ಈ ವಯಸ್ಸಿನವರಿಗೆ ನೇರ ನೋಂದಣಿಯನ್ನು ಈಗ ತೆರೆಯಲಾಗಿದೆ.

ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ 18-44 ವರ್ಷ ವಯಸ್ಸಿನವರಿಗೆ ನೇರ ನೋಂದಣಿ, ಲಸಿಕೆ ವ್ಯರ್ಥವಾಗದಂತೆ ಕ್ರಮ: ಕೇಂದ್ರ ಆರೋಗ್ಯ ಸಚಿವಾಲಯ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: 18-44 ವರ್ಷ ವಯಸ್ಸಿನವರು ಕೊವಿಡ್-19 ಲಸಿಕೆ ಹಾಕಿಸಿಕೊಳ್ಳಲು ಅನುಕೂಲವಾಗುವಂತೆ ಲಸಿಕಾ ಕೇಂದ್ರದಲ್ಲಿಯೇ  ಕೊವಿನ್ App ನಲ್ಲಿ ನೇರ ನೋಂದಣಿ (ಆನ್-ಸೈಟ್) ಸಕ್ರಿಯಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ, ಈ ವೈಶಿಷ್ಟ್ಯವನ್ನು ಕೇವಲ ಸರ್ಕಾರಿ ಕೊವಿಡ್ ಲಸಿಕೆ ಕೇಂದ್ರಗಳಲ್ಲಿ ಮಾತ್ರ ಸಕ್ರಿಯಗೊಳಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಈ ವೈಶಿಷ್ಟ್ಯವು ಖಾಸಗಿ ಕೊವಿಡ್ ಲಸಿಕೆ ಕೇಂದ್ರಗಳಲ್ಲಿ ಲಭ್ಯವಿರುವುದಿಲ್ಲ ಮತ್ತು ಅವರು ತಮ್ಮ ಲಸಿಕಾ ವೇಳಾಪಟ್ಟಿಗಳನ್ನು ಆನ್‌ಲೈನ್ ಅಪಾಯಿಂಟ್ಮೆಂಟ್‌ಗಳಿಗಾಗಿ ಸ್ಲಾಟ್‌ಗಳೊಂದಿಗೆ ಪ್ರತ್ಯೇಕವಾಗಿ ಪ್ರಕಟಿಸಬೇಕಾಗುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 18-44 ವಯೋಮಾನದವರಿಗೆ ಚುಚ್ಚುಮದ್ದು ನೀಡಲು ಆನ್‌ಲೈನ್ ಅಪಾಯಿಂಟ್ಮೆಂಟ್​ಗಳನ್ನು ಕಡ್ಡಾಯಗೊಳಿಸುವುದರಿಂದ  ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಜನದಟ್ಟಣೆ ತಡೆಯಲಾಗುತ್ತಿತ್ತು . ಆದರೆ ಲಸಿಕೆ ವ್ಯರ್ಥವಾಗುವುದನ್ನು ತಡೆಗಟ್ಟುವ ಸಲುವಾಗಿ ಈ ವಯಸ್ಸಿನವರಿಗೆ ನೇರ ನೋಂದಣಿಯನ್ನು ಈಗ ತೆರೆಯಲಾಗಿದೆ.


“ಆನ್‌ಲೈನ್ ಸ್ಲಾಟ್‌ಗಳೊಂದಿಗೆ ಪ್ರತ್ಯೇಕವಾಗಿ ಆಯೋಜಿಸಲಾದ ಸೆಷನ್‌ಗಳಲ್ಲಿ  ದಿನದ ಅಂತ್ಯದ ವೇಳೆಗೆ, ಆನ್‌ಲೈನ್ ಅಪಾಯಿಂಟ್ಮೆಂಟ್‌ ಫಲಾನುಭವಿಗಳು ಯಾವುದೇ ಕಾರಣಗಳಿಂದಾಗಿ ವ್ಯಾಕ್ಸಿನೇಷನ್ ದಿನದಂದು ಹಾಜರಾಗದಿದ್ದಲ್ಲಿ ಕೆಲವು ಡೋಸ್​ಗಳನ್ನು ಇನ್ನೂ ಬಳಸದೆ ಬಿಡಬಹುದು. ಅಂತಹ ಸಂದರ್ಭಗಳಲ್ಲಿ, ಲಸಿಕೆ ವ್ಯರ್ಥವನ್ನು ಕಡಿಮೆ ಮಾಡಲು ಕೆಲವು ಫಲಾನುಭವಿಗಳ ಆನ್-ಸೈಟ್ ನೋಂದಣಿ ಅಗತ್ಯವಾಗಬಹುದು ಎಂದು ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಆದಾಗ್ಯೂ, ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕೇಂದ್ರವು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಅಧಿಕಾರ ನೀಡಿದೆ. ಲಸಿಕೆ ವ್ಯರ್ಥವನ್ನು ಕಡಿಮೆ ಮಾಡಲು ಮತ್ತು ಅರ್ಹ ಫಲಾನುಭವಿಗಳಿಗೆ ಲಸಿಕೆ ಹಾಕಲು ಅನುಕೂಲವಾಗುವಂತೆ ಸ್ಥಳೀಯ ಪರಿಸ್ಥಿತಿ ಆಧಾರದ ಮೇಲೆ 18-44 ವರ್ಷ ವಯಸ್ಸಿನವರಿಗೆ ಆನ್-ಸೈಟ್ ನೋಂದಣಿ / ಸುಗಮ ಸಮೂಹಗಳ ನೋಂದಣಿ ಮತ್ತು ಅಪಾಯಿಂಟ್ಮೆಂಟ್‌ಗಳನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ನಿರ್ಧರಿಸಬೇಕು ಎಂದು ಸಚಿವಾಲಯ ಹೇಳಿದೆ.

ಖಾಸಗಿ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ವಾಕ್-ಇನ್ ವ್ಯಾಕ್ಸಿನೇಷನ್ ಅನ್ನು ಅನುಮತಿಸಲಾಗುವುದಿಲ್ಲ ಮತ್ತು ಇದು ಆನ್‌ಲೈನ್ ಅಪಾಯಿಂಟ್ಮೆಂಟ್‌ಗಳಿಗಾಗಿ ಸ್ಲಾಟ್‌ಗಳೊಂದಿಗೆ ಪ್ರತ್ಯೇಕವಾಗಿ ತಮ್ಮ ವ್ಯಾಕ್ಸಿನೇಷನ್ ವೇಳಾಪಟ್ಟಿಯನ್ನು ಪ್ರಕಟಿಸುವುದನ್ನು ಮುಂದುವರಿಸಬೇಕಾಗುತ್ತದೆ.

ಸಂಬಂಧಿತ ಬೆಳವಣಿಗೆಯೊಂದರಲ್ಲಿ, ಮುಂಬೈಯಲ್ಲಿ ಹಾಲುಣಿಸುವ ಮಹಿಳೆಯರಿಗೆ ಬಿಎಂಸಿ ವಾಕ್-ಇನ್ ಲಸಿಕೆ ನೀಡಲು ಅನುಮತಿ ನೀಡಿದೆ. ಹೆರಿಗೆಯ ನಂತರದ ಹಾಲುಣಿಸುವ ಮಹಿಳೆಯರಿಗೆ ವಿಶೇಷ ಗಮನ ನೀಡುವಂತೆ ಹೆಚ್ಚುವರಿ ಪುರಸಭೆ ಆಯುಕ್ತ ಸುರೇಶ್ ಕಾಕನಿ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.

ಏತನ್ಮಧ್ಯೆ, 18 ರಿಂದ 44 ವಯಸ್ಸಿನವರಿಗೆ ಆನ್-ಸೈಟ್ ನೋಂದಣಿ ಮತ್ತು ಅಪಾಯಿಂಟ್ಮೆಂಟ್‌ ವೈಶಿಷ್ಟ್ಯವನ್ನು ಬಳಸುವ ವ್ಯಾಪ್ತಿ ಮತ್ತು ವಿಧಾನದ ಬಗ್ಗೆ ಆಯಾ ರಾಜ್ಯ / ಕೇಂದ್ರಾಡಳಿತ ಸರ್ಕಾರಗಳ ನಿರ್ಧಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಜಿಲ್ಲಾ ಇಮ್ಯುನೈಜೇಷನ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರವು ತಿಳಿಸಿದೆ.

ವಾಕ್-ಇನ್  ಲಸಿಕೆಗಳನ್ನು ತೆರೆಯುವುದರಿಂದ ಜನದಟ್ಟಣೆ ಹೆಚ್ಚಾಗದಂತೆ ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಎಚ್ಚರಿಕೆ ವಹಿಸಬೇಕು ಎಂದು ಅದು ಹೇಳಿದೆ.

ಇದನ್ನೂ ಓದಿ: WHO ಪಟ್ಟಿಯಲಿಲ್ಲ ಕೊವ್ಯಾಕ್ಸಿನ್.. ಲಸಿಕೆಗೆ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರ, ಭಾರತ್ ಬಯೋಟೆಕ್ ಸರ್ಕಸ್

Vaccine Tourism: ಲಸಿಕೆ ಪ್ರವಾಸೋದ್ಯಮ; ಕೈಯಲ್ಲಿ ಹಣವಿದ್ದವರು ವಿದೇಶಕ್ಕೆ ತೆರಳಿ ಕೊವಿಡ್ ಲಸಿಕೆ ಹಾಕಿಸಿಕೊಂಡು ಬರಬಹುದೇ?