Vaccine Tourism: ಲಸಿಕೆ ಪ್ರವಾಸೋದ್ಯಮ; ಕೈಯಲ್ಲಿ ಹಣವಿದ್ದವರು ವಿದೇಶಕ್ಕೆ ತೆರಳಿ ಕೊವಿಡ್ ಲಸಿಕೆ ಹಾಕಿಸಿಕೊಂಡು ಬರಬಹುದೇ?

Covid Jabs in Abroad: ಸ್ಪುಟ್ನಿಕ್ ವಿ ಲಸಿಕೆಯ 2 ಡೋಸ್ ಪಡೆಯುವ ನಡುವಿನ 20 ದಿನಗಳಲ್ಲಿ ರಷ್ಯಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವೂ ಈ ಪ್ಯಾಕೇಜ್​ನಲ್ಲಿತ್ತು. ಆದರೆ ಕೆಲವೇ ದಿನಗಳಲ್ಲಿ, ಆ ಕಂಪನಿಯ ವೆಬ್​ಸೈಟ್​ನಿಂದ ಲಸಿಕೆ ಪ್ರವಾಸೋದ್ಯಮದ ಪ್ಯಾಕೇಜ್ ಮಾಯವಾಯಿತು. ಹಾಗಾದರೆ ಏನಿದು ಲಸಿಕೆ ಪ್ರವಾಸೋದ್ಯಮ?

Vaccine Tourism: ಲಸಿಕೆ ಪ್ರವಾಸೋದ್ಯಮ; ಕೈಯಲ್ಲಿ ಹಣವಿದ್ದವರು ವಿದೇಶಕ್ಕೆ ತೆರಳಿ ಕೊವಿಡ್ ಲಸಿಕೆ ಹಾಕಿಸಿಕೊಂಡು ಬರಬಹುದೇ?
ಸಂಗ್ರಹ ಚಿತ್ರ
Follow us
guruganesh bhat
| Updated By: ಆಯೇಷಾ ಬಾನು

Updated on: May 24, 2021 | 7:30 AM

ನಾನು ಲಸಿಕೆ ಹಾಕಿಸಿಕೊಂಡೆ, ನಿಂದಾಯ್ತಾ? ಎಂದು ಪಕ್ಕದ ಮನೆಯವರ ಕೇಳಿದ್ದೇ ತಡ, ಇವನಿಗೆ ತಲೆ ಕೆಟ್ಟೇ ಹೋಯಿತು. ಮೊದಲು ಯಾವುದೋ ಗುಂಗಿನಲ್ಲಿ ಲಸಿಕೆ ಹಾಕಿಸಿಕೊಳ್ಳಲಿಲ್ಲ. ಈಗ ಹಾಕಿಸಿಕೊಳ್ಳುವಾ ಎಂದರೆ ಲಸಿಕೆಯೇ ಇಲ್ಲ. ಇನ್ನೆಷ್ಟು ದಿನ ಕಾಯಬೇಕೋ..ಎಂದು ಹಣೆ ಚಚ್ಚಿಕೊಂಡವನಿಗೆ ಒಂದುಕ್ಷಣ ವಿದೇಶಗಳಲ್ಲಿ ಲಸಿಕೆ ವಿತರಣೆ ಹೇಗೆ ಆಗುತ್ತಿದೆ ಎಂಬ ಯೋಚನೆ ಮೂಡದಿರಲ್ಲ. ಕೈಯಲ್ಲಿ ದುಡ್ಡಿದ್ದರೆ ವಿದೇಶಕ್ಕೆ ಹೋಗಾದರೂ ಸರಿ, ಲಸಿಕೆ ಹಾಕಿಸ್ಕೋತೀನಿ ಎಂದು ಒಮ್ಮೆ ಹೇಳಿಕೊಂಡಿರುವವರೂ ಇದ್ದಾರೂ. ಇಲ್ಲಿ ನಾವು ವಿವರಿಸುತ್ತಿರುವ ಕಥೆ ಅದೇ, ಲಸಿಕೆ ಪ್ರವಾಸೋದ್ಯಮ!

ಕೆಲವು ದಿನಗಳ ಹಿಂದೆ ದುಬೈ ಮೂಲದ ಪ್ರವಾಸೋದ್ಯಮ ಕಂಪನಿಯೊಂದು ಭಾರತದ ನಾಗರಿಕರಿಗೆ ಒಂದು ಯೋಜನೆ ರೂಪಿಸಿತ್ತು. ದೆಹಲಿಯಿಂದ ರಷ್ಯಾ ರಾಜಧಾನಿ ಮಾಸ್ಕೋಕ್ಕೆ ಹೋಗಿಬರುವ 24 ದಿನಗಳ ಪ್ಯಾಕೇಜ್ ಅದು. ಅರೆ! ಈ ಕೊವಿಡ್ ಜಂಜಾಟದಲ್ಲಿ ಈಗೆಂತ ರಷ್ಯಾಕ್ಕೆ ಪ್ರವಾಸ ಹೋಗುವುದು ಎಂದುಕೊಂಡಿರಾ? ಅಲ್ಲೇ ಇದೆ ವಿಶೇಷ. ದೆಹಲಿಯಿಂದ ಮಾಸ್ಕೋಕ್ಕೆ ಹೋಗಿ ರಷ್ಯಾದ ಸ್ಪುಟ್ನಿಕ್ ವಿ ಕೊವಿಡ್ ಲಸಿಕೆಯ ಎರಡೂ ಡೋಸ್ ಪಡೆದುಕೊಂಡು ಮರಳಿ ಭಾರತಕ್ಕೆ ಬರುವ ಅಪರೂಪದ ಪ್ರವಾಸದ ಆಫರ್ ನೀಡಿತ್ತು ಕಂಪೆನಿ. ಹಣ ಮಾತ್ರ ಬರೋಬ್ಬರಿ 1.24 ಲಕ್ಷ ಮಾತ್ರ.

ಸ್ಪುಟ್ನಿಕ್ ವಿ ಲಸಿಕೆಯ 2 ಡೋಸ್ ಪಡೆಯುವ ನಡುವಿನ 20 ದಿನಗಳಲ್ಲಿ ರಷ್ಯಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವೂ ಈ ಪ್ಯಾಕೇಜ್​ನಲ್ಲಿತ್ತು. ಆದರೆ ಕೆಲವೇ ದಿನಗಳಲ್ಲಿ, ಆ ಕಂಪನಿಯ ವೆಬ್​ಸೈಟ್​ನಿಂದ ಲಸಿಕೆ ಪ್ರವಾಸೋದ್ಯಮದ ಪ್ಯಾಕೇಜ್ ಮಾಯವಾಯಿತು. ಹಾಗಾದರೆ ಏನಿದು ಲಸಿಕೆ ಪ್ರವಾಸೋದ್ಯಮ?

ವಿಶ್ವದ ಬಹುತೇಕ ದೇಶಗಳ ಬಳಿ ಸ್ವಂತ ಕೊವಿಡ್ ಲಸಿಕೆ ತಯಾರಿಸಲು ಸಾಧ್ಯವಾಗಿಲ್ಲ. ಕೇವಲ ಕೆಲವೇ ಕೆಲವು ದೇಶಗಳು ಲಸಿಕೆ ತಯಾರಿಸಿವೆ. ಯಾವ ದೇಶದಲ್ಲಿ ಲಸಿಕೆ ಲಭ್ಯವಿದೆಯೋ ಅಲ್ಲಿಗೆ ಹೋಗಿ ಲಸಿಕೆ ಪಡೆಯುವ ಕಲ್ಪನೆಯೇ ಲಸಿಕೆ ಪ್ರವಾಸೋದ್ಯಮ. ಹಾಗಾದರೆ, ಸದ್ಯದ ಮಟ್ಟಿಗೆ ಭಾರತದಲ್ಲಿ ಲಸಿಕೆ ಪ್ರವಾಸೋದ್ಯಮ ಅಳವಡಿಕೆ ಆಗಲು ಸಾಧ್ಯವೇ ಎಂದು ಕೇಳಿದರೆ ಒಂದೇ ಉತ್ತರ, ಇಲ್ಲ. ಸದ್ಯ ದೇಶದಲ್ಲಿ ಕೊವಿಡ್ ಸೋಂಕಿನ ಪ್ರಮಾಣ ವಿಪರೀತ ಹೆಚ್ಚಿರುವುದರಿಂದ ಭಾರತದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹಲವು ದೇಶಗಳು ನಿರ್ಬಂಧ ವಿಧಿಸಿವೆ. ಹೀಗಾಗಿ ಲಸಿಕೆ ಪ್ರವಾಸೋದ್ಯಮ ನಮ್ಮಲ್ಲಿ ಕಾರ್ಯಸಾಧುವಂತೂ ಅಲ್ಲ. ಭಾರತೀಯ ಪ್ರವಾಸೋದ್ಯಮ ನಿರ್ವಹಣಾ ಸಂಸ್ಥೆಯ ಹಿರಿಯ ಸದಸ್ಯ ಸುಭಾಶ್ ಗೋಯೆಲ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಭಾರತದ ಪ್ರಯಾಣಿಕರ ಮೇಲಿನ ನಿರ್ಬಂಧ ತೆರವುಗೊಳಿಸಿದ ನಂತರ ಭಾರತೀಯರು ವಿದೇಶಗಳಿಗೆ ತೆರಳಿ ಲಸಿಕೆ ಪಡೆಯಬಹುದು ಎನ್ನುತ್ತಾರೆ ಅವರು.

ಈಗಾಗಲೇ ಶುರುವಾಗಿದೆ ಲಸಿಕೆ ಪ್ರವಾಸೋದ್ಯಮ! ಲಸಿಕೆ ಪ್ರವಾಸೋದ್ಯಮ ಎಂಬ ಕಲ್ಪನೆ ಹುಟ್ಟಿದ್ದೇ ತಡ, ಕೆಲವು ದೇಶಗಳು ಈ ಕಲ್ಪನೆಯ ಮೂಲಕ ತಮ್ಮ ದೇಶದ ಪ್ರವಾಸೋದ್ಯಮವನ್ನು ವಿಸ್ತರಿಸುತ್ತಿವೆ. ಯೂರೋಪಿಯನ್ ಯೂನಿಯನ್​ನ ಸ್ಯಾನ್ ಮ್ಯಾರಿನೋ ತನ್ನ ದೇಶಕ್ಕೆ ಇತರ ದೇಶಗಳಿಂದ ಪ್ರವಾಸಿಗಳು ಆಗಮಿಸಿ ಕೊವಿಡ್ ಲಸಿಕೆ ಪಡೆಯಲು ಅನುವು ಮಾಡಿಕೊಟ್ಟಿದೆ. ರಷ್ಯಾದಲ್ಲೂ ಈ ಯೋಜನೆ ಜಾರಿಗೆ ಬರುವ ಸಂಭವ ಹೆಚ್ಚಿದೆ. ಕೆನಡಾ ಮತ್ತು ದಕ್ಷಿಣ ಅಮೆರಿಕಾದ ಕೆಲವು ದೇಶಗಳ ನಾಗರಿಕರು ಲಸಿಕೆ ಪಡೆಯಲೆಂದೇ ವಿಮಾನವೇರಿ ಅಮೆರಿಕಕ್ಕೆ ಪ್ರವಾಸ ಮಾಡುವ ಸಾಧ್ಯತೆಯೂ ಇದೆ.

ಭಾರತೀಯರಿಗೂ ದೊರೆಯಬಹುದೇ ಅವಕಾಶ? ಸದ್ಯ ಭಾರತದಲ್ಲಿ ಲಸಿಕೆ ಪ್ರವಾಸೋದ್ಯಮ ಅಥವಾ ವ್ಯಾಕ್ಸಿನ್ ಟೂರಿಸಂ ಅನಧಿಕೃತ ಅಲ್ಲ. ಆದರೆ ಈ ವರ್ಷದ ಅಂತ್ಯದ ವೇಳೆಗೇ ಎಲ್ಲಾ ನಾಗರಿಕರಿಗೂ ಕೊವಿಡ್ ಲಸಿಕೆ ಸಿಗಲಿದೆ, ಮತ್ತೇಕೆ ವಿದೇಶಕ್ಕೆ ತೆರಳುತ್ತೀರಿ ಎಂದು ಸರ್ಕಾರದ ಮೂಲಗಳು ಪ್ರಶ್ನಿಸುತ್ತವೆ. ಸದ್ಯ ಜಾರಿಯಲ್ಲಿರುವ ಕಾನೂನು ಭಾರತೀಯರು ವಿದೇಶದಲ್ಲಿ ಲಸಿಕೆ ಪಡೆಯುವುದನ್ನು ನಿಷೇಧಿಸಿಲ್ಲ. ಆದರೆ ಭಾರತದ ಪ್ರಯಾಣಿಕರ ಮೇಲಿನ ನಿರ್ಬಂಧ ತೆರವುಗೊಳ್ಳಬೇಕಷ್ಟೇ. ಮತ್ತು ಮುಖ್ಯವಾಗಿ ಕೈಯಲ್ಲಿ ಅಷ್ಟು ದುಡ್ಡಿರಬೇಕು.

ಲಸಿಕೆ ಪಾಸ್​ಪೋರ್ಟ್ ಇದೆಯೇ ನಿಮ್ಮಲ್ಲಿ? ಈ ಕಲ್ಪನೆ ಇನ್ನೂ ಮುಂದುವರೆದು ಲಸಿಕೆ ಪಾಸ್​ಪೋರ್ಟ್​ನವರೆಗೂ ತಲುಪಿದೆ. ಕೊವಿಡ್ ಲಸಿಕೆ ಹಾಕಿಸಿಕೊಂಡ ಬಗ್ಗೆ ಅಧಿಕೃತ ದಾಖಲೆ ಇದ್ದಲ್ಲಿ ಮಾತ್ರ ಗಡಿಯೊಳಗೆ ಸೇರಿಸಿಕೊಳ್ಳುವುದಾಗಿ ಈಗಾಗಲೇ ಹಲವು ದೇಶಗಳು ಘೋಷಿಸಿವೆ. ಅದರಲ್ಲೂ ವಿಶೇಷವಾಗಿ ಯೂರೋಪಿಯನ್ ಯೂನಿಯನ್ ಈ ನಿರ್ಧಾರ ತಳೆದಿದೆ. ಹೀಗಾಗಿ ಭವಿಷ್ಯದಲ್ಲಿ ಕೊವಿಡ್ ಲಸಿಕೆ ಪಾಸ್​ಪೋರ್ಟ್ ಸಹ ವಿದೇಶ ಪ್ರಯಾಣಕ್ಕೆ ಕಡ್ಡಾಯವಾಗಬಹುದು.

ಇದನ್ನೂ ಓದಿ: Bengaluru Air: ಲಾಕ್​ಡೌನ್ ಪರಿಣಾಮ: ಬೆಂಗಳೂರು ನಗರದಲ್ಲಿ ಗಾಳಿಯ ಶುದ್ಧತೆ ಹೆಚ್ಚಳ

ಕೊವಿಡ್ 3ನೇ ಅಲೆಯಿಂದ ಮಕ್ಕಳಿಗೆ ಹೆಚ್ಚಿನ ಅಪಾಯ, ಭಾರತದಲ್ಲಿ ತಯಾರಿಸಿದ ಮೂಗಿಗೆ ಹಾಕುವ ಲಸಿಕೆ;ಗೇಮ್ ಚೇಂಜರ್; ಆಗುವ ಸಾಧ್ಯತೆ: ಸೌಮ್ಯ ಸ್ವಾಮಿನಾಥನ್

(What is Vaccine tourism can Indian travel to abroad to get Covid jabs all details in Kannada)

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್