ಮಧ್ಯಪ್ರದೇಶ: ಲಾಕ್​ಡೌನ್ ಪರಿಶೀಲನೆ ವೇಳೆ ಅಂಗಡಿ ಮಾಲೀಕನ ಕೆನ್ನೆಗೆ ಹೊಡೆದ ಎಡಿಎಂ, ವಿಡಿಯೊ ವೈರಲ್

Viral Video: ಅಂಗಡಿಯ ಶಟರ್ ಮುಚ್ಚಿತ್ತು. ಪೊಲೀಸರು ಬಂದು ಅದನ್ನು ಮೇಲೆತ್ತಿದ್ದಾರೆ. ಎಡಿಎಂ ನನ್ನ ಕೆನ್ನೆಗೆ ಬಾರಿಸಿದ್ದಾರೆ. ಪೊಲೀಸ್ ಲಾಠಿಯಿಂದ ಹೊಡೆದಿದ್ದಾರೆ ಎಂದು ಅಂಗಡಿ ಮಾಲೀಕ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ

ಮಧ್ಯಪ್ರದೇಶ: ಲಾಕ್​ಡೌನ್ ಪರಿಶೀಲನೆ ವೇಳೆ ಅಂಗಡಿ ಮಾಲೀಕನ ಕೆನ್ನೆಗೆ ಹೊಡೆದ ಎಡಿಎಂ, ವಿಡಿಯೊ ವೈರಲ್
ಅಂಗಡಿ ಮಾಲೀಕನ ಕೆನ್ನೆಗೆ ಬಾರಿಸಿದ ಎಡಿಎಂ

Updated on: May 24, 2021 | 6:58 PM

ಶಾಜಾಪುರ್: ಮಧ್ಯಪ್ರದೇಶದ ಶಾಜಾಪುರ್​ನಲ್ಲಿ ಕೊವಿಡ್ ಮಾರ್ಗಸೂಚಿ ಪರಿಶೀಲನೆಯ ವೇಳೆ ಹೆಚ್ಚುವರಿ ಜಿಲ್ಲಾ ಮೆಜಿಸ್ಟ್ರೇಟರ್ ಅಂಗಡಿ ಮಾಲೀಕರೊಬ್ಬರ ಕೆನ್ನೆಗೆ ಬಾರಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಅಂಗಡಿಯ ಶಟರ್ ಮುಚ್ಚಿತ್ತು. ಪೊಲೀಸರು ಬಂದು ಅದನ್ನು ಮೇಲೆತ್ತಿದ್ದಾರೆ. ಎಡಿಎಂ ನನ್ನ ಕೆನ್ನೆಗೆ ಬಾರಿಸಿದ್ದಾರೆ. ಪೊಲೀಸ್ ಲಾಠಿಯಿಂದ ಹೊಡೆದಿದ್ದಾರೆ ಎಂದು ಅಂಗಡಿ ಮಾಲೀಕ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಲಾಕ್​ಡೌನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸೂರಜ್​ಪುರ್ ಜಿಲ್ಲಾಧಿಕಾರಿ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿತ್ತು.ಈವಿಡಿಯೊ ವೈರಲ್ ಆದ ಬೆನ್ನಲ್ಲೇ ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಭಾನುವಾರ ಆ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದರು.

ಸುಮಾರು 3 ನಿಮಿಷಗಳ ಅವಧಿಯ ವಿಡಿಯೊದಲ್ಲಿ, ಜಿಲ್ಲೆಯಲ್ಲಿ ಲಾಕ್‌ಡೌನ್ ಮಾನದಂಡಗಳನ್ನು ಜಾರಿಗೊಳಿಸುವಾಗ ಜಿಲ್ಲಾಧಿಕಾರಿ ಒಬ್ಬ ವ್ಯಕ್ತಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂತು. ಆ ವ್ಯಕ್ತಿಯನ್ನು ಹೊಡೆಯಲು ತನ್ನ ಜೊತೆಯಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುತ್ತಿರುವುದು ವಿಡಿಯೊದಲ್ಲಿತ್ತು.

ರಣಬೀರ್ ಶರ್ಮಾ ಅವರನ್ನು ಸೆಕ್ರಟರಿಯೇಟ್ ಗೆ ವರ್ಗಾಯಿಸಲಾಗಿದ್ದು ಅವರ ಸ್ಥಾನಕ್ಕೆ ರಾಯಪುರ ಜಿಲಾ ಪಂಚಾಯತ್ ಸಿಇಒ ಗೌರವ್ ಕುಮಾರ್ ಸಿಂಗ್ ನೇಮಕ ಮಾಡಿದ್ದಾರೆ ಎಂದು ಭಾನುವಾರ ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.


ಈ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿದ ಐಎಎಸ್ ಅಸೋಸಿಯೇಷನ್ “ಇದು ಸ್ವೀಕಾರಾರ್ಹವಲ್ಲ ಮತ್ತು ಸೇವೆ ಮತ್ತು ನಾಗರಿಕತೆಯ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಸರ್ಕಾರಿ ನೌಕರರು ಇನ್ನೊಬ್ಬರ ಮೇಲೆ ಹೊಂದಿರಬೇಕು ಮತ್ತು ಎಲ್ಲಾ ಸಮಯದಲ್ಲೂ ಸಮಾಜಕ್ಕೆ ಉತ್ತಮವಾದುದವನ್ನು ನೀಡಬೇಕು. ಈ ಕಷ್ಟದ ಸಮಯದಲ್ಲಿ ಇದು ಹೆಚ್ಚು ಇರಬೇಕು ಎಂದಿದೆ.

ಇದನ್ನೂ ಓದಿ: ಔಷಧ ತರಲೆಂದು ಅಂಗಡಿಗೆ ಹೋಗುತ್ತಿದ್ದ ವ್ಯಕ್ತಿಗೆ ಕಪಾಳ ಮೋಕ್ಷ; ಜಿಲ್ಲಾಧಿಕಾರಿ ವರ್ಗಾಯಿಸುವಂತೆ ಛತ್ತೀಸ್​ಗಡ್​ ಸಿಎಂ ಆದೇಶ

ಹೇಗಿದ್ದಾರೆ ನೋಡಿ ಕರ್ನಾಟಕದ ಶಿಲ್ಪಾ ಶೆಟ್ಟಿ ಮಕ್ಕಳು; ವೈರಲ್​ ಆಯ್ತು ಕ್ಯೂಟ್​ ವಿಡಿಯೋ

Published On - 6:56 pm, Mon, 24 May 21