AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಔಷಧ ತರಲೆಂದು ಅಂಗಡಿಗೆ ಹೋಗುತ್ತಿದ್ದ ವ್ಯಕ್ತಿಗೆ ಕಪಾಳ ಮೋಕ್ಷ; ಜಿಲ್ಲಾಧಿಕಾರಿ ವರ್ಗಾಯಿಸುವಂತೆ ಛತ್ತೀಸ್​ಗಡ್​ ಸಿಎಂ ಆದೇಶ

ಜಿಲ್ಲಾಧಿಕಾರಿ ರಣಬೀರ್​ ಶರ್ಮಾ  ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಛತ್ತೀಸ್​ಗಡ್​ ಮುಖ್ಯಮಂತ್ರಿ ಭೂಪೇಶ್​ ಬಾಗೆಲ್​ ಭಾನುವಾರ ಸೂರಜ್​ಪುರ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ವರ್ಗಾಯಿಸುವಂತೆ ಆದೇಶ ಹೊರಡಿಸಿದ್ದಾರೆ.

ಔಷಧ ತರಲೆಂದು ಅಂಗಡಿಗೆ ಹೋಗುತ್ತಿದ್ದ ವ್ಯಕ್ತಿಗೆ ಕಪಾಳ ಮೋಕ್ಷ; ಜಿಲ್ಲಾಧಿಕಾರಿ ವರ್ಗಾಯಿಸುವಂತೆ ಛತ್ತೀಸ್​ಗಡ್​ ಸಿಎಂ ಆದೇಶ
shruti hegde
|

Updated on:May 23, 2021 | 1:37 PM

Share

ಛತ್ತೀಸ್​ಗಡ್​: ಛತ್ತೀಸ್​ಗಡದ ಸೂರಜ್​ಪುರದಲ್ಲಿ ಕೊವಿಡ್​19 ಸೋಂಕಿನ ತಡೆಗಟ್ಟುವಿಕೆಯ ದೃಷ್ಟಿಯಿಂದ ಜಾರಿಯಲ್ಲಿದ್ದ ಲಾಕ್​ಡೌನ್​ ಮಧ್ಯೆ ವ್ಯಕ್ತಿಯೋರ್ವ ಔಷಧಿಗಳನ್ನು ಖರೀದಿಸಲು ಹೊರಟಿದ್ದ. ಆ ವ್ಯಕ್ತಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಜಿಲ್ಲಾಧಿಕಾರಿ ರಣಬೀರ್​ ಶರ್ಮಾ  ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಛತ್ತೀಸ್​ಗಡ್​ ಮುಖ್ಯಮಂತ್ರಿ ಭೂಪೇಶ್​ ಬಾಗೆಲ್​ ಭಾನುವಾರ ಸೂರಜ್​ಪುರ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ವರ್ಗಾಯಿಸುವಂತೆ ಆದೇಶ ಹೊರಡಿಸಿದ್ದಾರೆ.

‘ಸೋಷಿಯಲ್ ಮೀಡಿಯಾದ ಮೂಲಕ ಸೂರಜ್‌ಪುರ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಅವರು ಯುವಕನ ಮೇಲೆ ವರ್ತಿಸಿದ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಇದು ತುಂಬಾ ದುಃಖಕರ ಮತ್ತು ಖಂಡನೀಯ ವರ್ತನೆ. ಛತ್ತಿಸ್​ಗಡ್​ದಲ್ಲಿ, ಇಂತಹ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಭೂಪೇಶ್​ ಬಾಗೆಲ್ ಟ್ವೀಟ್​ ಮಾಡಿದ್ದಾರೆ.

ವಿಡಿಯೋದಲ್ಲಿ ಗಮನಿಸುವಂತೆ, ಜಿಲ್ಲಾಧಿಕಾರಿ ರಣಬೀರ್​ ಶರ್ಮಾ ಅವರ ಬಳಿ ವ್ಯಕ್ತಿ(ಸಾಹಿಲ್​ ಗುಪ್ತಾ) ಬರುತ್ತಿದ್ದಂತೆಯೇ ಗುರುತಿನ ಚೀಟಿಗಳನ್ನು ತೋರಿಸುತ್ತಾನೆ. ಆ ಬಳಿಕ ಜಿಲ್ಲಾಧಿಕಾರಿ ವ್ಯಕ್ತಿಯ ಮೊಬೈಲ್​ ಕೇಳುತ್ತಾರೆ, ವ್ಯಕ್ತಿ ಕೊಟ್ಟ ತಕ್ಷಣವೇ ಸಿಟ್ಟಿನಿಂದ ಮೊಬೈಲ್​ಅನ್ನು ರಸ್ತೆಗೆ ಬಿಸಾಡುತ್ತಾರೆ. ಹಾಗೂ ವ್ಯಕ್ತಿಗೆ ಕಪಾಳಮೋಕ್ಷ ಮಾಡುತ್ತಾರೆ.

ಆ ಬಳಿಕೆ ವ್ಯಕ್ತಿಗೆ ಹೊಡೆಯುವಂತೆ ಸುತ್ತಲಿರುವ ಪೊಲೀಸರಿಗೆ ಜಿಲ್ಲಾಧಿಕಾರಿ ಸೂಚಿಸುತ್ತಾರೆ. ನಡೆಯುತ್ತಿರುವ ಘಟನೆಯನ್ನು ವಿಡಿಯೋದಲ್ಲಿ ಸೆರೆ ಹಿಡಿಯುತ್ತಿರುವವರಿಗೆ ಜಿಲ್ಲಾಧಿಕಾರಿ ಗದರುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

‘ನಾನು ಔಷಧ ತರಲೆಂದು ಅಂಗಡಿಗೆ ಹೋಗುತ್ತಿದೆ. ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಔಷಧದ ಅಂಗಡಿಗೆ ಹೋಗುತ್ತಿರುವ ವಿಷಯ ತಿಳಿಸಿದೆ. ಅವರು ನನಗೆ ಹೊಡೆಯಲು ಪ್ರಾರಂಭಿಸಿದರು. ಹಾಗೂ ಸುತ್ತಲಿದ್ದ ಪೊಲೀಸರ ಬಳಿಯೂ ಹೊಡೆಯುವಂತೆ ಹೇಳಿದ್ದಾರೆ ಎಂದು ಸಾಹಿಲ್​ ಗುಪ್ತಾ ಹೇಳಿದ್ದಾರೆ.

ಇಂದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್​ ಆಗಿದ್ದು, ಲಾಕ್​ಡೌನ್​ ಸಮಯದಲ್ಲಿ ಹೊರಗಿದ್ದ ವ್ಯಕ್ತಿಗೆ ಕಪಾಳ ಮೋಕ್ಷ ಮಾಡುತ್ತಿರುವ ಘಟನೆಯನ್ನು ತೋರಿಸುತ್ತದೆ. ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ವಿಡಿಯೋದಲ್ಲಿರುವ ವ್ಯಕ್ತಿಯನ್ನು ಅಗೌರವಗೊಳಿಸುವುದಾಗಲೀ ಅಥವಾ ಅವರ ಗೌರವವನ್ನು ಕಡಿಮೆ ಮಾಡುವ ಉದ್ದೇಶ ನನಗಿರಲಿಲ್ಲ. ಆದರೆ ಅವರು ನಹಲಿ ಗುರುತಿನ ಚೀಟಿಯನ್ನು ಹೊಂದಿದ್ದರು ಎಂದು ಜಿಲ್ಲಾಧಿಕಾರಿ ಶರ್ಮಾ ಹೇಳಿದ್ದಾರೆ.

‘ಈ ಸಾಂಕ್ರಾಮಿಕದಿಂದ ಛತ್ತೀಸ್​ಗಡ್​ ಸೂರಜ್​ಪುರ ಜಿಲ್ಲೆ ಬೇಸತ್ತಿದೆ. ಅದೆಷ್ಟೋ ಜನರು ಸಾವಿಗೀಡಾಗಿದ್ದಾರೆ. ಸರ್ಕಾರಿ ನೌಕರರೆಲ್ಲರೂ ಸೇರಿ ಈ ಸಮಸ್ಯೆಯಿಂದ ಮುಕ್ತರಾಗಲು ಶ್ರಮಿಸುತ್ತಿದ್ದೇವೆ. ನನ್ನ ಪೋಷಕರು ಮತ್ತು ನಾನೂ ಕೂಡಾ ಕೊರೊನಾವೈರಸ್​ನಿಂದ ಪ್ರಭಾವಿತರಾಗಿದ್ದೆವು. ನಾನು ಗುಣಮುಖನಾಗಿದ್ದೇನೆ. ಆದರೆ ನನ್ನ ತಾಯಿ ಇನ್ನೂ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಉಲ್ಲೇಖವಾದಂತೆ ಆ ವ್ಯಕ್ತಿ ಚಿಕ್ಕವನೇನಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊವಿಡ್​ 19 ಲಸಿಕೆ ಪ್ರಮಾಣಪತ್ರದ ಮೇಲೆ ಪ್ರಧಾನಿ ಬದಲು ಮುಖ್ಯಮಂತ್ರಿ ಫೋಟೋ; ನೋಂದಣಿ ಆ್ಯಪ್​ ಕೂಡ ಬದಲಿಸಿದ ಛತ್ತೀಸ್​ಗಡ್​

Published On - 12:36 pm, Sun, 23 May 21