Black Fungus ಬ್ಲಾಕ್ ಫಂಗಸ್ಗೆ ಹೋಮಿಯೋಪತಿ ಚಿಕಿತ್ಸೆ ಸೂಚಿಸಿದ ಆಯುಷ್ ಇಲಾಖೆ
ಸೂಚನೆಗಳ ಪ್ರಕಾರ ಈ ಕೆಳಗಿನ ಔಷಧಿಗಳನ್ನು ಒಂದು ಸಮಯದಲ್ಲಿ ಪ್ರತ್ಯೇಕವಾಗಿ ಸಲಹೆಯ ಮೇರೆಗೆ ಮತ್ತು ಮ್ಯೂಕಾರ್ಮೈಕೋಸಿಸ್ ಚಿಕಿತ್ಸೆಯಲ್ಲಿ ಅರ್ಹ ಹೋಮಿಯೋಪತಿ ವೈದ್ಯರ ಮೇಲ್ವಿಚಾರಣೆಯಲ್ಲಿ ಬಳಸಬಹುದು ಎಂದು ಆಯುಷ್ ನಿರ್ದೇಶಕಿ ಅಲಗು ವರ್ಷಿಣಿ ಅವರು ಎಚ್ಚರಿಸಿದ್ದಾರೆ.
ದೆಹಲಿ: ಕೊವಿಡ್-19 ರೋಗದಿಂದ ಚೇತರಿಸಿಕೊಳ್ಳುವ ರೋಗಿಗಳಿಗೆ ಆಯುಷ್ ಇಲಾಖೆಯು ಹೋಮಿಯೋಪತಿ ಪ್ರಿಸ್ಕ್ರಿಪ್ಷನ್ ಸೂಚಿಸಿದೆ. ಕೊವಿಡ್ಗೊಳಗಾಗಿದ್ದ ರೋಗಿಗಳಿಗೆ ಚಿಕಿತ್ಸೆ ವೇಳೆ ಸ್ಟೆರಾಯ್ಡ್ ಬಳಕೆಯಿಂದಾಗಿ ಮಧುಮೇಹ ಬಂದಿದ್ದರೆ ಅಥವಾ ಈ ಹಿಂದೆಯೇ ಮಧುಮೇಹಿಗಳಾಗಿದ್ದರೆ ಅವರು ಬ್ಲಾಗ್ ಫಂಗಸ್ (Mucormycosis) ರೋಗಕ್ಕೊಳಗಾಗುವ ಸಾಧ್ಯತೆ ಜಾಸ್ತಿ ಇರುತ್ತದೆ.
ರಾಮಂತಪುರದ ಜೆಎಸ್‌ಪಿಎಸ್ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ಆಯುಷ್ ನಿರ್ದೇಶಕಿ ಅಲಗು ವರ್ಷಿಣಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ತೀವ್ರ ದುರ್ಬಲ ಸ್ಥಿತಿಯಲ್ಲಿರುವ ರೋಗಿಗಳನ್ನು ಗುಣಪಡಿಸುವುದಕ್ಕಾಗಿ, ಈ ಕೆಳಗಿನ ಔಷಧಿಗಳನ್ನು ನೀಡುವ ಮೂಲಕ ಮ್ಯೂಕೋರ್ಮೈಕೋಸಿಸ್ ಅನ್ನು ತಡೆಯಬಹುದು ಎಂದಿದ್ದಾರೆ. ಅವರು ಹೇಳಿದ ಔಷಧಿಗಳು ಆರ್ಸೆನಿಕ್- Alb 200 (ಪ್ರತಿದಿನ ಎರಡು ಬಾರಿ, 5 ದಿನಗಳವರೆಗೆ ಪ್ರತಿ ಬಾರಿ ಆರು ಮಾತ್ರೆಗಳು) ಮತ್ತು ಐದು ಫೋಸ್ 6x ಟ್ಯಾಬ್ಲೆಟ್‌ಗಳು (ಪ್ರತಿದಿನ ಎರಡು ಬಾರಿ, ಮೂರು ಮಾತ್ರೆಗಳು ಪ್ರತಿ ಬಾರಿ 30 ದಿನಗಳವರೆಗೆ) ಎಂದು ದಿ ಹಿಂದು ಪತ್ರಿಕೆ ವರದಿ ಮಾಡಿದೆ.
ಹೋಮಿಯೋಪತಿ ಔಷಧಿಯು ವೈಯಕ್ತಿಕ ಸ್ಥಿತಿಗತಿಗಳನ್ನು ಆಧರಿಸಿದ ಔಷಧಿ ವ್ಯವಸ್ಥೆ ಆಗಿದ್ದು ಮ್ಯೂಕಾರ್ಮೈಕೋಸಿಸ್ ಇದಕ್ಕೆ ಹೊರತಾಗಿಲ್ಲವಾದ್ದರಿಂದ, ಪ್ರತಿ ಪ್ರಕರಣದಲ್ಲಿ ವೈಯಕ್ತಿಕವಾದ ರೀತಿ ನೀತಿಯನ್ನು ಕಟ್ಟುನಿಟ್ಟಾಗಿ ನೋಡಬೇಕು. ಸೂಚನೆಗಳ ಪ್ರಕಾರ ಈ ಕೆಳಗಿನ ಔಷಧಿಗಳನ್ನು ಒಂದು ಸಮಯದಲ್ಲಿ ಪ್ರತ್ಯೇಕವಾಗಿ ಸಲಹೆಯ ಮೇರೆಗೆ ಮತ್ತು ಮ್ಯೂಕಾರ್ಮೈಕೋಸಿಸ್ ಚಿಕಿತ್ಸೆಯಲ್ಲಿ ಅರ್ಹ ಹೋಮಿಯೋಪತಿ ವೈದ್ಯರ ಮೇಲ್ವಿಚಾರಣೆಯಲ್ಲಿ ಬಳಸಬಹುದು ಎಂದು ಅವರು ಎಚ್ಚರಿಸಿದ್ದಾರೆ.
ರೆನೊಸೆರೆಬ್ರಲ್ ಮ್ಯೂಕಾರ್ಮೈಕೋಸಿಸ್ಗೆ, Arsenic-Alb, Kali Bich, Merc.Iod. Rubrum, Merc. Iod. Flavum, Merc. Sol, Cinnabaris, Thuja, Carbo Animalis; 200 potency, ಪ್ರತಿದಿನ ಎರಡು ಬಾರಿ 6 ಮಾತ್ರೆಗಳು ಪ್ರತಿ ಬಾರಿ 5 ದಿನಗಳವರೆಗೆ ಸೇವಿಸಬೇಕು. ಪಲ್ಮನರಿ ಮ್ಯೂಕಾರ್ಮೈಕೋಸಿಸ್ ಗೆ ಔಷಧ- Arsenic-Alb, Phosphorous, Bryonia, Carbo Animalis, Ant.Tart; 200 potency, ಪ್ರತಿದಿನ ಎರಡು ಬಾರಿ 6 ಮಾತ್ರೆಗಳು ಪ್ರತಿ ಬಾರಿ 5 ದಿನಗಳವರೆಗೆ.
ಕ್ಯುಟೇನಿಯಸ್ ಮ್ಯೂಕೋರ್ಮೈಕೋಸಿಸ್ ಸಂದರ್ಭದಲ್ಲಿ, Arsenic-Alb, Sulphur, Merc. sol, Anthracinum; 200 potency, ಪ್ರತಿದಿನ ಎರಡು ಬಾರಿ 6 ಮಾತ್ರೆಗಳು ಪ್ರತಿ ದಿನ 5 ದಿನಗಳವರೆಗೆ. ಅದೇ ವೇಳೆ ಗ್ಯಾಸ್ಟ್ರೊಇಂಟಸ್ಟೈ ನಲ್ ಮ್ಯೂಕೋರ್ಮೈಕೋಸಿಸ್ಗೆ- Arsenic-Alb, Phosphorous, Nitric Acid; 200 potency, ಪ್ರತಿದಿನ ಎರಡು ಬಾರಿ 6 ಮಾತ್ರೆಗಳು ಪ್ರತಿ ಬಾರಿ 5 ದಿನಗಳವರೆಗೆ.
ಇದಲ್ಲದೆ, ನಿರ್ದಿಷ್ಟ ಸಂದರ್ಭದಲ್ಲಿ ರೋಗಲಕ್ಷಣದ ಹೋಲಿಕೆಯನ್ನು ಆಧರಿಸಿ ಬೇರೆ ಯಾವುದೇ ಔಷಧಿಯನ್ನು ಸೂಚಿಸಬಹುದು ಎಂದು ಆಯುಷ್ ಹೇಳಿದೆ.
ಇದನ್ನೂ ಓದಿ: ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡ; ಶುರುವಾಗಿದೆ ಮತ್ತೊಂದು ಆತಂಕ