PM Modi on Cyclone Yaas: ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ
ಪ್ರಧಾನಿ ನರೇಂದ್ರ ಮೋದಿ: ಈ ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕಾರ (ಎನ್ ಡಿಎಂಎ), ದೂರಸಂಪರ್ಕ, ವಿದ್ಯುತ್, ನಾಗರಿಕ ವಿಮಾನಯಾನ, ಭೂ ವಿಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು ಭಾಗಿಯಾಗಿದ್ದಾರೆ.
ದೆಹಲಿ: ಯಾಸ್ ಚಂಡಮಾರುತದ ಪರಿಹಾರ ಕಾರ್ಯಗಳ ಸಿದ್ಧತೆ ಪರಿಶೀಲನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕಾರ (ಎನ್ ಡಿಎಂಎ), ದೂರಸಂಪರ್ಕ, ವಿದ್ಯುತ್, ನಾಗರಿಕ ವಿಮಾನಯಾನ, ಭೂ ವಿಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು ಭಾಗಿಯಾಗಿದ್ದಾರೆ.
PM Narendra Modi attends meeting with senior govt officials & reps from National Disaster Management Authority, Secretaries from Telecom, Power, Civil aviation, Earth Sciences Ministries reviewing preparations against approaching #CycloneYaas
Union HM Amit Shah was also present pic.twitter.com/612KZ6mr0y
— ANI (@ANI) May 23, 2021
ಗೃಹ ಸಚಿವರು ಮತ್ತು ಇತರ ಸಚಿವರು ಕೂಡ ಸಭೆಯಲ್ಲಿ ಸೇರಲಿದ್ದಾರೆ. ಬಂಗಾಳಕೊಲ್ಲಿಯಲ್ಲಿ ಬೀಸುತ್ತಿರುವ ಚಂಡಮಾರುತ ಯಾಸ್ ಮೇ 26 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆ ಇದೆ. ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಶನಿವಾರ ನಡೆದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್‌ಸಿಎಂಸಿ) ಸಭೆಯ ಅಧ್ಯಕ್ಷತೆ ವಹಿಸಿದ್ದರು. ಚಂಡಮಾರುತಕ್ಕಾಗಿ ಕೇಂದ್ರ ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಮತ್ತು ಏಜೆನ್ಸಿಗಳ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಪ್ರಾಣ ಹಾನಿ ಮತ್ತು ಆಸ್ತಿಪಾಸ್ತಿಗಳ ನಾಶವನ್ನು ಕಡಿಮೆ ಮಾಡಲು ಎಲ್ಲಾ ಕ್ರಮಗಳನ್ನು ಸಮಯೋಚಿತವಾಗಿ ತೆಗೆದುಕೊಳ್ಳಬೇಕು ಎಂದು ಗೌಬಾ ಒತ್ತಿ ಹೇಳಿದ್ದಾರೆ, ಆಸ್ಪತ್ರೆಗಳು ಮತ್ತು ಕೊವಿಡ್ ಆರೈಕೆ ಕೇಂದ್ರಗಳ ನಿರಂತರ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
#CycloneYaas | 18 NDRF teams pre-positioned at Balasore, Bhadrak, Kendrapara, Jajpur, Jagatsinghpur and Mayurbhanj and 4 teams on standby in Odisha: DG NDRF Satya Pradhan pic.twitter.com/E6BSSGPuKe
— ANI (@ANI) May 23, 2021
ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲು ರಾಜ್ಯ ಸರ್ಕಾರ 66 ODRAF, 22 ಎ NDR ಮತ್ತು 177 ಅಗ್ನಿಶಾಮಕ ದಳದ ತಂಡಗಳನ್ನು ಸಿದ್ಧಪಡಿಸಿದೆ. ವಿದ್ಯುತ್ ಮತ್ತು ನೀರು ಸರಬರಾಜು ಖಚಿತಪಡಿಸಿಕೊಳ್ಳಲು ಅಗತ್ಯ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ ಎಂದು ಒಡಿಶಾ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
I have extensively reviewed the Disaster Management preparedness with regards to the impending Yaas cyclone today afternoon with all senior officers of relevant Central & State agencies along with DMs & SPs.(1/3)
— Mamata Banerjee (@MamataOfficial) May 22, 2021
ಮೇ 26 ರಂದು ರಾಜ್ಯವನ್ನು ಅಪ್ಪಳಿಸುವ ಸಾಧ್ಯತೆ ಇರುವ ಯಾಸ್ ಚಂಡಮಾರುತವನ್ನು ಎದುರಿಸಲು ಪಶ್ಚಿಮ ಬಂಗಾಳ ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಪರಿಸ್ಥಿತಿ ಮೇಲ್ವಿಚಾರಣೆ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಿಯಂತ್ರಣ ಕೊಠಡಿಯಲ್ಲಿ ತಂಗಲಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಬೆಳಗ್ಗೆ ರಾಜ್ಯ ಕಾರ್ಯದರ್ಶಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಬ್ಯಾನರ್ಜಿ, ಪರಿಹಾರ ಸಾಮಗ್ರಿಗಳನ್ನು ದುರ್ಬಲ ಪ್ರದೇಶಗಳಿಗೆ ರವಾನಿಸಲಾಗಿದ್ದು, ಕರಾವಳಿ ಮತ್ತು ನದಿ ಪ್ರದೇಶಗಳಿಂದ ಜನರನ್ನು ಬೇಗನೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ:Cyclone Yaas: ಯಸ್ ಬಂದೇ ಬಿಡ್ತು ಯಾಸ್ ಚಂಡಮಾರುತ! ಏನಿದರ ಏರಿಳಿತಗಳು? ಯಾವಾಗ ಎಲ್ಲಿ ಸೈಕ್ಲೋನ್ ಮಳೆ ಸುರಿಯಲಿದೆ?
Published On - 11:36 am, Sun, 23 May 21