AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ukhrul Earthquake ಮಣಿಪುರದ ಉಕ್ರುಲ್‌ನಲ್ಲಿ ಭೂಕಂಪನ, ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲು

109 ಕಿ.ಮೀ ಆಳದಲ್ಲಿ ಉಕ್ರುಲ್‌ನ ಪೂರ್ವ-ಆಗ್ನೇಯಕ್ಕೆ 49 ಕಿ.ಮೀ ಭೂಕಂಪ ಸಂಭವಿಸಿದೆ. ಸ್ಥಳದ ಅಕ್ಷಾಂಶ ಮತ್ತು ರೇಖಾಂಶವನ್ನು 24.79 ಮತ್ತು 94.94 ಎಂದು ದಾಖಲಿಸಲಾಗಿದೆ. ಇನ್ನು ಕೆಲವರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.

Ukhrul Earthquake ಮಣಿಪುರದ ಉಕ್ರುಲ್‌ನಲ್ಲಿ ಭೂಕಂಪನ, ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲು
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on: May 23, 2021 | 9:05 AM

Share

ಉಖ್ರುಲ್: ಮಣಿಪುರದ ಉಕ್ರುಲ್‌ನಲ್ಲಿ ಇಂದು ಬೆಳಗ್ಗೆ 6.56ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆಯ ಭೂಕಂಪನವು ಮಣಿಪುರದ ಉಕ್ರುಲ್‌ನಲ್ಲಿ ಭಾನುವಾರ ಬೆಳಿಗ್ಗೆ 06.56 ಕ್ಕೆ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

109 ಕಿ.ಮೀ ಆಳದಲ್ಲಿ ಉಕ್ರುಲ್‌ನ ಪೂರ್ವ-ಆಗ್ನೇಯಕ್ಕೆ 49 ಕಿ.ಮೀ ಭೂಕಂಪ ಸಂಭವಿಸಿದೆ. ಸ್ಥಳದ ಅಕ್ಷಾಂಶ ಮತ್ತು ರೇಖಾಂಶವನ್ನು 24.79 ಮತ್ತು 94.94 ಎಂದು ದಾಖಲಿಸಲಾಗಿದೆ. ಇನ್ನು ಕೆಲವರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಕೊರೊನಾ ನಡುವೆ ಇತ್ತೀಚೆಗೆ ಚಂಡ ಮಾರುತಗಳ ಅಬ್ಬರ ಹೆಚ್ಚಾಗುತ್ತಿದ್ದು ಇದರ ನಡುವೆ ಭೂಕಂಪವಾಗಿದ್ದು ಈಶಾನ್ಯ ರಾಜ್ಯದಲ್ಲಿ ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ: ಅಸ್ಸಾಂನಲ್ಲಿ 6.4 ತೀವ್ರತೆಯ ಭಾರೀ ಭೂಕಂಪನ, ಹಲವು ಕಟ್ಟಡಗಳು ಬಿರುಕು