Coronavirus Cases in India: ಕಳೆದ 24 ಗಂಟೆಗಳಲ್ಲಿ 2.40 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 3741 ಮಂದಿ ಸಾವು
Covid 19 in India: ಇಲ್ಲಿಯವರೆಗೆ ದೇಶದಲ್ಲಿ 2,65,30,132 ಮಂದಿ ಕೊವಿಡ್ ರೋಗಿಗಳಿದ್ದು 2,99,266 ಮಂದಿ ಮೃತಪಟ್ಟಿದ್ದಾರೆ. ಎರಡನೇ ಅಲೆ ದೇಶಾದ್ಯಂತ ಸ್ಥಿರವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 2,40,842 ಹೊಸ ಕೊವಿಡ್ ಪ್ರಕರಣಗಳು ಮತ್ತು 3,741 ಸಾವು ವರದಿ ಆಗಿದೆ. ಇಲ್ಲಿಯವರೆಗೆ ದೇಶದಲ್ಲಿ 2,65,30,132 ಮಂದಿ ಕೊವಿಡ್ ರೋಗಿಗಳಿದ್ದು 2,99,266 ಮಂದಿ ಮೃತಪಟ್ಟಿದ್ದಾರೆ. ಎರಡನೇ ಅಲೆ ದೇಶಾದ್ಯಂತ ಸ್ಥಿರವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.ಏಳು ರಾಜ್ಯಗಳು 10,000 ಪ್ರಕರಣಗಳು ಮತ್ತು ಆರು ರಾಜ್ಯಗಳು ದಿನಕ್ಕೆ 5,000-10,000 ಪ್ರಕರಣಗಳನ್ನು ದಾಖಲಿಸುತ್ತಿವೆ. 93 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕುಸಿದಿದೆ. ಆದಾಗ್ಯೂ, ಸೋಂಕು ಹರಡದಂತೆ ನಿಯಂತ್ರಿಸಲು ದೇಶಾದ್ಯಂತ ರಾಜ್ಯಗಳು ಲಾಕ್ ಡೌನ್ ನಿರ್ಬಂಧವನ್ನು ಮತ್ತಷ್ಟು ಮುಂದುವರಿಸಿವೆ . ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗೋವಾ ಸರ್ಕಾರಗಳು ಮತ್ತೆ ಕರ್ಫ್ಯೂ ತರಹದ ನಿರ್ಬಂಧಗಳನ್ನು ಹೇರಿವೆ. ಅದೇ ವೇಳೆ ವ್ಯಾಕ್ಸಿನೇಷನ್ ಮತ್ತಷ್ಟು ವೇಗವಾಗಿಸಿವೆ.
India reports 2,40,842 new #COVID19 cases, 3,55,102 discharges & 3,741 deaths in last 24 hrs, as per Health Ministry.
Total cases: 2,65,30,132 Total discharges: 2,34,25,467 Death toll: 2,99,266 Active cases: 28,05,399
Total vaccination: 19,50,04,184 pic.twitter.com/dHSDL4JNq8
— ANI (@ANI) May 23, 2021
ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಯುಪಿ, ಪಂಜಾಬ್ ಮತ್ತು ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ಕೊವಿಡ್ -19 ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ, ಪ್ರಕರಣಗಳ ಭಾರಿ ಏರಿಕೆಯು ಅಭಿವೃದ್ಧಿಯಾಗದ ಗ್ರಾಮೀಣ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚು ಹೊರೆಯಾಗಿದೆ. ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ ಪೌಲ್ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೋಂಕಿತ ವ್ಯಕ್ತಿಗಳು ಹೋಮ್ ಐಸೋಲೇಷನ್ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಸಲಹೆಗಾಗಿ ಔಚಾರಿಕ ಆರೋಗ್ಯ ವ್ಯವಸ್ಥೆಗೆ ಸಂಪರ್ಕ ಹೊಂದಬೇಕು. ಹೀಗಿರುವಾಗ ಆಂಬ್ಯುಲೆನ್ಸ್ ಸೇವೆಯನ್ನು ಹೆಚ್ಚಿಸುವ ಮತ್ತು ಸಮಯಕ್ಕೆ ತಕ್ಕಂತೆ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಸತತ ಮೂರನೇ ದಿನ ದೇಶದಲ್ಲಿ ಸಕ್ರಿಯ ಪ್ರಕರಣಗಳು ಒಂದು ಲಕ್ಷಕ್ಕೂ ಹೆಚ್ಚು ಕಡಿಮೆಯಾಗಿದೆ. ದೇಶದಲ್ಲಿ ಪ್ರಸ್ತುತ 28.05 ಲಕ್ಷ ಸಕ್ರಿಯ ಪ್ರಕರಣಗಳಿವೆ. ಶನಿವಾರ ವರದಿಯಾದ 3,741 ಸಾವುಗಳಲ್ಲಿ ಮಹಾರಾಷ್ಟ್ರದಲ್ಲಿ 713, ತಮಿಳುನಾಡಿನಲ್ಲಿ 448, ಕರ್ನಾಟಕದಲ್ಲಿ 451 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ 19,50,04,184 ಮಂದಿಗೆ ಕೊವಿಡ್ ಲಸಿಕೆ ನೀಡಲಾಗಿದೆ.
ಕರ್ನಾಟಕದಲ್ಲಿಶನಿವಾರ 31,183 ಹೊಸ ಪ್ರಕರಣಗಳು ದಾಖಲಾಗಿದ್ದು, ಹಿಂದಿನ ದಿನ 29,673 ಪ್ರಕರಣಗಳಿಗೆ ಹೋಲಿಸಿದರೆ ಕೇರಳದಲ್ಲಿ 28,514 ಹೊಸ ಪ್ರಕರಣಗಳು ದಾಖಲಾಗಿವೆ. ತಮಿಳುನಾಡಿನಲ್ಲಿ 35,873 ಹೊಸ ಪ್ರಕರಣಗಳು ದಾಖಲಾಗಿವೆ (ಶನಿವಾರ 36,184 ಪ್ರಕರಣಗಳು ದಾಖಲಾಗಿವೆ) ಮತ್ತು ಆಂಧ್ರಪ್ರದೇಶದಲ್ಲಿ 19,981 ಹೊಸ ಪ್ರಕರಣಗಳು ದಾಖಲಾಗಿವೆ.
ಕೊವಿಡ್ ಹರಡುವಿಕೆಯನ್ನು ನಿಯಂತ್ರಿಸಲು ತಮಿಳುನಾಡು, ಕೇರಳ, ಕರ್ನಾಟಕವು ಲಾಕ್ ಡೌನ್ ವಿಸ್ತರಿಸಿದೆ. ಪ್ರಸರಣ ಸರಪಳಿಯನ್ನು ಮುರಿಯಲು ಅನೇಕ ರಾಜ್ಯಗಳು ಕಠಿಣ ನಿರ್ಬಂಧಗಳನ್ನು ಹೊಂದಿವೆ.
ಏಪ್ರಿಲ್‌ನಲ್ಲಿ 66.13 ಲಕ್ಷ ಪ್ರಕರಣಗಳು ಮತ್ತು ಮಾರ್ಚ್‌ನಲ್ಲಿ 10.25 ಲಕ್ಷ ಪ್ರಕರಣಗಳಿಗೆ ಹೋಲಿಸಿದರೆ ಭಾರತವು ಮೇ ತಿಂಗಳಲ್ಲಿ 77.67 ಲಕ್ಷ ಹೊಸ ಪ್ರಕರಣಗಳನ್ನು ದಾಖಲಿಸಿದೆ. ಈ ತಿಂಗಳಲ್ಲಿ ಇದುವರೆಗೆ 90 ಸಾವಿರಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ; ಏಪ್ರಿಲ್ ತಿಂಗಳಲ್ಲಿ 45,000 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ಮಾರ್ಚ್ ತಿಂಗಳಲ್ಲಿ 5,417 ಸಾವುಗಳು ವರದಿಯಾಗಿವೆ. ಫೆಬ್ರವರಿಯಲ್ಲಿ 2,777 ಮತ್ತು ಜನವರಿಯಲ್ಲಿ 5,536 ಸಾವುಗಳು ದಾಖಲಾಗಿವೆ.
ಇದನ್ನೂ ಓದಿ: ಕೊವಿಡ್ 19 ಲಸಿಕೆ ಪ್ರಮಾಣಪತ್ರದ ಮೇಲೆ ಪ್ರಧಾನಿ ಬದಲು ಮುಖ್ಯಮಂತ್ರಿ ಫೋಟೋ; ನೋಂದಣಿ ಆ್ಯಪ್ ಕೂಡ ಬದಲಿಸಿದ ಛತ್ತೀಸ್ಗಡ್
Published On - 10:34 am, Sun, 23 May 21