ಕೊವಿಡ್ ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಿ, ಪ್ರತಿಯೊಂದು ಜೀವವನ್ನು ಕಾಪಾಡಲು ನಾವು ಬದ್ಧ: ನರೇಂದ್ರ ಮೋದಿ

ಗುರುವಾರ ಹತ್ತು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೋದಿ ಲಸಿಕೆ ವ್ಯರ್ಥವಾಗುತ್ತಿರುವ ಸಮಸ್ಯೆ ಇದೆ. ಲಸಿಕೆಗಳನ್ನು ನಿಮ್ಮೆಲ್ಲರಿಗೂ ತಲುಪಿಸಿದಾಗ, ವ್ಯರ್ಥವಾಗದಂತೆ ನಾವು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.

ಕೊವಿಡ್ ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಿ, ಪ್ರತಿಯೊಂದು ಜೀವವನ್ನು ಕಾಪಾಡಲು ನಾವು ಬದ್ಧ: ನರೇಂದ್ರ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:May 20, 2021 | 2:26 PM

ದೆಹಲಿ: ಕೋವಿಡ್ ಲಸಿಕೆ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಜಿಲ್ಲಾ ಅಧಿಕಾರಿಗಳಿಗೆ ಹೇಳಿದ್ದಾರೆ. ಒಂದೇ ಒಂದು ಡೋಸ್ ವ್ಯರ್ಥವಾಗಿ ಹೋಗುವುದರಿಂದ ಇನ್ನೊಬ್ಬರಿಗೆ ರಕ್ಷಣೆಯ ಕವಚ ಇಲ್ಲದಂತಾಗುತ್ತದೆ ಎಂದಿದ್ದಾರೆ ಮೋದಿ.  ಗುರುವಾರ ಹತ್ತು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೋದಿ ಲಸಿಕೆ ವ್ಯರ್ಥವಾಗುತ್ತಿರುವ ಸಮಸ್ಯೆ ಇದೆ. ಲಸಿಕೆಗಳನ್ನು ನಿಮ್ಮೆಲ್ಲರಿಗೂ ತಲುಪಿಸಿದಾಗ, ವ್ಯರ್ಥವಾಗದಂತೆ ನಾವು ಖಚಿತಪಡಿಸಿಕೊಳ್ಳಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೀವೆಲ್ಲರೂ ಇದನ್ನು ಮೇಲ್ವಿಚಾರಣೆ ಮಾಡಬೇಕು. ಲಸಿಕೆ ವ್ಯರ್ಥವಾಗುವುದನ್ನು ನಿಲ್ಲಿಸುವುದು ನಿರ್ಣಾಯಕ ಮತ್ತು ನಮ್ಮಲ್ಲಿ ಯಾವುದೇ (ವ್ಯರ್ಥ) ಇಲ್ಲ ಎಂದು ನೀವು ಎಲ್ಲರೂ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಕೊರೊನವೈರಸ್ ಅಗೋಚರವಾಗಿರುತ್ತದೆ ಮತ್ತು ಬದಲಾಗುತ್ತಾ ರೂಪಾಂತರಗೊಳ್ಳುತ್ತಿರುತ್ತದೆ. ಆದ್ದರಿಂದ, ನಮ್ಮ ವಿಧಾನವು ಕ್ರಿಯಾತ್ಮಕವಾಗಿರಬೇಕು ಮತ್ತು ನಿರಂತರವಾಗಿ ನವೀಕರಿಸುತ್ತಿರಬೇಕು. ವೈರಸ್ ನಿಮ್ಮ ಕೆಲಸವನ್ನು ಹೆಚ್ಚು ಬೇಡಿಕೆಯ ಮತ್ತು ಸವಾಲಿನಂತೆ ಮಾಡಿದೆ. ಹೊಸ ಸವಾಲುಗಳ ಮಧ್ಯೆ, ನಮಗೆ ಹೊಸ ತಂತ್ರಗಳು ಮತ್ತು ಪರಿಹಾರಗಳು ಬೇಕಾಗುತ್ತವೆ. ಸ್ಥಳೀಯ ಅನುಭವಗಳನ್ನು ಬಳಸುವುದು ಮುಖ್ಯವಾಗುತ್ತದೆ ಮತ್ತು ನಾವು ಒಂದು ದೇಶವಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸಂವಾದದದಲ್ಲಿ ಮೋದಿ ಅವರು ಯುವಕರು ಮತ್ತು ಮಕ್ಕಳಲ್ಲಿ ಹೊಸ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೊರೊನಾವೈರಸ್ ರೂಪಾಂತರಗಳಿಂದಾಗಿ, ಯುವಕರು, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿಗಳಿವೆ. ನಾವು ಹೆಚ್ಚು ಸಿದ್ಧರಾಗಿರಬೇಕು. ಅವರವರ ಜಿಲ್ಲೆಗಳಲ್ಲಿ ಯುವಕರು ಮತ್ತು ಮಕ್ಕಳ ಕೊವಿಡ್ ಸೋಂಕಿನ ಬಗ್ಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಮೋದಿ ನಿರ್ದೇಶಿಸಿದ್ದಾರೆ.

ಗುರುವಾರ ನಡೆದ ಸಭೆ ಪ್ರಧಾನಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ನಡುವಿನ ಎರಡನೆಯ ಸಂವಾದವಾಗಿತ್ತು. ಮೊದಲ ಸಭೆ ಮೇ 18 ರಂದು, ಪ್ರಧಾನಿ ಮೋದಿ ಒಂಬತ್ತು ರಾಜ್ಯಗಳ 46 ಜಿಲ್ಲಾ ಅಧಿಕಾರಿಗಳ ಜತೆ ನಡೆಸಿದ್ದರು.

ಇಲ್ಲಿಯವರೆಗೆ, ಪ್ರಧಾನಿ ಮೋದಿ ಅವರು ದೇಶಾದ್ಯಂತದ ಮುಖ್ಯಮಂತ್ರಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ.2020ರಲ್ಲಿ ನಗರ ಪ್ರದೇಶಗಳಲ್ಲಿಕೊವಿಡ್ ಪ್ರಕರಣಗಳಸಂಖ್ಯೆ ಜಾಸ್ತಿ ಆಗಿತ್ತು . ಆದರೆ ಈಗ, ಸರ್ಕಾರ ಕೊವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ವರದಿ ಮಾಡುವ ಗ್ರಾಮೀಣ ಪ್ರದೇಶಗಳಿಗೆ ಗಮನ ಹರಿಸಿದೆ. ಈ ಪ್ರದೇಶಗಳಲ್ಲಿ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರ ಇತ್ತೀಚೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು.

ಬುಧವಾರ ಪ್ರಧಾನಿ ಕೆಲವು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದರು. ಕೆಲವು ರಾಜ್ಯಗಳಲ್ಲಿ ಕೋವಿಡ್ -19 ಪ್ರಕರಣಗಳು ಕಡಿಮೆಯಾಗಿದ್ದರೂ ಹೆಚ್ಚು ಜಾಗರೂಕರಾಗಿರಿ ಎಂದು ಅವರು ಹೇಳಿದ್ದರು. ನಮ್ಮ ಹೋರಾಟವು ಪ್ರತಿಯೊಂದು ಜೀವವನ್ನು ಉಳಿಸುವುದಾಗಿಗೆ ಎಂದು ಹೇಳುವ ಮೂಲಕ, ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು “ಫೀಲ್ಡ್ ಕಮಾಂಡರ್” ಎಂದು ಪ್ರಧಾನಿ ಬಣ್ಣಿಸಿದರು.

ಇದನ್ನೂ ಓದಿ:  ತೌಕ್ತೆ ಚಂಡಮಾರುತದಿಂದ ತೀವ್ರ ಹಾನಿಗೊಳಗಾದ ಗುಜರಾತ್​​ಗೆ 1000 ಕೋಟಿ ರೂ.ತಕ್ಷಣದ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಕೋವಿಡ್-19 ನಿರ್ವಹಣೆ: ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಸಂವಾದ

Published On - 2:25 pm, Thu, 20 May 21