Yellow Fungus: ಬ್ಲ್ಯಾಕ್, ವೈಟ್ ಫಂಗಸ್ ಬಳಿಕ ಯೆಲ್ಲೋ ಫಂಗಸ್ ಪತ್ತೆ; ರೋಗ ಲಕ್ಷಣ ಹಾಗೂ ಇತರ ಮಾಹಿತಿ ಇಲ್ಲಿದೆ

| Updated By: ganapathi bhat

Updated on: Aug 21, 2021 | 10:00 AM

ದೇಹದಲ್ಲಿ ಆಂತರಿಕವಾಗಿ ಆರಂಭವಾಗುವ ಈ ಖಾಯಿಲೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೇ ಹೋದರೆ ಮಾರಕವಾಗುವ ಸಾಧ್ಯತೆ ಇದೆ. ಹಾಗಾಗಿ, ಯೆಲ್ಲೋ ಫಂಗಸ್​ನ್ನು ಕಡೆಗಣಿಸುವುದು ಒಳ್ಳೆಯದಲ್ಲ.

Yellow Fungus: ಬ್ಲ್ಯಾಕ್, ವೈಟ್ ಫಂಗಸ್ ಬಳಿಕ ಯೆಲ್ಲೋ ಫಂಗಸ್ ಪತ್ತೆ; ರೋಗ ಲಕ್ಷಣ ಹಾಗೂ ಇತರ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೊರೊನಾ ಸೋಂಕು ಎರಡನೇ ಅಲೆಯ ನಡುವೆ ಹಲವು ವೈದ್ಯಕೀಯ ಸವಾಲುಗಳು ಎದುರಾಗಿದೆ. ಕೊವಿಡ್-19 ಸೋಂಕಿನಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್​ನಂತಹ ಖಾಯಿಲೆಗಳು ದೇಹಸೇರುತ್ತಿದೆ. ದೇಹದ ಸಕ್ಕರೆ ಪ್ರಮಾಣವೂ ಅಧಿಕವಾಗಿ ಕೆಲವಷ್ಟು ಮಂದಿ ಸಕ್ಕರೆ ಖಾಯಿಲೆಗೆ ತುತ್ತಾಗಿದ್ದಾರೆ. ಈ ಎಲ್ಲದರ ನಡುವೆ ಈಗ ಮತ್ತೊಂದು ಸಮಸ್ಯೆ ಕಂಡುಬಂದಿದೆ. ದೇಶದಲ್ಲಿ ಮೊತ್ತ ಮೊದಲ ಯೆಲ್ಲೋ ಫಂಗಸ್ ಪ್ರಕರಣ ಪತ್ತೆಯಾಗಿದೆ. ಘಾಜಿಯಾಬಾದ್​ನಲ್ಲಿ ಸೋಮವಾರ (ಮೇ 24) ಮೊದಲ ಯೆಲ್ಲೋ ಫಂಗಸ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಯೆಲ್ಲೋ ಫಂಗಸ್ ಬ್ಲ್ಯಾಕ್ ಮತ್ತು ವೈಟ್ ಫಂಗಸ್​ಗಳಿಗಿಂತ ಹೆಚ್ಚು ಅಪಾಯಕಾರಿ ಎಂಬ ಮಾಹಿತಿ ಲಭ್ಯವಾಗಿದೆ. ಆಲಸ್ಯ, ತೂಕ ಇಳಿಕೆಯಾಗುವುದು, ಹಸಿವು ಕಡಿಮೆ ಇರುವುದು ಅಥವಾ ಹಸಿವೆಯೇ ಆಗದಿರುವುದು ಯೆಲ್ಲೋ ಫಂಗಸ್​ನ ಲಕ್ಷಣಗಳಾಗಿರಲಿವೆ. ದೇಹದಲ್ಲಿ ಗಾಯಗಳಿದ್ದರೆ ಗುಣವಾಗುವ ಪ್ರಮಾಣ ಯೆಲ್ಲೋ ಫಂಗಸ್​ನಿಂದಾಗಿ ಕಡಿಮೆ ಆಗುವ ಸಾಧ್ಯತೆಯಿದೆ. ಅಂಗಾಂಗ ವೈಫಲ್ಯ ಅಥವಾ ಕಣ್ಣುಗಳ ಸಮಸ್ಯೆ ಕಂಡುಬರಬಹುದಾಗಿದೆ.

ದೇಹದಲ್ಲಿ ಆಂತರಿಕವಾಗಿ ಆರಂಭವಾಗುವ ಈ ಖಾಯಿಲೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೇ ಹೋದರೆ ಮಾರಕವಾಗುವ ಸಾಧ್ಯತೆ ಇದೆ. ಹಾಗಾಗಿ, ಯೆಲ್ಲೋ ಫಂಗಸ್​ನ್ನು ಕಡೆಗಣಿಸುವುದು ಒಳ್ಳೆಯದಲ್ಲ. ಯೆಲ್ಲೋ ಫಂಗಸ್​ಗೆ ಕೂಡ ಅಂಪೋಟೆರಿಸಿನ್ ಬಿ ಇಂಜೆಕ್ಷನ್ ಔಷಧವಾಗಿದೆ.

ಸ್ವಚ್ಛತೆ ಇಲ್ಲದಿರುವುದು, ಅತಿಯಾದ ತೇವಾಂಶ ಇತ್ಯಾದಿ ಯೆಲ್ಲೋ ಫಂಗಸ್​ಗೆ ಕಾರಣವಾಗಬಹುದು. ಕೇಂದ್ರ ಆರಓಗ್ಯ ಸಚಿವಾಲಯ ಸೋಮವಾರ ಬೆಳಗ್ಗೆ ನೀಡಿದ ವರದಿಯ ಪ್ರಕಾರ, ಇಲ್ಲಿಯವರೆಗೆ 5,424 ಮೈಕೊರ್​ಮೈಕೊಸಿಸ್ ಪ್ರಕರಣಗಳು ದೇಶದ 18 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿದೆ. 5,424 ಪ್ರಕರಣಗಳ ಪೈಕಿ 4,556 ರೋಗಿಗಳು ಕೊರೊನಾ ಸೋಂಕಿಗೆ ತುತ್ತಾದವರಾಗಿದ್ದಾರೆ. ಹಾಗೂ ಶೇ. 55ರಷ್ಟು ರೋಗಿಗಳು ಸಕ್ಕರೆ ಖಾಯಿಲೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ: ಕೊರೊನಾ ಇಲ್ಲದವರಲ್ಲಿಯೂ ಬ್ಲ್ಯಾಕ್ ಫಂಗಸ್ ಪತ್ತೆ.. ಹೊರ ಬೀಳುತ್ತಿದೆ ಭಯಾನಕ ಸತ್ಯ

ಬ್ಲ್ಯಾಕ್​ ಫಂಗಸ್​ ಸೋಂಕು ಬಾರದಂತೆ ತಡೆಗಟ್ಟಲು ಇಲ್ಲಿದೆ ಸರಳ ಸಲಹೆಗಳು

Published On - 3:26 pm, Mon, 24 May 21