ಉತ್ತರಾಖಂಡ: ಹರಿದ್ವಾರದಲ್ಲಿ (Haridwar) ಪತಂಜಲಿ ವಿಶ್ವವಿದ್ಯಾಲಯವನ್ನು (Patanjali University) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಗುರುವಾರ ಉದ್ಘಾಟಿಸಿದ್ದಾರೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ಯೋಗ ಗುರು ರಾಮದೇವ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉದ್ಘಾಟನೆ ನಂತರ ಶಾ ಅವರು ಹವನ ನಡೆಸುತ್ತಿರುವ ವಿಡಿಯೊವನ್ನು ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ. ಇದಕ್ಕಿಂತ ಮುನ್ನ ಗೃಹ ಸಚಿವರನ್ನು ಸ್ವಾಗತಿಸಿದ ಬಾಬಾ ರಾಮ್‌ದೇವ್, ಭಾರತ ಮಾತೆಯ ಪ್ರೀತಿಯ ಉಕ್ಕಿನ ಮನುಷ್ಯ, ಕಟ್ಟಾ ದೇಶಭಕ್ತ, ಗೃಹ ಸಚಿವ ಅಮಿತ್ ಶಾ ಅವರ ಪವಿತ್ರ ಉಪಸ್ಥಿತಿಯಲ್ಲಿ ಪತಂಜಲಿ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭ ಮತ್ತು ಸನ್ಯಾಸ ದೀಕ್ಷಾ ಮಹೋತ್ಸವ ನಡೆಯಲಿದೆ” ಎಂದು ಟ್ವೀಟ್ ಮಾಡಿದ್ದಾರೆ. ಉತ್ತರಾಖಂಡ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯದ 113ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
#WATCH | Union Home Minister Amit Shah performs a havan at Patanjali University in Haridwar, Uttarakhand. pic.twitter.com/uf70B5h6Fj
— ANI (@ANI) March 30, 2023
ಹರಿದ್ವಾರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಇಂದು ನಾನು ನಿಮ್ಮೆಲ್ಲರಿಗೂ ರಾಮ ನವಮಿಯ ಶುಭಾಶಯಗಳನ್ನು ಕೋರುತ್ತೇನೆ ಎಂದು ಹೇಳಿದರು. ಇಂದು, ಸಹಕಾರ ಸಚಿವಾಲಯದ ಮೂಲಕ ದೇಶದ ಎಲ್ಲಾ 63000 ಸಕ್ರಿಯ ಪ್ಯಾಕ್‌ಗಳನ್ನು ಗಣಕೀಕರಣಗೊಳಿಸುವ ಕೆಲಸ ಪ್ರಾರಂಭವಾಗಿದೆ. ಇದರೊಂದಿಗೆ 307 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಸೇರಿದಂತೆ ಹಲವು ವಿಷಯಗಳನ್ನು ಗಣಕೀಕರಣಗೊಳಿಸಲಾಗಿದೆ. ಸಹಕಾರಿ ಸಚಿವಾಲಯದ ಕೋರಿಕೆಯ ಮೇರೆಗೆ, ಸಹಾರಾ ಗ್ರೂಪ್‌ನ 4 ಸಹಕಾರಿ ಸಂಘಗಳಲ್ಲಿ ಹೂಡಿಕೆ ಮಾಡಿದ 10 ಕೋಟಿ ಹೂಡಿಕೆದಾರರು ತಮ್ಮ ಹಣವನ್ನು ಹಿಂದಿರುಗಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Dahi Row: ಮೊಸರು ಪ್ಯಾಕೆಟ್ ಮೇಲೆ ‘ದಹಿ’ ಎಂದು ನಮೂದಿಸುವುದಕ್ಕೆ ವಿರೋಧ; ಮಾರ್ಗಸೂಚಿ ಪರಿಷ್ಕರಿಸಿದ ಎಫ್‌ಎಸ್‌ಎಸ್‌ಎಐ
ನಾವು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಂಡರೆ ಅದರಿಂದ ಹಿಂದೆ ಸರಿಯುವುದಿಲ್ಲ, ಆದರೆ ನಮ್ಮ ವಿರೋಧ ಪಕ್ಷವು ನಮ್ಮ ನಿರ್ಧಾರಗಳ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳನ್ನು ಎತ್ತುವ ಕೆಲಸ ಮಾಡುತ್ತದೆ ಎಂದು ಹೇಳಿದರು. ನಾವು ಕಟ್ಟುನಿಟ್ಟಿನ ನಕಲು ವಿರೋಧಿ ಕಾನೂನು ಮಾಡಿದಾಗ, ಪ್ರತಿಪಕ್ಷಗಳು ಯುವಕರನ್ನು ವಂಚಿಸುವ ಕೆಲಸವನ್ನು ಮಾಡಿತು. ಕಟ್ಟುನಿಟ್ಟಾದ ನಕಲು ವಿರೋಧಿ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ನಾವು ಯುವಕರ ಭವಿಷ್ಯವನ್ನು ಭದ್ರಪಡಿಸಿದ್ದೇವೆ. ಇಂದು ಈ ನವ ಭಾರತದಲ್ಲಿ ಕೇವಲ ಆಯ್ದ ಕೆಲವು ಕುಟುಂಬಗಳಲ್ಲ, ಎಲ್ಲರ ಧ್ವನಿಯೂ ಕೇಳಿಬರುತ್ತಿದೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Thu, 30 March 23