ದೆಹಲಿ: ಮೂರು ದಿನಗಳ ಭೇಟಿಗಾಗಿ ಶುಕ್ರವಾರ ಮಧ್ಯಾಹ್ನ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ (Andaman and Nicobar islands) ತಲುಪಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅಂಡಮಾನ್ನಲ್ಲಿ ಸಾವರ್ಕರ್ ಇದ್ದ ಸೆಲ್ಯುಲರ್ ಜೈಲಿಗೆ ಭೇಟಿ ನೀಡಿ ಸಾವರ್ಕರ್‌ಗೆ ಗೌರವ ನಮನ ಸಲ್ಲಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿರುವ ಶಾ ದ್ವೀಪಸಮೂಹದಲ್ಲಿನ ವಿವಿಧ ಅಭಿವೃದ್ಧಿ ಉಪಕ್ರಮಗಳ ಬಗ್ಗೆ ಗಮನಹರಿಸಲಿದ್ದಾರೆ. ಅವರು ಸಾವರ್ಕರ್ ಇದ್ದ ಜೈಲಿಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ ನಂತರ ಅವರು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Andaman and Nicobar Islands: Union Home Minister Amit Shah arrives in Port Blair on a three-day visit. He will participate in various events here. pic.twitter.com/gQfB8kFbS5
— ANI (@ANI) October 15, 2021
ಕೇಂದ್ರಾಡಳಿತ ಪ್ರದೇಶದಲ್ಲಿ ಶಹೀದ್ ದ್ವೀಪ್ ಪರಿಸರ ಪ್ರವಾಸೋದ್ಯಮ ಯೋಜನೆ ಮತ್ತು ಸ್ವರಾಜ್ ದ್ವಿಪ್ ವಾಟರ್ ಏರೋಡ್ರೋಮ್ ಸೇರಿದಂತೆ ವಿವಿಧ ಅಭಿವೃದ್ಧಿ ಉಪಕ್ರಮಗಳ ವೈಮಾನಿಕ ಸಮೀಕ್ಷೆಯನ್ನು ಸಹ ಶಾ ಕೈಗೊಳ್ಳಲಿದ್ದಾರೆ. ಆನಂತರ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪಕ್ಕೆ ಭೇಟಿ ನೀಡಲಿದ್ದಾರೆ.
Andaman and Nicobar Islands: Union Home Minister Amit Shah visits the cell where Vinayak Damodar Savarkar was imprisoned at Cellular Jail in Port Blair. pic.twitter.com/vJnJ4vcWAL
— ANI (@ANI) October 15, 2021
ಕೇಂದ್ರ ಸಚಿವರು ಭಾನುವಾರ ಅಂಡಮಾನ್ ಆಂಡ್ ನಿಕೋಬಾರ್ ಪೋಲಿಸ್ ಆಯೋಜಿಸುವ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published On - 4:54 pm, Fri, 15 October 21