ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಪರವಾಗಿ ಘೋಷಣೆ ಕೂಗಿದವರನ್ನು ಗುಂಡಿಕ್ಕಿ ಕೊಲ್ಲಬೇಕು: ಸಚಿವ ಅಶ್ವಿನಿ ಚೌಬೆ

|

Updated on: Apr 23, 2023 | 1:19 PM

ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್(Atiq Ahmad) ಪರವಾಗಿ ಘೋಷಣೆ ಕೂಗುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ಹೇಳಿದ್ದಾರೆ.

ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಪರವಾಗಿ ಘೋಷಣೆ ಕೂಗಿದವರನ್ನು ಗುಂಡಿಕ್ಕಿ ಕೊಲ್ಲಬೇಕು: ಸಚಿವ ಅಶ್ವಿನಿ ಚೌಬೆ
ಅಶ್ವಿನಿ ಕುಮಾರ್ ಚೌಬೆ
Image Credit source: Mint
Follow us on

ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್(Atiq Ahmad) ಪರವಾಗಿ ಘೋಷಣೆ ಕೂಗುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ಹೇಳಿದ್ದಾರೆ. ಬಿಹಾರದಲ್ಲಿ ಕೂಡ ಯೋಗಿ ಮಾದರಿಯ ಅಗತ್ಯವಿದೆ, ಶುಕ್ರವಾರದ ಪ್ರಾರ್ಥನೆಗೆ ಹಾಜರಾಗಿದ್ದವರಲ್ಲಿ ಒಬ್ಬರು ಪ್ರಾರ್ಥನೆ ಸಲ್ಲಿಸಿದ ನಂತರ ಅತೀಕ್ ಅಹ್ಮದ್ ಅವರನ್ನು ವೈಭವೀಕರಿಸುವ ಘೋಷಣೆಗಳನ್ನು ಕೂಗಿದ್ದರು.

ಶುಕ್ರವಾರ ಪ್ರಾರ್ಥನೆ ಸಲ್ಲಿಸಿದ ನಂತರ, ವ್ಯಕ್ತಿಯೊಬ್ಬರು ‘ಅತಿಕ್ ಅಹ್ಮದ್ ಅಮರ್ ರಹೇ’ ಎಂದು ಘೋಷಣೆಗಳನ್ನು ಕೂಗಿದರು ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ಘಟನೆ ದುರದೃಷ್ಟಕರ ಮತ್ತು ಬಿಹಾರದಲ್ಲಿ ಇಂತಹ ಹೇಳಿಕೆಗಳು ಮತ್ತು ಘೋಷಣೆಗಳನ್ನು ಎತ್ತುತ್ತಿರುವುದು ವಿಷಾದನೀಯ, ಅಂತಹವರನ್ನು ತಕ್ಷಣವೇ ಗುಂಡಿಕ್ಕಿ ಕೊಲ್ಲಬೇಕು ಎಂದರು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ವಿರುದ್ಧದ ಘೋಷಣೆಗೆ ತಿರುಗೇಟು ನೀಡಿದ ಅಶ್ನಿನಿ ಕುಮಾರ್ ಚೌಬೆ, ದೇಶದ ಪ್ರಧಾನಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗಿದ ರೀತಿಯೂ ಅತ್ಯಂತ ದುರದೃಷ್ಟಕರ ಎಂದು ಹೇಳಿದರು.

ಮತ್ತಷ್ಟು ಓದಿ: Asad Kalia: ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್​ ಗ್ಯಾಂಗ್​ನ ಸದಸ್ಯ ಅಸದ್ ಕಾಲಿಯಾ ಬಂಧನ

ಬಿಹಾರದಲ್ಲಿ ನಮಗೆ ಯೋಗಿ ಮಾದರಿ ಬೇಕು, ಇದರಲ್ಲಿ ಭಯೋತ್ಪಾದನಾ ಮಾಫಿಯಾದಂತಹ ಕ್ರಿಮಿನಲ್‌ಗಳನ್ನು ಮಟ್ಟ ಹಾಕಲೇಬೇಕು ಎಂದು ಹೇಳಿದರು. ಬಿಜೆಪಿಯವರನ್ನು ಗುರಿಯಾಗಿಸಿಕೊಂಡು ಸಿಎಂ ನಿತೀಶ್ ಕುಮಾರ್ ಹೇಳಿಕೆ ನೀಡುತ್ತಿದ್ದು, 2025ರಲ್ಲಿ ರಾಜ್ಯದಲ್ಲಿ ಯೋಗಿ ಮಾದರಿಯನ್ನು ಆಯ್ಕೆ ಮಾಡುವ ಮೂಲಕ ಸಾರ್ವಜನಿಕರೇ ಉತ್ತರ ನೀಡಲಿದ್ದಾರೆ.

ಮುಂಬರುವ ದಿನಗಳಲ್ಲಿ ಬಿಹಾರದ ಜನತೆ ಯೋಗಿ ಮಾದರಿಯನ್ನು ಅಧಿಕಾರಕ್ಕೆ ತರಲಿದ್ದಾರೆ, ಬಿಹಾರದಲ್ಲೂ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಪ್ರಯಾಗ್​ರಾಜ್​ನಲ್ಲಿ ವೈದ್ಯಕೀಯ ತಪಾಸಣೆಗೆ ಗ್ಯಾಂಗ್​ಸ್ಟರ್ ಅತೀಕ್ ಹಾಗೂ ಸಹೋದರ್ ಅಶ್ರಫ್​ನನ್ನು ಕರೆದೊಯ್ಯುತ್ತಿರುವ ವೇಳೆ, ಪತ್ರಕರ್ತರ ಸೋಗಿನಲ್ಲಿ ಬಂದ ಮೂವರು ಅತೀಕ್ ಹಾಗೂ ಅಶ್ರಫ್ ಮೇಲೆ ಗುಂಡಿನ ದಾಳಿ ನಡೆಸಿದ್ದರು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 1:13 pm, Sun, 23 April 23