AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದ್ದಕ್ಕಿದ್ದಂತೆ ರತ್ಲಾಮ್​-ಇಂದೋರ್ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ, ನೋಡ ನೋಡುತ್ತಲೇ ಹೊತ್ತುರಿದ ಬೋಗಿಗಳು

ರತ್ಲಾಮ್​ನಿಂದ ಇಂದೋರ್​ಗೆ ತೆರಳುತ್ತಿದ್ದ ಡೆಮು(DEMU)ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರತ್ಲಾಮ್-ಡಾ. ಅಂಬೇಡ್ಕರ್ ನಗರ ಡೆಮು ರೈಲಿನ ಎಂಜಿನ್​ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು, ಬಳಿಕ ಅದು ಬೋಗಿಗಳಿಗೆ ತಗುಲಿತ್ತು.

ಇದ್ದಕ್ಕಿದ್ದಂತೆ ರತ್ಲಾಮ್​-ಇಂದೋರ್ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ, ನೋಡ ನೋಡುತ್ತಲೇ ಹೊತ್ತುರಿದ ಬೋಗಿಗಳು
ರೈಲು
ನಯನಾ ರಾಜೀವ್
|

Updated on: Apr 23, 2023 | 12:02 PM

Share

ರತ್ಲಾಮ್​ನಿಂದ ಇಂದೋರ್​ಗೆ ತೆರಳುತ್ತಿದ್ದ ಡೆಮು(DEMU)ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರತ್ಲಾಮ್-ಡಾ. ಅಂಬೇಡ್ಕರ್ ನಗರ ಡೆಮು ರೈಲಿನ ಎಂಜಿನ್​ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು, ಬಳಿಕ ಅದು ಬೋಗಿಗಳಿಗೆ ತಗುಲಿತ್ತು. ಬೆಂಕಿ ಹೊತ್ತಿಕೊಂಡ ಬಳಿಕವೂ ರೈಲು 10 ಕಿಲೋಮೀಟರ್​ಗಟ್ಟಲೆ ಸಂಚರಿಸಿತ್ತು, ರೈಲು ನಿಂತ ಕೂಡಲೇ ಪ್ರಯಾಣಿಕರು ರೈಲಿನಿಂದ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಬೆಂಕಿಯ ರಭಸಕ್ಕೆ ಪಕ್ಕದ ಬೋಗಿಯೂ ಸುಟ್ಟು ಕರಕಲಾಗಿದೆ. ಸಮಯಕ್ಕೆ ಸರಿಯಾಗಿ ಪ್ರಯಾಣಿಕರು ರೈಲಿನಿಂದ ಇಳಿದರು. ಎಲ್ಲರೂ ಸುರಕ್ಷಿತವಾಗಿದ್ದಾರೆ.

ಡೆಮು ರೈಲು ಬೆಳಗ್ಗೆ 6.35ಕ್ಕೆ ರತ್ಲಂನಿಂದ ಅಂಬೇಡ್ಕರ್​ನಗರಕ್ಕೆ ಹೊರಟಿತ್ತು. ನೌಗಾವಾನ್ ನಿಲ್ದಾಣವು ರತ್ಲಂನಿಂದ 17 ಕಿ.ಮೀ ದೂರದಲ್ಲಿದೆ. ಈ ಕೋಚ್‌ನಲ್ಲಿ ಲೋಕೋ ಪೈಲಟ್ ಕೂಡ ಇದ್ದರು, ಬೆಂಕಿ ಮುಂದುವರಿದು ಪಕ್ಕದ ಬೋಗಿಗೂ ವ್ಯಾಪಿಸಿದೆ, ಎಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ ಕಂಡು ಅಕ್ಕಪಕ್ಕದ ಬೋಗಿಯಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡಿದ್ದರು.

ಕೆಲವರು ಚೈನ್ ಅನ್ನು ಎಳೆಯಲು ಪ್ರಯತ್ನಿಸಿದರು, ಆದರೆ ಅಷ್ಟರಲ್ಲಿ ರೈಲು ಬೆಳಿಗ್ಗೆ 7 ಗಂಟೆಗೆ ಪ್ರೀತಮ್ ನಗರ ನಿಲ್ದಾಣದಲ್ಲಿ ನಿಂತಿತು. ಅಗ್ನಿಶಾಮಕ ದಳದ ತಂಡವೂ ಬೆಳಗ್ಗೆ 7.50ಕ್ಕೆ ಸ್ಥಳಕ್ಕೆ ತಲುಪಿತು, ಬೆಳಗ್ಗೆ 8.10ರ ವೇಳೆಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು.

ಮತ್ತಷ್ಟು ಓದಿ: Tamil Nadu: ಹಳಿ ತಪ್ಪಿದ ಗೂಡ್ಸ್​ ರೈಲು, ಹಲವು ರೈಲುಗಳ ಸಂಚಾರ ರದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ

ಡ್ರೈವಿಂಗ್ ಮೋಟರ್ ಕೋಚ್ ಮತ್ತು ಒಂದು ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ರೈಲಿನ ಡ್ರೈವಿಂಗ್ ಮೋಟಾರ್ ಕೋಚ್‌ನ ಜನರೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು, ನಂತರ ಅದು ಬೋಗಿಗೆ ವ್ಯಾಪಿಸಿತು. ರೈಲಿಗೆ ಬೆಂಕಿ ಹೊತ್ತಿಕೊಂಡ ನಂತರ ಪ್ರಯಾಣಿಕರಿಗೆ ಮತ್ತೊಂದು ರೈಲಿನ ವ್ಯವಸ್ಥೆ ಮಾಡಲಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಪ್ರಯಾಣಿಕರು ಕಾಲ್ನಡಿಗೆಯಲ್ಲಿ ಹೊರಟು ಬಸ್ಸು ಮತ್ತು ಇತರ ಮಾರ್ಗಗಳನ್ನು ಹಿಡಿಯಲು ಪ್ರೀತಮ್ ನಗರ ರೈಲು ನಿಲ್ದಾಣದಿಂದ 6 ಕಿ.ಮೀ ದೂರದಲ್ಲಿರುವ ರಟ್ಟಗಿರಿಗೆ ಬಂದರು.

ಎಂಜಿನ್‌ಗೆ ಹೊಂದಿಕೊಂಡಿದ್ದ ಬೋಗಿಯಲ್ಲಿ 20 ರಿಂದ 25 ಪ್ರಯಾಣಿಕರಿದ್ದರೆ, ಇನ್ನೊಂದು ಬೋಗಿಯಲ್ಲಿ 40 ರಿಂದ 50 ಪ್ರಯಾಣಿಕರಿದ್ದರು. ಘಟನೆ ಬಗ್ಗೆ ಮಾಹಿತಿ ಪಡೆದ ರೈಲ್ವೇ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ರೈಲ್ವೆ ಆಡಳಿತವು ರೈಲನ್ನು ಪ್ರೀತಮ್ ನಗರದಿಂದ ನೌಗಾಂವ್ ರೈಲು ನಿಲ್ದಾಣಕ್ಕೆ ವಾಪಸ್ ಕಳುಹಿಸಿದೆ.

ನೌಗಾವಾನ್‌ನಲ್ಲಿ ಸುಟ್ಟ ಬೋಗಿ ಮತ್ತು ಇಂಜಿನ್ ಅನ್ನು ರೈಲಿನಿಂದ ತೆಗೆದುಹಾಕಲಾಯಿತು, ನಂತರ ರೈಲನ್ನು ಇಂದೋರ್‌ಗೆ ಕಳುಹಿಸಲಾಯಿತು. ವಾಸ್ತವವಾಗಿ, ಪ್ರೀತಮ್ ನಗರದಲ್ಲಿ ಬೇರೆ ಯಾವುದೇ ರೈಲು ಹಳಿ ಇರಲಿಲ್ಲ, ಆದ್ದರಿಂದ ರೈಲನ್ನು ನೌಗಾವಾನ್‌ಗೆ ಕಳುಹಿಸಬೇಕಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ