ನವದೆಹಲಿ: ದೇಶೀಯ ವಿಮಾನಯಾನ ಸೇವೆಗಳು ಶೀಘ್ರದಲ್ಲಿಯೇ ಕೋವಿಡ್ ಪೂರ್ವ ಅವಧಿಯಲ್ಲಿರುವಂತೆಯೇ ಸೇವೆ ಒದಗಿಸಲಿವೆ. ಈ ಪ್ರಕ್ರಿಯೆ ನಿಧಾನವಾಗಿ ನಡೆಯಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಹೆಚ್ಚಿನ ಜನರು ವಿಮಾನ ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ತೋರಿಸಲು ವಿಮಾನ ಪ್ರಯಾಣಿಕರ ಅಂಕಿಅಂಶಗಳನ್ನು ಸಚಿವ ಪುರಿ ಟ್ವೀಟ್ ಮಾಡಿದ್ದಾರೆ.
ದೇಶೀಯ ವಿಮಾನಯಾನವು ಮುಂಚಿನಂತಾಗಲಿದೆ. ಜನವರಿ 9, 2021ರಂದು 2,151 ದೇಶೀಯ ವಿಮಾನಗಳು ಹಾರಾಟ ನಡೆಸಿದ್ದು 2,59,851 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಇದೇ ದಿನ ಒಟ್ಟು 4,306 ವಿಮಾನಗಳು ಹಾರಾಟ ನಡೆಸಿದ್ದು 5,16,404 ಮಂದಿ ಪ್ರಯಾಣಿಸಿದ್ದಾರೆ ಎಂದು ಪುರಿ ಹೇಳಿದ್ದಾರೆ.
Domestic aviation operations steadily move towards pre-Covid numbers.
2,59,851 passengers on 2,151 domestic flights on 9 Jan 2021 reiterate passenger confidence in flying as the preferred mode of travel. The day also saw total footfalls of 5,16,404 & 4,306 total flight movements. pic.twitter.com/FgBuSzhzb7— Hardeep Singh Puri (@HardeepSPuri) January 10, 2021
ಅಂತರರಾಷ್ಟ್ರೀಯ ವಿಮಾನಗಳನ್ನು ಜನವರಿ 31ರವರೆಗೆ ರದ್ದು ವಿಸ್ತರಿಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ತಮ್ಮ ಆದೇಶದಲ್ಲಿ ಬದಲಾವಣೆ ಮಾಡಿತ್ತು .
ಕೋವಿಡ್-19 ವ್ಯಾಪಿಸಿದ ಹಿನ್ನೆಲೆಯಲ್ಲಿ ಮಾರ್ಚ್ 25ರಂದು ಭಾರತ ವಿಮಾನ ಸೇವೆಗಳನ್ನು ರದ್ದು ಮಾಡಿತ್ತು. ಹಂತ ಹಂತವಾಗಿ ದೇಶೀಯ ವಿಮಾನಗಳು ಮೇ 25ರಂದು ವಿಮಾನಯಾನ ಆರಂಭಿಸಿದ್ದವು. ಜುಲೈ ತಿಂಗಳಿನಿಂದ ಕೆಲವು ಅಂತರರಾಷ್ಟ್ರೀಯ ವಿಶೇಷ ವಿಮಾನಗಳು ಮಾತ್ರ ಸೇವೆ ಆರಂಭಿಸಿದ್ದವು.
ಹುಬ್ಬಳ್ಳಿಯಿಂದ ಇನ್ನೆರಡು ಮಾರ್ಗಗಳಲ್ಲಿ ಇಂಡಿಗೋ ವಿಮಾನ ಸೇವೆ: ಪ್ರಲ್ಹಾದ್ ಜೋಶಿ