ಸೂಜಿ ಇಲ್ಲದೆ ನೀಡಬಹುದಾದ mRNA ಆಧಾರಿತ ಕೊವಿಡ್ ಬೂಸ್ಟರ್ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ

|

Updated on: Jun 24, 2023 | 8:29 PM

ಕೊವಿಡ್-19 ಲಸಿಕೆಗಳ ವೇಗವರ್ಧಿತ ಅಭಿವೃದ್ಧಿಗಾಗಿ ಸರ್ಕಾರದ ಆತ್ಮನಿರ್ಭರ್ ಭಾರತ್ 3.0 ಪ್ಯಾಕೇಜ್ ಅಡಿಯಲ್ಲಿ ಡಿಬಿಟಿ ಮತ್ತು ಬಿಐಆರ್​​ಎಸಿ ಜಾರಿಗೊಳಿಸಿದ ಮಿಷನ್ ಕೊವಿಡ್ ಸುರಕ್ಷಾ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಿದ ಐದನೇ ಲಸಿಕೆಯಾಗಿದೆ GEMCOVAC-OM.

ಸೂಜಿ ಇಲ್ಲದೆ ನೀಡಬಹುದಾದ mRNA ಆಧಾರಿತ ಕೊವಿಡ್ ಬೂಸ್ಟರ್ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ
ಲಸಿಕೆ ಬಿಡುಗಡೆ ಮಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್
Follow us on

ಒಮಿಕ್ರಾನ್ ವಿರುದ್ಧ ನಿರ್ದಿಷ್ಟ mRNA ಆಧಾರಿತ ಬೂಸ್ಟರ್ ಲಸಿಕೆಯನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh) ಶನಿವಾರ ಬಿಡುಗಡೆ ಮಾಡಿದ್ದಾರೆ. GEMCOVAC-OM ಎಂಬ ಭಾರತದ ಮೊದಲ mRNA ಲಸಿಕೆಯನ್ನು ಜೈವಿಕ ತಂತ್ರಜ್ಞಾನ ಇಲಾಖೆ (DBT) ಮತ್ತು ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (BIRAC) ಧನಸಹಾಯದೊಂದಿಗೆ ಜೆನೋವಾ ಸ್ಥಳೀಯ ಪ್ಲಾಟ್‌ಫಾರ್ಮ್ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಈ ಲಸಿಕೆ ತುರ್ತು ಬಳಕೆಯ ಅಧಿಕಾರಕ್ಕಾಗಿ (EUA) ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ (DCGI) ಕಚೇರಿಯಿಂದ ಅನುಮೋದನೆ ಪಡೆಯಿತು.

ಕೊವಿಡ್-19 ಲಸಿಕೆಗಳ ವೇಗವರ್ಧಿತ ಅಭಿವೃದ್ಧಿಗಾಗಿ ಸರ್ಕಾರದ ಆತ್ಮನಿರ್ಭರ್ ಭಾರತ್ 3.0 ಪ್ಯಾಕೇಜ್ ಅಡಿಯಲ್ಲಿ ಡಿಬಿಟಿ ಮತ್ತು ಬಿಐಆರ್​​ಎಸಿ ಜಾರಿಗೊಳಿಸಿದ ಮಿಷನ್ ಕೊವಿಡ್ ಸುರಕ್ಷಾ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಿದ ಐದನೇ ಲಸಿಕೆಯಾಗಿದೆ GEMCOVAC-OM.
ತುಲನಾತ್ಮಕವಾಗಿ ಕಡಿಮೆ ಸಮಯದಲ್ಲಿ ಇತರ ಲಸಿಕೆಗಳನ್ನು ತಯಾರಿಸಲು ಈ ಫ್ಯೂಚರ್ ರೆಡಿ ತಂತ್ರಜ್ಞಾನ ವೇದಿಕೆಯನ್ನು ಬಳಸಬಹುದು ಎಂದಿದ್ದಾರೆ ಸಿಂಗ್.

GEMCOVAC-OM ಒಂದು ಥರ್ಮೋಸ್ಟೆಬಲ್ ಲಸಿಕೆಯಾಗಿದ್ದು ಇತರ ಅನುಮೋದಿತ mRNA-ಆಧಾರಿತ ಲಸಿಕೆಗಳಿಗೆ ಬಳಸಲಾಗುವ ಅಲ್ಟ್ರಾ-ಕೋಲ್ಡ್ ಚೈನ್ ಮೂಲಸೌಕರ್ಯದ ಅಗತ್ಯವಿರುವುದಿಲ್ಲ.

ಈ ಕಂಡುಹಿಡಿಯುವಿಕೆ ನಮ್ಮ ದೇಶದ ಮೈಲಿಗಲ್ಲು. ಈ ಲಸಿಕೆಯನ್ನು ನಿಯೋಜಿಸಲು ಅಸ್ತಿತ್ವದಲ್ಲಿರುವ ಪೂರೈಕೆ ಸರಪಳಿ ಮೂಲಸೌಕರ್ಯವು ಸಾಕಾಗುತ್ತದೆ. ಇದರ ವಿಶಿಷ್ಟ ವೈಶಿಷ್ಟ್ಯವೆಂದರೆ ಈ ಲಸಿಕೆಯನ್ನು ಸೂಜಿ ಚುಚ್ಚುಮದ್ದು ಇಲ್ಲದೆ ನಿರ್ವಹಿಸಬಹುದು ಎಂದು ಸಿಂಗ್ ಹೇಳಿದ್ದಾರೆ.

ಸೂಜಿ-ಮುಕ್ತ ಇಂಜೆಕ್ಷನ್ ಡಿವೈಸ್ ಬಳಸಿಕೊಂಡು ಲಸಿಕೆಯನ್ನು ಇಂಟ್ರಾ ಡರ್ಮ್ (ಚರ್ಮದ ಒಳಗೆ) ನೀಡಲಾಗುತ್ತದೆ.ಇದು ಗಮನಾರ್ಹವಾಗಿ ಹೆಚ್ಚಿನ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ