ತಾವು ಕಲಿತ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿ,ಶಿಕ್ಷಕರೊಂದಿಗೆ ಸಂವಾದ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

|

Updated on: Jun 24, 2023 | 9:05 PM

ಈ ಬಗ್ಗೆ ಟ್ವೀಟ್ ಮಾಡಿದ ಸಚಿವರು ನನ್ನ ಶಾಲೆಗೆ ಮರಳಿ ಬಂದ ಖುಷಿಯನ್ನು ಪದಗಳಲ್ಲಿ ಹೇಳುವುದು ಕಷ್ಟ.ಇಂದು ತಾಲ್ಚೇರ್‌ನ ಹಂಡಿಧುವಾ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ ಬಾಲ್ಯದ ನೆನಪುಗಳು ಮರುಕಳಿಸಿದವು.ನನ್ನ ಬಾಲ್ಯವನ್ನು ಐದನೇ ತರಗತಿಯವರೆಗೆ ಇದೇ ಶಾಲೆಯಲ್ಲಿ ಕಳೆದೆ ಎಂದು ಟ್ವೀಟ್ ಮಾಡಿದ್ದಾರೆ.

ತಾವು ಕಲಿತ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿ,ಶಿಕ್ಷಕರೊಂದಿಗೆ ಸಂವಾದ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ಶಾಲಾ ಮಕ್ಕಳೊಂದಿಗೆ ಧರ್ಮೇಂದ್ರ ಪ್ರಧಾನ್
Follow us on

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan), ತಾವು ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದ ಒಡಿಶಾದ (Odisha) ತಾಲ್ಚೆರ್‌ನಲ್ಲಿರುವ  ಹಂಡಿಧುವಾ ಪ್ರಾಥಮಿಕ ಸರ್ಕಾರಿ ಶಾಲೆಗೆ (Handidhua Primary Government School) ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿದ್ದಾರೆ. ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದ ಅವರು, ಇಂದು ಶಾಲೆಯ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಹಳೆಯ ನೆನಪು ಮರುಕಳಿಸಿ ಖುಷಿ ಎನಿಸಿತು. ಶಾಲೆಯ ಅಂದಿನ ಶಿಕ್ಷಕರಾದ ದುರ್ಗಾ ಸರ್, ಮಹೇಶ್ವರ್ ಸರ್ ಮತ್ತು ಇತರ ಶಿಕ್ಷಕರು ನನಗೆ ಯಾವಾಗಲೂ ಸ್ಫೂರ್ತಿಯಾಗಿದ್ದಾರೆ. ಈ ಶಾಲೆಯು ದೇವಸ್ಥಾನದಂತೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದಿದ್ದಾರೆ.

ಇಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಭೇಟಿ ಮಾಡಿರುವುದು ಹಲವಾರು ನೆನಪುಗಳನ್ನು ತಂದಿದೆ, ಇದು ಮುಂದೆ ಸಾಗಲು ನನ್ನ ಪ್ರೇರಣೆಯಾಗಿದೆ ಎಂದು ಪ್ರಧಾನ್ ಹೇಳಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿದ ಸಚಿವರು ನನ್ನ ಶಾಲೆಗೆ ಮರಳಿ ಬಂದ ಖುಷಿಯನ್ನು ಪದಗಳಲ್ಲಿ ಹೇಳುವುದು ಕಷ್ಟ. ಇಂದು ತಾಲ್ಚೇರ್‌ನ ಹಂಡಿಧುವಾ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ ಬಾಲ್ಯದ ನೆನಪುಗಳು ಮರುಕಳಿಸಿದವು. ನನ್ನ ಬಾಲ್ಯವನ್ನು ಐದನೇ ತರಗತಿಯವರೆಗೆ ಇದೇ ಶಾಲೆಯಲ್ಲಿ ಕಳೆದೆ. ಬಹಳ ವರ್ಷಗಳ ನಂತರ ಮತ್ತೆ ಈ ಕ್ಯಾಂಪಸ್‌ಗೆ ಬಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಭೇಟಿಯಾಗುವುದು ತುಂಬಾ ಆಹ್ಲಾದಕರ ಅನುಭವ.

ಇದನ್ನೂ ಓದಿ: ಅಧಿಕಾರಕ್ಕಾಗಿ ಗ್ಯಾರಂಟಿ ಘೋಷಿಸಿ ಈಗ ಪ್ರಧಾನಿ ಮೋದಿ ಕಡೆ ಬೊಟ್ಟು ತೋರಿಸುತ್ತೀರಾ?: ಸಿದ್ದರಾಮಯ್ಯಗೆ ಯಡಿಯೂರಪ್ಪ ಪ್ರಶ್ನೆ

ನನ್ನ ಸಂತೋಷಕ್ಕೆ ಇನ್ನೊಂದು ಕಾರಣವೆಂದರೆ, ಇಲ್ಲಿ ಓದುತ್ತಿರುವ ಯುವ ವಿದ್ಯಾರ್ಥಿಗಳ ಉತ್ಸಾಹ, ಓದುವ ತುಡಿತ ಮತ್ತು ಮುನ್ನಡೆಯಲಿರುವ ಧೈರ್ಯ ಅವರ ಕುಟುಂಬದ ಆರ್ಥಿಕ ಸ್ಥಿತಿಗಿಂತ ದೊಡ್ಡದು. ಈ ಮಕ್ಕಳು ನಾಳೆ ಭಾರತವನ್ನು ಮುನ್ನಡೆಸಲಿದ್ದಾರೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ