AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amarnath Yatra 2023: ಜುಲೈ 1 ರಿಂದ ಅಮರನಾಥ ಯಾತ್ರೆ, ದೇಗುಲದ ಕುರಿತ ಕುತೂಹಲಕಾರಿ ಸಂಗತಿಗಳು ಇಲ್ಲಿದೆ

ಪರಮಾತ್ಮನಾದ ಶಿವನು ನೆಲೆಸಿರುವ ಈ ಅಮರನಾಥ ದೇಗುಲದ ಬಗ್ಗೆ ಅನೇಕ ಕುತೂಹಲಕಾರಿ ವಿಷಯಗಳಿವೆ. ಅವುಗಳನ್ನು ಇಲ್ಲಿ ನೀಡಲಾಗಿದೆ.

Amarnath Yatra 2023: ಜುಲೈ 1 ರಿಂದ ಅಮರನಾಥ ಯಾತ್ರೆ, ದೇಗುಲದ ಕುರಿತ ಕುತೂಹಲಕಾರಿ ಸಂಗತಿಗಳು ಇಲ್ಲಿದೆ
ಅಮರನಾಥ ಗುಹೆಯಲ್ಲಿರುವ ಶಿವಲಿಂಗ (ಸಂಗ್ರಹ ಚಿತ್ರ)
Follow us
Ganapathi Sharma
|

Updated on: Jun 24, 2023 | 6:55 PM

ಅಮರನಾಥ ಯಾತ್ರೆಯು (Amarnath Yatra) ದೇಶದ ಅತ್ಯಂತ ಪವಿತ್ರ ತೀರ್ಥಯಾತ್ರೆಗಳಲ್ಲಿ ಒಂದಾಗಿದೆ. ಸಮುದ್ರ ಮಟ್ಟದಿಂದ 13,600 ಅಡಿ ಎತ್ತರದಲ್ಲಿರುವ ಅಮರನಾಥ ಕ್ಷೇತ್ರಕ್ಕೆ ಈ ವರ್ಷ ಜುಲೈ 1 ರಿಂದ ಆಗಸ್ಟ್ 31 ರವರೆಗೆ ಯಾತ್ರೆ ನಡೆಯಲಿದೆ. ಒಟ್ಟು 62 ದಿನಗಳ ಕಾಲ ನಡೆಯಲಿರುವ ಈ ಅಮರನಾಥ ಯಾತ್ರೆಯ ನೋಂದಣಿ ಪ್ರಕ್ರಿಯೆ ಏಪ್ರಿಲ್ 17ರಂದೇ ಆರಂಭಗೊಂಡಿತ್ತು. ಪರಮಾತ್ಮನಾದ ಶಿವನು ನೆಲೆಸಿರುವ ಈ ಅಮರನಾಥ ದೇಗುಲದ ಬಗ್ಗೆ ಅನೇಕ ಕುತೂಹಲಕಾರಿ ವಿಷಯಗಳಿವೆ. ಅವುಗಳನ್ನು ಇಲ್ಲಿ ನೀಡಲಾಗಿದೆ.

  • ಅಮರನಾಥ ದೇವಾಲಯವು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಹಿಂದೂ ದೇವಾಲಯವಾಗಿದೆ. ಅಮರನಾಥ ಗುಹೆಯು ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಈ ಕ್ಷೇತ್ರವು ಪಹಲ್ಗಾಮ್‌ನಿಂದ 45 ಕಿಮೀ ಮತ್ತು ಶ್ರೀನಗರದಿಂದ 141 ಕಿಮೀ ದೂರದಲ್ಲಿದೆ.
  • ಅಬುಲ್ ಫಜಲ್ ತಮ್ಮ ಅಮರ ಕೃತಿ ‘ಐನ್-ಎ-ಅಕ್ಬರ್’ನಲ್ಲಿ ಈ ದೇವಾಲಯವನ್ನು ‘ಆಧ್ಯಾತ್ಮಿಕ ಯಾತ್ರಾರ್ಥಿಗಳಿಗೆ ಉತ್ತಮ ತಾಣ’ ಎಂದು ಬಣ್ಣಿಸಿದ್ದಾರೆ.
  • ಸ್ವಾಮಿ ವಿವೇಕಾನಂದರು 1898 ರಲ್ಲಿ ಈ ಗುಹೆಗೆ ಭೇಟಿ ನೀಡಿದ್ದರು ಮತ್ತು ಅದರ ಸೌಂದರ್ಯಕ್ಕೆ ಮಾರುಹೋಗಿದ್ದರು. ಅದರ ಭೇಟಿಗಳ ವಿವರಗಳನ್ನು ‘ಸ್ವಾಮಿ ವಿವೇಕಾನಂದರ ಕೆಲವು ಪ್ರವಾಸ ಟಿಪ್ಪಣಿಗಳು’ ಇದರಲ್ಲಿ ಕಾಣಬಹುದು.
  • ಕೆಲವು ಶಿವ ಭಕ್ತರು ಅಮರನಾಥ ಯಾತ್ರೆಯನ್ನು ಸ್ವರ್ಗಕ್ಕೆ ಹೋಗುವ ಮಾರ್ಗವೆಂದು ಪರಿಗಣಿಸುತ್ತಾರೆ. ಇತರರು ಇದನ್ನು ಮೋಕ್ಷದ ಸ್ಥಳ ಎಂದೂ ಕರೆಯುತ್ತಾರೆ.
  • 11 ನೇ ಶತಮಾನದ ರಾಣಿ ಸೂರ್ಯಮತಿ ದೇವಾಲಯಕ್ಕೆ ತ್ರಿಶೂಲಗಳು, ಬನಲಿಂಗಗಳು ಮತ್ತು ಇತರ ಪವಿತ್ರ ಚಿಹ್ನೆಗಳನ್ನು ಉಡುಗೊರೆಯಾಗಿ ನೀಡಿದ್ದಾಳೆ ಎಂದು ಸ್ಥಳೀಯರು ಹೇಳುತ್ತಾರೆ.

ಇದನ್ನೂ ಓದಿ: Amarnath Yatra: ಅಮರನಾಥ ಯಾತ್ರೆಗೆ ಹೈ ಅಲರ್ಟ್; ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆಯಿತು ಉನ್ನತ ಮಟ್ಟದ ಸಭೆ

ಕಳೆದ ವರ್ಷ ಅಮರನಾಥ ಯಾತ್ರೆ ವೇಳೆ ಮೇಘಸ್ಫೋಟ ಹಾಗೂ ಭೂಕುಸಿತ ಸಂಭವಿಸಿ 15 ಮಂದಿ ಯಾತ್ರಾರ್ಥಿಗಳು ಮೃತಪಟ್ಟಿದ್ದರು. ಈ ವರ್ಷ ಯಾತ್ರೆಗೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾತ್ರೆಗೆ ಭಯೋತ್ಪಾದಕ ದಾಳಿ ಭೀತಿಯೂ ಇದ್ದು, ಕೇಂದ್ರ ಸರ್ಕಾರ ಈಗಾಗಲೇ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು, ಭದ್ರತಾ ಕ್ರಮಗಳನ್ನು ಕೈಗೊಂಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ