ಲಖ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ‘ನಿಮಗೆ ಇನ್ನೂ ನಾಲ್ಕು ದಿನ ಮಾತ್ರ ಬಾಕಿ ಉಳಿದಿದೆ’ ಎಂಬ ಜೀವ ಬೆದರಿಕೆ ಒಡ್ಡಲಾಗಿದೆ. ಉತ್ತರ ಪ್ರದೇಶ ಪೊಲೀಸರ ಸಹಾಯವಾಣಿ 112ಕ್ಕೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ ಸಿಎಂ ಆದಿತ್ಯನಾಥ್‌ಗೆ ಬೆದರಿಕೆ ಹಾಕಿದ್ದಾನೆ. ಉತ್ತರ ಪ್ರದೇಶದ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
ಏಪ್ರಿಲ್ 29ರಂದು ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಈ ಬೆದರಿಕೆ ಕರೆ ಬಂದಿದೆ. ಈ ಹಿಂದೆಯೂ ಕೆಲವು ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ಗೆ ಬೆದರಿಕೆ ಕರೆ ಬಂದಿದ್ದವು. ಕಳೆದ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿಯೂ ಇಂತಹುದೇ ಕರೆಗಳು ಬಂದಿದ್ದವು. ಈ ಪೈಕಿ 15ವರ್ಷದ ಬಾಲಕನೊಬ್ಬ ಯೋಗಿ ಆದಿತ್ಯನಾಥ್‌ಗೆ ಬೆದರಿಕೆ ಒಡ್ಡಿದ್ದ ಕಾರಣ ಆತನನ್ನು ರಿಮ್ಯಾಂಡ್ ಹೋಂಗೆ ಕಳಿಸಲಾಗಿತ್ತು.
ಈ ಹಿಂದಿನ ಬೆದರಿಕೆ ಪ್ರಕರಣ
ಕಳೆದ ತಿಂಗಳ ರ ರಂದು (ಏಪ್ರಿಲ್ 6) ಗೃಹಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವುದಾಗಿ ಕೇಂದ್ರೀಯ ಮೀಸಲು ಪಡೆ (CRPF)ಗೆ ಬೆದರಿಕೆ ಇಮೇಲ್ವೊಂದು ಬಂದಿತ್ತು. ಈ ಇಬ್ಬರೂ ರಾಜಕೀಯ ನಾಯಕರ ಜೀವ ತೆಗೆಯುವುದಾಗಿ ಸಿಆರ್ಪಿಎಫ್ನ ಮುಂಬೈ ಪ್ರಧಾನ ಕಚೇರಿಗೆ ಇಮೇಲ್ ಕಳಿಸಿದ್ದಾಗಿ ಮೂಲಗಳು ತಿಳಿಸಿದ್ದು, ಕೆಲವು ಪುಣ್ಯಸ್ಥಳಗಳು, ಪ್ರಮುಖ ಪ್ರದೇಶಗಳ ಮೇಲೆ ಕೂಡ ದಾಳಿ ನಡೆಸುವುದಾಗಿ ಮೇಲ್ನಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದವು.
ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್ರನ್ನು ಆತ್ಮಾಹುತಿ ದಾಳಿಯ ಮೂಲಕ ಹತ್ಯೆ ಮಾಡುವುದಾಗಿ ಬೆದರಿಕೆ ಇಮೇಲ್ ಬಂದಿತ್ತು. ತಾವು 11 ಜನ ಸೂಸೈಡ್ ಬಾಂಬರ್ಗಳಿದ್ದಿದ್ದಾಗ್ಯೂ ಅವರು ಹೇಳಿಕೊಂಡಿದ್ದಾರೆ. ಈ ಮೇಲ್ನ್ನು ತನಿಖಾ ದಳಗಳು ಮತ್ತು ಭದ್ರತಾ ಪಡೆಗಳ ಮುಖ್ಯಸ್ಥರಿಗೂ ಫಾರ್ವರ್ಡ್ ಮಾಡಲಾಗಿದೆ ಎಂದು ಸಿಆರ್ಪಿಎಫ್ ಹೇಳಿತ್ತು. ಇಮೇಲ್ ಬಂದು ಕೆಲವು ದಿನಗಳು ಕಳೆದಿದ್ದವು.
ಅಮಿತ್ ಶಾ ಚತ್ತೀಸ್ಗಡ್ದ ಬಸ್ಗುಡಾ ಸಿಆರ್ಪಿಎಫ್ ಕ್ಯಾಂಪ್ಗೆ ಭೇಟಿ ನೀಡಿದ್ದರು. ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು ಅಮಿತ್ ಶಾ, ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ ಇದೇ ಮೊದಲೇನೂ ಅಲ್ಲ. ಇದೇ ವರ್ಷ ಜನವರಿಯಲ್ಲಿ ಉತ್ತರಪ್ರದೇಶ ತುರ್ತು ಸೇವೆ ವಿಭಾಗಕ್ಕೆ, ಯೋಗಿ ಆದಿತ್ಯನಾಥ್ರನ್ನು 24 ಗಂಟೆಯಲ್ಲಿ ಎಕೆ 47 ರೈಫಲ್ನಿಂದ ಕೊಲ್ಲುವುದಾಗಿ ಸಂದೇಶ ಕಳಿಸಲಾಗಿತ್ತು. ನವೆಂಬರ್ನಲ್ಲೂ ಇಂಥದ್ದೇ ಒಂದು ಸಂದೇಶ ಇದೇ ವಿಭಾಗಕ್ಕೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಗ್ರಾದ ಅಪ್ರಾಪ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: IPL 2021: ಐಪಿಎಲ್ ಒಳಗೆ ಕೊರೊನಾ ಪ್ರವೇಶಿಸಲು ದೋಷಪೂರಿತ ಜಿಪಿಎಸ್ ಸಾಧನ ಕಾರಣವಾಯ್ತ? ಇಲ್ಲಿದೆ ರೋಚಕ ಸುದ್ದಿ
Coronavirus India Update: ಭಾರತದಲ್ಲಿ ಒಂದೇ ದಿನ 3.57 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 3,449 ಮಂದಿ ಸಾವು
(Yogi Adityanath gets death treat warns only four days left )