Coronavirus India Update: ಭಾರತದಲ್ಲಿ ಒಂದೇ ದಿನ 3.57 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 3,449 ಮಂದಿ ಸಾವು
Covid-19 India: ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಇದೀಗ ದೇಶದಲ್ಲಿರುವ ಕೊವಿಡ್ ರೋಗಿಗಳ ಒಟ್ಟು ಸಂಖ್ಯೆ 2.02 ಕೋಟಿ. ಸಕ್ರಿಯ ಪ್ರಕರಣಗಳ ಸಂಖ್ಯೆ 34 ಲಕ್ಷ ಆಗಿದ್ದು 1.66 ಕೋಟಿ ಮಂದಿ ಚೇತರಿಸಿಕೊಂಡಿದ್ದಾರೆ.
ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಪತ್ತೆಯಾಗಿದ್ದು 3.57 ಲಕ್ಷಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣಗಳು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಸಚಿವಾಲಯದ ಮಾಹಿತಿ ಪ್ರಕಾರ ಇದೀಗ ದೇಶದಲ್ಲಿರುವ ಕೊವಿಡ್ ರೋಗಿಗಳ ಒಟ್ಟು ಸಂಖ್ಯೆ 2.02 ಕೋಟಿ. ಸಕ್ರಿಯ ಪ್ರಕರಣಗಳ ಸಂಖ್ಯೆ 34 ಲಕ್ಷ ಆಗಿದ್ದು 1.66 ಕೋಟಿ ಮಂದಿ ಚೇತರಿಸಿಕೊಂಡಿದ್ದಾರೆ. ಒಂದೇ ದಿನ 3, 449 ಮಂದಿ ಸಾವಿಗೀಡಾಗಿದ್ದು, ಸಾವಿಗೀಡಾದವರ ಸಂಖ್ಯೆ 2.22ಲಕ್ಷಕ್ಕೇರಿದೆ.
ಕಳೆದ 30 ದಿನಗಳಲ್ಲಿ ಇದೇ ಮೊದಲ ಬಾರಿ ಮಹಾರಾಷ್ಟ್ರದಲ್ಲಿ ದಿನವೊಂದಕ್ಕೆ ಪತ್ತೆಯಾದ ಕೊವಿಡ್ ಪ್ರಕರಣಗಳ ಸಂಖ್ಯೆ 50,000ದಿಂದ ಕೆಳಗಿಳಿದಿದೆ. ಸೋಮವಾರ 48,621 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಪ್ರಕರಣಗಳಸಂಖ್ಯೆ 47,71,022 ಆಗಿದೆ.567 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 70,851 ಆಗಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆ ಹೇಳಿದೆ. ಏಪ್ರಿಲ್ 3ರಂದು ರಾಜ್ಯದಲ್ಲಿ 49,447 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಏಪ್ರಿಲ್ 1ರಂದು 43,183 ಮತ್ತು ಏಪ್ರಿಲ್2ರಂದು 47,827 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ಸರಾಸರಿ 60,000 ಪ್ರಕರಣಗಳು ಪತ್ತೆಯಾಗಿವೆ.
India reports 3,57,229 new COVID19 cases, 3,20,289 discharges and 3,449 deaths in the last 24 hours, as per Union Health Ministry
Total cases: 2,02,82,833 Total recoveries: 1,66,13,292 Death toll: 2,22,408 Active cases: 34,47,133
Total vaccination: 15,89,32,921 pic.twitter.com/Zr1mimN4vH
— ANI (@ANI) May 4, 2021
ತೆಲಂಗಾಣ
Telangana reported 6,876 new cases, 59 deaths and 7,432 recoveries on 3rd May; active cases 79,520 pic.twitter.com/9xgD8Zs8KT
— ANI (@ANI) May 4, 2021
ಜಮ್ಮು ಕಾಶ್ಮೀರದಲ್ಲಿ ಕೊರೊನಾ ಕರ್ಫ್ಯೂ ಹೇರಲಾಗಿದೆ . ಮೇ 6 ರವರೆಗೆ ಶ್ರೀನಗರ,ಬಾರಮುಲ್ಲಾ, ಜಮ್ಮು ಮತ್ತು ಬುದ್ಗಾಂನಲ್ಲಿ ಲಾಕ್ಡೌನ್ ಇದೆ.
Jammu & Kashmir: ‘Corona curfew’ remains imposed in Srinagar, in view of rising COVID19 cases; essential services allowed
Lockdown is imposed in four districts -Srinagar, Jammu, Baramulla and Budgam till May 6 pic.twitter.com/KnIqGXPImJ
— ANI (@ANI) May 4, 2021
ಕೇರಳದಲ್ಲಿ ಸೋಮವಾರ 26,011 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 16,64,789ಕ್ಕೇರಿದೆ. 45 ಸಾವು ವರದಿ ಆಗಿದ್ದು ಸಾವಿಗೀಡಾದವರ ಸಂಖ್ಯೆ5,450 ಆಗಿದೆ. ಮಿಜೊರಾಂನಲ್ಲಿ 198 ಹೊಸಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 1,427 ಆಗಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 18,043 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು20,293 ಚೇತರಿಸಿಕೊಂಡಿದ್ದಾರೆ. 448 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳು: 89,592, ಸಾವಿನ ಸಂಖ್ಯೆ : 17,414.
ಅಸ್ಸಾಂನಲ್ಲಿ 4,489 ಹೊಸ ಪ್ರಕರಣಗಳು ಪತ್ತೆಯಾಗಿದ್ದು 2,534 ಮಂದಿ ಚೇತರಿಸಿಕೊಂಡಿದ್ದಾರೆ 29 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳು: 26,477. ಸಾವಿನ ಸಂಖ್ಯೆ- 1,347. ಛತ್ತೀಸಗಡದಲ್ಲಿ 15,274 ಹೊಸ ಪ್ರಕರಣಗಳು ಪತ್ತೆಯಾಗಿದ್ದು , 1,088 ಮಂದಿ ಚೇತರಿಸಿಕೊಂಡಿದ್ದಾರೆ 266 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳು: 1,20,977, ಸಾವಿನ ಸಂಖ್ಯೆ: 9,275. ಹರ್ಯಾಣದಲ್ಲಿ 12,885 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 13,293 ಮಂದಿ ಚೇತರಿಸಿಕೊಂಡಿದ್ದಾರೆ, 140 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳು: 1,04,722, ಚೇತರಿಕೆ: 4,18,425. ಸಾವಿನ ಸಂಖ್ಯೆ 4,626 ಆಗಿದೆ.
ಮಧ್ಯಪ್ರದೇಶದಲ್ಲಿ 12062 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 13408 ಮಂದಿ ಚೇತರಿಸಿಕೊಂಡಿದ್ದಾರೆ, 93 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಪ್ರಕರಣ: 6,00,430 ಸಾವಿನ ಸಂಖ್ಯೆ : 5,905 ಸಕ್ರಿಯ ಪ್ರಕರಣ : 85,750
ಪಂಜಾಬ್ ನಲ್ಲಿ 6,798 ಹೊಸ ಪ್ರಕರಣಗಳು ಪತ್ತೆಯಾಗಿದ್ದು,, 6,016 ಚೇತರಿಸಿದ್ದಾರೆ 157 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು : 60,709 ಚೇತರಿಸಿಕೊಂಡವರು: 3,21,861 ಸಾವಿನ ಸಂಖ್ಯೆ: 9,472
ಹಿಮಾಚಲ ಪ್ರದೇಶದಲ್ಲಿ 2630 ಹೊಸ ಪ್ರಕರಣಗಳು ಪತ್ತೆಯಾಗಿದ್ದು 1526 ಮಂದಿ ಚೇತರಿಸಿಕೊಂಡಿದ್ದಾರೆ. 43 ಮಂದಿ ಸಾವಿಗೀಡಾಗಿದ್ದಾರೆ .
ಇದನ್ನೂ ಓದಿ: Explainer: ಏನಿದು ವೈದ್ಯಕೀಯ ಆಮ್ಲಜನಕ? ಇದನ್ನು ಉತ್ಪಾದಿಸುವುದು ಹೇಗೆ?
Published On - 10:37 am, Tue, 4 May 21