AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer: ಏನಿದು ವೈದ್ಯಕೀಯ ಆಮ್ಲಜನಕ? ಇದನ್ನು ಉತ್ಪಾದಿಸುವುದು ಹೇಗೆ?

Medical oxygen: ಏರ್ ಲಿಕ್ವಿ ಸಾಂಟ್ ಫ್ರಾನ್ಸ್ ಸಂಸ್ಥೆಯ  ಪ್ರಕಾರ ಇತರ ಅನಿಲ ಮತ್ತು ವಾತಾವಾರಣ ದಲ್ಲಿರುವ ವಿವಿಧ ಕಣಗಳಿಂದ ಕಂಪ್ರೆಶನ್, ಫಿಲ್ಟರೇಷನ್ ಮತ್ತು ಪ್ಯೂರಿಫಿಕೇಶನ್ ಮೂಲಕ ಆಕ್ಸಿಜನ್ ಅನ್ನು ಪ್ರತ್ಯೇಕಿಸಲಾಗುತ್ತದೆ.

Explainer: ಏನಿದು ವೈದ್ಯಕೀಯ ಆಮ್ಲಜನಕ? ಇದನ್ನು ಉತ್ಪಾದಿಸುವುದು ಹೇಗೆ?
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:May 03, 2021 | 6:49 PM

Share

ಮನುಷ್ಯನ ದೇಹದಲ್ಲಿ ಶೇ. 65ರಷ್ಟು ಆಮ್ಲಜನಕವಿದೆ. ಕೊವಿಡ್ ರೋಗಿಗಳಿಗೆ ಉಸಿರಾಟದ ತೊಂದರೆಯಾದಾಗ ಅವರ ದೇಹದಲ್ಲಿರುವ ಆಕ್ಸಿಜನ್ ಮಟ್ಟ ಕುಸಿಯುತ್ತದೆ. ಪ್ರಾಣ ಉಳಿಸಲು ಆಕ್ಸಿಜನ್ ನೀಡಲೇಬೇಕು. ಭಾರತದಲ್ಲಿ  ಕೊವಿಡ್  ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು ಆಕ್ಸಿಜನ್ ಸಿಗದೆ ಜನರು ಸಾವಿಗೀಡಾಗುತ್ತಿರುವ ಪ್ರಕರಣಗಳು ಪ್ರತಿದಿನ ವರದಿಯಾಗುತ್ತಲೇ ಇರುತ್ತವೆ. ವೈದ್ಯಕೀಯ ಆಮ್ಲಜನಕ ಅಥವಾ Medical oxygenಗಾಗಿ ಜನರು ಅಳುತ್ತಿದ್ದಾರೆ .ತಮ್ಮ ಕಣ್ಣಮುಂದೆಯೇ ಕುಟುಂಬದವರು ಆಕ್ಸಿಜನ್ ಸಿಗದೆ ನರಳಾಡಿ ಸಾಯುವಾಗ ಅಸಹಾಯಕರಾಗಿ ಕಣ್ಣೀರು ಸುರಿಸುವ ಜನರ ಚಿತ್ರಗಳನ್ನು ನಾವು ನೋಡುತ್ತಿದ್ದೇವೆ.

 ಏನಿದು ವೈದ್ಯಕೀಯ ಆಕ್ಸಿಜನ್ ? ಅದನ್ನು ತಯಾರಿಸುವುದು ಹೇಗೆ?

ಆಕ್ಸಿಜನ್ ಅನ್ನು  ಎರಡು ರೀತಿಯಲ್ಲಿ ತಯಾರಿಸಲಾಗುತ್ತದೆ  

ಮೆಡಿಕಲ್ ಆಕ್ಸಿಜನ್: ಏರ್ ಲಿಕ್ವಿ ಸಾಂಟ್ ಫ್ರಾನ್ಸ್ ಸಂಸ್ಥೆಯ  ಪ್ರಕಾರ ಇತರ ಅನಿಲ ಮತ್ತು  ವಾತಾವಾರಣ ದಲ್ಲಿರುವ ವಿವಿಧ ಕಣಗಳಿಂದ ಕಂಪ್ರೆಶನ್ (ಸಂಕುಚಿತಗೊಳಿಸುವಿಕೆ)  , ಫಿಲ್ಟರೇಷನ್ (ಶೋಧಿಸುವ  ಕ್ರಿಯೆ) ಮತ್ತು ಪ್ಯೂರಿಫಿಕೇಶನ್ (ಶುದ್ಧೀಕರಣ) ಮೂಲಕ ಆಕ್ಸಿಜನ್ ಅನ್ನು  ಪ್ರತ್ಯೇಕಿಸಲಾಗುತ್ತದೆ. ಈ ರೀತಿಯಾಗಿ ಲಭಿಸಿದ ಆಕ್ಸಿಜನ್ ಶೇ99.5 ರಷ್ಟು ಶುದ್ಧವಾಗಿದ್ದು, ಇದನ್ನು ಸತತವಾಗಿ ಪರೀಕ್ಷೆಗೊಳಪಡಿಸಲಾಗುತ್ತದೆ.  ಇದನ್ನು ಕಂಪ್ರೆಶನ್​ಗೊಳಪಡಿಸಿ ದ್ರವ ರೂಪಕ್ಕೆ ತರಲಾಗುತ್ತದೆ. ಇದರ ಉಷ್ಣತೆ 182 ಡಿಗ್ರಿ ಸೆಲ್ಶಿಯಸ್​ಗಿಂತ ಕಡಿಮೆ ಇರಬೇಕು. 1 ಲೀಟರ್ ದ್ರವರೂಪದ ಆಕ್ಸಿಜನ್ ಸಾಮಾನ್ಯ ಅನಿಲ ರೂಪದಲ್ಲಿದ್ದರೆ  ಸುಮಾರು  800 ಲೀಟರ್​ಗೆ ಸಮವಾಗಿರುತ್ತದೆ.

ಒಂದು ಲೀಟರ್ ಕಂಪ್ರೆಸ್ಡ್  ಲೀಟರ್ ಆಮ್ಲಜನಕವು ಸುಮಾರು 200 ಲೀಟರ್ ಸಾಮಾನ್ಯ ಆಮ್ಲಜನಕವನ್ನು ಹೊಂದಿರುತ್ತವೆ.

ಕಂಪ್ರೆಸ್ಡ್ ಆಕ್ಸಿಜನ್: ವಾತಾವರಣದಲ್ಲಿರುವ ಸಾರಜನಕವನ್ನು ಬೇರ್ಪಡಿಸುವ ಯಂತ್ರಗಳು ಆಮ್ಲಜನಕದ ಮಟ್ಟವನ್ನು ಶೇ.93ರಷ್ಟು ಹೆಚ್ಚಿಸಬಹುದು.. ಆಸ್ಪತ್ರೆಯಲ್ಲಿರುವ ಯಂತ್ರಗಳು ಪೋರ್ಟಬಲ್ ಅಥವಾ ದೊಡ್ಡದಾಗಿರಬಹುದು. ಆದಾಗ್ಯೂ, ಈ ಯಂತ್ರಗಳು ಬೇಡಿಕೆಯ ಹೆಚ್ಚಳವನ್ನು ಪೂರೈಸಲು ಸಾಧ್ಯವಿಲ್ಲ.

ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಆಕ್ಸಿಜನ್ ಕೊರತೆ ಯಾಕೆ?

ವೈದ್ಯಕೀಯ ಆಮ್ಲಜನಕದ ಪೂರೈಕೆಯ ಕೊರತೆಯನ್ನು ಎದುರಿಸುತ್ತಿರುವ ಇತ್ತೀಚಿನ ದೇಶ ಭಾರತ ಮಾತ್ರ. ಈ ಮೊದಲು ಸಾಂಕ್ರಾಮಿಕ ರೋಗ ಹರಡಿದಾಗ ಬ್ರೆಜಿಲ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಪೆರು ಮತ್ತು ವೆನೆಜುವೆಲಾದ ದೇಶಗಳು ಇದೇ ರೀತಿ  ಆಕ್ಸಿಜನ್​ಗಾಗಿ ಪರದಾಡಿದ್ದವು.

ಕೆಳ ಮತ್ತು  ಮಧ್ಯಮ ಆದಾಯದ ರಾಷ್ಟ್ರಗಳು ಆರೋಗ್ಯ ವ್ಯವಸ್ಥೆಯನ್ನು ಉತ್ತಮ ಪಡಿಸಲು ಸಹಾಯ ಮಾಡುವ ಜಾಗತಿಕ ಸಂಸ್ಥೆ ಯುನಿಟೈಡ್ ಪ್ರಕಾರ ಸೀಮಿತ ಮೂಲಸೌಕರ್ಯ ಮತ್ತು ವ್ಯವಸ್ಥೆಯ ಕೊರತೆ ಜತೆಗೆ ವೈದ್ಯಕೀಯ ಆಮ್ಲಜನಕದ ಪೂರೈಕೆಯ ಕೊರತೆಯೂ ಇದೆ ಎಂದಿದೆ.

ಮನೆಯಲ್ಲಿ ಅಥವಾ ಆಸ್ಪತ್ರೆಗಳಲ್ಲಿ ಇರಲಿ, ಉಸಿರಾಟದ ತೊಂದರೆಯಲ್ಲಿರುವ ಜನರಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಆಮ್ಲಜನಕ ಮುಖ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ಕೊವಿಡ್ -19 ನಿಂದ ಬಳಲುತ್ತಿರುವ ಐದರಲ್ಲಿ ಒಬ್ಬರಿಗೆ ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟವು ಸಾಕಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಆಮ್ಲಜನಕದ ಅಗತ್ಯವಿದೆ.

ಆಮ್ಲಜನಕ ಕೊರತೆಯನ್ನು ಎದುರಿಸುತ್ತಿರುವ ದೇಶಗಳಿಗೆ ಇನ್ನೆಷ್ಟು ಆಮ್ಲಜನಕದ ಅಗತ್ಯವಿದೆ?

ಫೆಬ್ರವರಿಯಲ್ಲಿ 5 ಲಕ್ಷ ಜನರಿಗೆ ದಿನಕ್ಕೆ 12 ಲಕ್  ಆಮ್ಲಜನಕ ಡಬ್ಬಿಗಳು ಬೇಕಾಗುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ  (WHO )ಅಂದಾಜಿಸಿತ್ತು

ಯುನಿಟೈಡ್ ಈ ವರ್ಷ ಹೆಚ್ಚಿನ ಅಗತ್ಯವನ್ನು ಎದುರಿಸುತ್ತಿರುವ ದೇಶಗಳಿಗೆ ಸಹಾಯ ಮಾಡಲು 6160 ಕೋಟಿ ಬೇಕು ಎಂದು ಹೇಳಿದೆ.

ಇದು ಜಾಗತಿಕ ತುರ್ತುಸ್ಥಿತಿಯಾಗಿದ್ದು, ಇದು ನಿಜವಾದ ಜಾಗತಿಕ ಪ್ರತಿಕ್ರಿಯೆಯ ಅಗತ್ಯವಿದೆ ಎಂದು ಯುನಿಟೈಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಫಿಲಿಪ್ ಡುನೆಟನ್ ಫೆಬ್ರವರಿಯಲ್ಲಿ ಹೇಳಿದ್ದರು.

ಮಲಾವಿ, ನೈಜೀರಿಯಾ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಆಮ್ಲಜನಕ ಪೂರೈಕೆಯಲ್ಲಿ ಹೆಚ್ಚಿನ ತೊಂದರೆಗಳನ್ನು ಎದುರಿಸುತ್ತಿರುವ ಸುಮಾರು 20 ದೇಶಗಳನ್ನು ಇದು ಗುರುತಿಸಿದೆ.

ಅತೀ ಹೆಚ್ಚು ಆಕ್ಸಿಜನ್ ಉತ್ಪಾದಿಸುವ ದೇಶ ಯಾವುದು?

ಚೀನಾ ಹೊರತು ಪಡಿಸಿ ವೈದ್ಯಕೀಯ ಆಮ್ಲಜನಕದ ಮೂರು ಪ್ರಮುಖ ಉತ್ಪಾದಕರು ಜರ್ಮನ್ ಸಂಸ್ಥೆ ಲಿಂಡೆ, ಇದು ಅಮೆರಿಕದ ಪ್ರಾಕ್ಸೇರ್ ಸಹಭಾಗಿತ್ವ ಹೊಂದಿದೆ. ಫ್ರೆಂಚ್ ಸಂಸ್ಥೆ ಏರ್ ಲಿಕ್ವಿಡ್ ಮತ್ತು ಅಮೆರಿಕದ ಕಂಪನಿ ಏರ್ ಪ್ರಾಡಕ್ಟ್ಸ್.

ಆದರೆ ವೈದ್ಯಕೀಯ ಆಮ್ಲಜನಕದ ಸ್ಥಳೀಯ ಮತ್ತು ಪ್ರಾದೇಶಿಕ ಉತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಏಕೆಂದರೆ ಇದನ್ನು ದೂರದೂರುಗಳಿಗೆ ಸರಬರಾಜು ಮಾಡುವುದು ಕಷ್ಟ.

ಉಕ್ಕು ಮತ್ತು ರಾಸಾಯನಿಕ ಕಾರ್ಖಾನೆಗಳು  ವೈದ್ಯಕೀಯ ಕ್ಷೇತ್ರಕ್ಕಿಂತ ಹೆಚ್ಚಿನ ಆಮ್ಲಜನಕ ಪೂರೈಸಲು ಉತ್ಪಾದನಾ ಸೌಲಭ್ಯಗಳನ್ನು ವಿನ್ಯಾಸಗೊಳಿಸಿದ್ದರಿಂದ ಕೈಗಾರಿಕೀಕರಣಗೊಂಡ ದೇಶಗಳಲ್ಲಿ ಇದರ ಕೊರತೆ ಇರುವುದಿಲ್ಲ.

ಇದನ್ನೂ ಓದಿ: Oxygen Shortage: ಕೊವಿಡ್​ ಕೇಂದ್ರದಲ್ಲಿಯೇ ಆಕ್ಸಿಜನ್ ಘಟಕ ಸ್ಥಾಪನೆ; ರಾಷ್ಟ್ರರಾಜಧಾನಿಯಲ್ಲೇ ಮೊದಲ ಪ್ರಯೋಗ ಇದು

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಯಲ್ಲೇ 22 ರೋಗಿಗಳ ಸಾವು | ಮೃತ ಸಂಬಂಧಿಕರ ಆಕ್ರಂದನ

(Explained What is Medical Oxygen How is it made and supplied)

Published On - 6:46 pm, Mon, 3 May 21

ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ