ವೈದ್ಯಕೀಯ ಆಮ್ಲಜನಕ ಕೊರತೆ: ಬೇಡಿಕೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಎಂದು ರಾಜ್ಯಗಳಿಗೆ ಸಲಹೆ ನೀಡಿದ ಪಿಯೂಷ್ ಗೋಯಲ್​

ಕೊರೊನಾ ಕೇಸ್​ಗಳು ಹೆಚ್ಚಾದಂತೆ ದೇಶದ ಆರೋಗ್ಯ ಕ್ಷೇತ್ರಕ್ಕೆ, ಇಲ್ಲಿನ ಮೂಲಸೌಕರ್ಯಕ್ಕೆ ಸವಾಲು ಎದುರಾಗುತ್ತದೆ. ನಾವು ರಾಜ್ಯಸರ್ಕಾರಗಳೊಂದಿಗೆ ಸದಾ ಇದ್ದೇವೆ. ಆದರೆ ರಾಜ್ಯ ಸರ್ಕಾರಗಳು ಪೂರೈಕೆ ಮತ್ತು ಬೇಡಿಕೆಯ ನಿರ್ವಹಣೆ ಸರಿಯಾಗಿ ಮಾಡಬೇಕು ಎಂದು ಪಿಯೂಷ್​ ಗೋಯಲ್​ ಹೇಳಿದ್ದಾರೆ.

ವೈದ್ಯಕೀಯ ಆಮ್ಲಜನಕ ಕೊರತೆ: ಬೇಡಿಕೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಎಂದು ರಾಜ್ಯಗಳಿಗೆ ಸಲಹೆ ನೀಡಿದ ಪಿಯೂಷ್ ಗೋಯಲ್​
ರೈಲ್ವೆ ಸಚಿವ ಪಿಯೂಷ್ ಗೋಯಲ್
Follow us
|

Updated on: Apr 19, 2021 | 9:48 AM

ದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತರು​ ಹೆಚ್ಚುತ್ತಿರುವ ಬೆನ್ನಲ್ಲೇ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿದೆ. ಈ ಬಗ್ಗೆ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಈ ಮಧ್ಯೆ ವೈದ್ಯಕೀಯ ಆಮ್ಲಜನಕದ ಬೇಡಿಕೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತೆ ಕೇಂದ್ರ ಸಚಿವ ಪಿಯೂಷ್​ ಗೋಯಲ್​ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.

12 ರಾಜ್ಯ ಸರ್ಕಾರಗಳೊಂದಿಗೆ ಸಭೆ ವಿಸ್ತೃತ ಸಭೆ ನಡೆಸಿ, ಆಮ್ಲಜನಕ ಕೊರತೆ ಬಗ್ಗೆ ಪರಾಮರ್ಶಿಸಲಾಗಿದೆ. ಅಲ್ಲದೆ, ರಾಜ್ಯಗಳ ಅಗತ್ಯತೆಯನ್ನೂ ಕೇಳಲಾಗಿದೆ. ಒಟ್ಟು 6177 ಮೆಟ್ರಿಕ್​ ಟನ್​ ಆಕ್ಸಿಜನ್​ಗಳನ್ನು ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮಧ್ಯೆ ರಾಜ್ಯಗಳು ಆಮ್ಲಜನಕ ಬೇಡಿಕೆಯನ್ನು ನಿಯಂತ್ರಣ ಮಾಡಬೇಕು. ಪೂರೈಕೆ ನಿರ್ವಹಣೆ ಎಷ್ಟು ಮುಖ್ಯವೋ.. ಬೇಡಿಕೆ ನಿರ್ವಹಣೆಯೂ ಅಷ್ಟೇ ಮುಖ್ಯ ಎಂದು ಪಿಯೂಷ್​ ಗೋಯಲ್ ತಿಳಿಸಿದ್ದಾರೆ.

ಕೊರೊನಾ ಕೇಸ್​ಗಳು ಹೆಚ್ಚಾದಂತೆ ದೇಶದ ಆರೋಗ್ಯ ಕ್ಷೇತ್ರಕ್ಕೆ, ಇಲ್ಲಿನ ಮೂಲಸೌಕರ್ಯಕ್ಕೆ ಸವಾಲು ಎದುರಾಗುತ್ತದೆ. ನಾವು ರಾಜ್ಯಸರ್ಕಾರಗಳೊಂದಿಗೆ ಸದಾ ಇದ್ದೇವೆ. ಆದರೆ ರಾಜ್ಯ ಸರ್ಕಾರಗಳು ಪೂರೈಕೆ ಮತ್ತು ಬೇಡಿಕೆಯ ನಿರ್ವಹಣೆ ಸರಿಯಾಗಿ ಮಾಡಬೇಕು. ಕೊವಿಡ್​ -19 ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ. 9 ಕೈಗಾರಿಕೆಗಳನ್ನು ಹೊರತುಪಡಿಸಿ, ಉಳಿದ ಕೈಗಾರಿಕೆಗಳಿಗೆ ಏಪ್ರಿಲ್​ 22ರಿಂದ ಆಕ್ಸಿಜನ್​ ಪೂರೈಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗುವುದು. ವೈದ್ಯಕೀಯ ಆಮ್ಲಜನಕವನ್ನು ಹೆಚ್ಚೆಚ್ಚು ಪೂರೈಸುವ ದೃಷ್ಟಿಯಿಂದ ಇದನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಅತಿಹೆಚ್ಚಿನ ಪ್ರಮಾಣದ ಆಕ್ಸಿಜನ್ ಅಂದರೆ ಸುಮಾರು 1500 ಮೆಟ್ರಿಕ್​ ಟನ್​ಗಳಷ್ಟನ್ನು ಮಹಾರಾಷ್ಟ್ರಕ್ಕೆ ನೀಡಲಾಗುವುದು, ದೆಹಲಿಗೆ 350 ಮೆಟ್ರಿಕ್​ ಟನ್ ಮತ್ತು ಉತ್ತರ ಪ್ರದೇಶಕ್ಕೆ 800 ಮೆಟ್ರಿಕ್​ ಟನ್ ಪೂರೈಕೆ ಮಾಡುವುದಾಗಿ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಹಾರದ ಮಾಜಿ ಸಚಿವ, ಜೆಡಿಯು ಶಾಸಕ ಮೇವಾಲಾಲ್ ಚೌಧರಿ ಕೊರೊನಾಗೆ ಬಲಿ

ರೆಮ್​ಡೆಸಿವರ್​​ಗೆ ಪರ್ಯಾಯ ದೇಸಿ ಆಯುಧ್​ ಅಡ್ವಾನ್ಸ್​! ಔಷಧಿ ಪಡೆದ ವಾರದೊಳಗೆ ಸೋಂಕಿತರು ಗುಣಮುಖ ಎಂದ ಅಧ್ಯಯನ

(States should keep Medical oxygen demand under Control says Piyush Goyal)