Mamata Banerjee: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮೇ 5ರಂದು ಮಮತಾ ಬ್ಯಾನರ್ಜಿ ಪ್ರಮಾಣ ವಚನ
West Bengal Assembly Elections: ಪಶ್ಚಿಮ ಬಂಗಾಳದಲ್ಲಿ ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅವರ ಮೇ 5 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನೂತನವಾಗಿ ಚುನಾಯಿತರಾದ ಶಾಸಕರು ಮೇ 6ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಮೇ 5ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಗೆದ್ದ ಟಿಎಂಸಿ ಪಕ್ಷದ ನಾಯಕಿ ಮಮತಾ ಇದು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರ ಮೇ 5 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನೂತನವಾಗಿ ಚುನಾಯಿತರಾದ ಶಾಸಕರು ಮೇ 6ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರಿಗೆ ಸ್ಪೀಕರ್ ಬಿಮಲ್ ಬಂದೋಪಾಧ್ಯಾಯ್ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಟಿಎಂಸಿ ಪಾರ್ಥ ಚಟರ್ಜಿ ಹೇಳಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮ ಸರಳವಾಗಿ ನಡೆಯಲಿದೆ.
ಟಿಎಂಸಿ ಗೆಲುವಿಗೆ ಅರವಿಂದ ಕೇಜ್ರಿವಾಲ್, ಉದ್ದವ್ ಠಾಕ್ರೆ, ಕ್ಯಾಪ್ಟನ್ ಅಮರಿಂದರ್ ಸಿಂಗ್, ಭುಪಿಂದರ್ ಸಿಂಗ್ ಹೂಡಾ, ರಜನೀಕಾಂತ್, ಒಮರ್ ಅಬ್ದುಲ್ಲ ಮೊದಲಾದ ಗಣ್ಯರು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಬಂಗಾಳದ ಜನರು ವಿಭಜಕ ಶಕ್ತಿಗಳನ್ನು ದೂರ ದೂಡಿದ್ದಾರೆ ಎಂದು ಮಮತಾ ಹೇಳಿದ್ದಾರೆ.
This is the first time a prime minister did not call: CM Mamata Banerjee on congratulatory message from PM Modi
— Press Trust of India (@PTI_News) May 3, 2021
ಅದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮಮತಾ ಅವರಿಗೆ ಕರೆ ಮಾಡಿಲ್ಲ.ಇದೇ ಮೊದಲ ಬಾರಿ ದೇಶದ ಪ್ರಧಾನಿಯೊಬ್ಬರು ಕರೆ ಮಾಡಿ ಅಭಿನಂದನೆ ಸಲ್ಲಿಸದೇ ಇರುವುದು ಎಂದು ಮಮತಾ ಬ್ಯಾನರ್ಜಿ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 213ಸೀಟುಗಳನ್ನು ಗೆದ್ದು ಅಧಿಕಾರಕ್ಕೇರಿದೆ. 294 ಸೀಟುಗಳಿರುವ ವಿಧಾನಸಭೆಯಲ್ಲಿ ಬಿಜೆಪಿ 77 ಸೀಟುಗಳನ್ನು ಗಳಿಸಿದೆ. ಆದಾಗ್ಯೂ, ಮುರ್ಷಿದಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಕೊವಿಡ್ನಿಂದ ಮೃತಪಟ್ಟಿರುವ ಕಾರಣ ಎರಡು ಕ್ಷೇತ್ರಗಳ ಮತ ಎಣಿಕೆ ಮುಂದೂಡಲಾಗಿದೆ.
ನಂದಿಗ್ರಾಮದ ಫಲಿತಾಂಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ಮಮತಾ ನಿರ್ಧಾರ ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಗೆಲುವು ಪ್ರಶ್ನಿಸಿ ಮಮತಾ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಗೆದ್ದಿದ್ದಾರೆ ಎಂದು ಘೋಷಿಸಿ ಆಮೇಲೆ ಆ ಫಲಿತಾಂಶವನ್ನು ತಿದ್ದಿ ಪ್ರಕಟಿಸಿದ್ದೇಕೆ? ನಾನು ನ್ಯಾಯಾಲಯದ ಮೆಟ್ಟಿಲೇರಲಿದ್ದೇನೆ ಎಂದಿದ್ದಾರೆ ಮಮತಾ.
ಭಾನುವಾರ ಚುನಾವಣಾ ಆಯೋಗವು ನಂದಿದ್ರಾಮದಲ್ಲಿ ಮಮತಾ ಗೆದ್ದಿದ್ದಾರೆ ಎಂದು ಘೋಷಿಸಿತ್ತು. ಇದಾಗಿ ಕೆಲವೇ ಕ್ಷಣಗಳಲ್ಲಿ ನಂದಿಗ್ರಾಮದಲ್ಲಿ ಗೆದ್ದಿದ್ದು ಮಮತಾ ಅಲ್ಲ, ಬಿಜೆಪಿಯ ಸುವೇಂದು ಅಧಿಕಾರಿ ಎಂದಿತ್ತು.
ಇದನ್ನೂ ಓದಿ: ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋಲು: ಟೀಂ ಗೆದ್ದು ಕ್ಯಾಪ್ಟನ್ ಸೋತಂತೆ ಆಗಿದೆ ಟಿಎಂಸಿ ಸ್ಥಿತಿ
Published On - 7:33 pm, Mon, 3 May 21