ಲಕ್ನೋ ಫೆಬ್ರುವರಿ 19: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು(ಸೋಮವಾರ) ಉತ್ತರ ಪ್ರದೇಶದಲ್ಲಿ (Uttar Pradesh) ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಸರ್ಕಾರವನ್ನು ಹಾಡಿ ಹೊಗಳಿದ್ದು, ರಾಜ್ಯದಲ್ಲಿ ಹೂಡಿಕೆ ಸಂಸ್ಕೃತಿಯನ್ನು “ರೆಡ್ ಟೇಪ್” ನಿಂದ ರೆಡ್ ಕಾರ್ಪೆಟ್‌ಗೆ “ಡಬಲ್ ಎಂಜಿನ್ ಸರ್ಕಾರ” ಬದಲಾಯಿಸಿದೆ ಎಂದು ಹೇಳಿದರು. “ಯುಪಿಯಲ್ಲಿ ಡಬಲ್ ಇಂಜಿನ್ ಸರ್ಕಾರ ರಚನೆಯಾಗಿ ಏಳು ವರ್ಷಗಳು ಕಳೆದಿವೆ. ಕಳೆದ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ರೆಡ್ ಟೇಪ್ ಸಂಸ್ಕೃತಿಯನ್ನು ಕೊನೆಗೊಳಿಸಲಾಗಿದೆ, ರೆಡ್ ಕಾರ್ಪೆಟ್ ಸಂಸ್ಕೃತಿಯನ್ನು ಇಲ್ಲಿಗೆ ತರಲಾಗಿದೆ” ಎಂದು ಲಕ್ನೋದಲ್ಲಿ ನಡೆದ ಹೂಡಿಕೆ ಶೃಂಗಸಭೆಯಲ್ಲಿ (UP Global Investors Summit) ಮಾತನಾಡಿದ ಮೋದಿ ಹೇಳಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ಅಪರಾಧ ಕಡಿಮೆಯಾಗಿದೆ ಮತ್ತು ವ್ಯಾಪಾರ ಸಂಸ್ಕೃತಿ ವಿಸ್ತರಿಸಿದೆ. “ಕಳೆದ ಏಳು ವರ್ಷಗಳಲ್ಲಿ, ಯುಪಿಯಲ್ಲಿ ವ್ಯಾಪಾರ, ಅಭಿವೃದ್ಧಿ ಮತ್ತು ನಂಬಿಕೆಯ ವಾತಾವರಣವು ರೂಪುಗೊಂಡಿದೆ. ಬದಲಾವಣೆಯ ನಿಜವಾದ ಉದ್ದೇಶವಿದ್ದರೆ ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಡಬಲ್ ಇಂಜಿನ್ ಸರ್ಕಾರ ತೋರಿಸಿದೆ ಎಂದಿದ್ದಾರೆ ಮೋದಿ.
उत्तर प्रदेश की डबल इंजन सरकार राज्य के मेरे परिवारजनों का जीवन आसान बनाने में दिन-रात जुटी है। लखनऊ में यूपी ग्लोबल इन्वेस्टर्स समिट के चौथे ग्राउंड ब्रेकिंग समारोह को संबोधित कर रहा हूं। https://t.co/ed4I8hCO7e
— Narendra Modi (@narendramodi) February 19, 2024
ಅಂದು ಯುಪಿಯಲ್ಲಿ ಹೂಡಿಕೆ ಮತ್ತು ಉದ್ಯೋಗದ ಬಗ್ಗೆ ಅಲ್ಲ ಅಪರಾಧ, ಗಲಭೆ, ಸರಗಳ್ಳತನದ ಸುದ್ದಿಗಳು ಬರುತ್ತಿದ್ದವು. ಆ ಕಾಲದಲ್ಲಿ ಯುಪಿ ಅಭಿವೃದ್ಧಿಯಾಗಲಿದೆ ಎಂದು ಯಾರಾದರೂ ಹೇಳಿದರೆ ಬಹುಶಃ ಯಾರೂ ಅದನ್ನು ಕೇಳಲು ಸಿದ್ಧರಿರಲಿಲ್ಲ. ಇಂದು ಉತ್ತರ ಪ್ರದೇಶಕ್ಕೆ ಲಕ್ಷ ಕೋಟಿ ಬಂಡವಾಳ ಬರುತ್ತಿದೆ.
‘ವಿಕಸಿತ್ ಉತ್ತರ ಪ್ರದೇಶ’ದ ಹಿಂದಿನ ಶಕ್ತಿಯಾಗಿರುವ ಎಂಎಸ್‌ಎಂಇಗಳ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ಚುನಾವಣೆ ಸಮೀಪಿಸಿದಾಗ ಜನರು ಹೊಸ ಹೂಡಿಕೆಗಳನ್ನು ತಪ್ಪಿಸಲು ಪ್ರಯತ್ನಿಸುವುದನ್ನು ನಾವು ಆಗಾಗ್ಗೆ ನೋಡಿದ್ದೇವೆ. ಆದರೆ ಭಾರತ ಇಂದು ಈ ಗ್ರಹಿಕೆಯನ್ನು ಮುರಿದಿದೆ. ವಿಶ್ವದಾದ್ಯಂತ ಹೂಡಿಕೆದಾರರು ಸರ್ಕಾರದ ನೀತಿಗಳ ಸ್ಥಿರತೆಯನ್ನು ನಂಬುತ್ತಾರೆ. ಈ ನಂಬಿಕೆಯು ಲಕ್ನೋದಲ್ಲಿಯೂ ಪ್ರತಿಫಲಿಸುತ್ತದೆ.
4-5 ದಿನಗಳ ಹಿಂದೆ ನಾನು ಯುಎಇ ಮತ್ತು ಕತಾರ್‌ಗೆ ಭೇಟಿ ನೀಡಿದ ನಂತರ ಹಿಂದಿರುಗಿದ್ದೆ. ಪ್ರತಿಯೊಂದು ದೇಶವೂ ಭಾರತದ ಬೆಳವಣಿಗೆಯ ಕಥೆಯ ಬಗ್ಗೆ ವಿಶ್ವಾಸ ಹೊಂದಿದೆ, ಅವರು ಆತ್ಮವಿಶ್ವಾಸದಿಂದ ತುಂಬಿದ್ದಾರೆ ‘ಮೋದಿ ಕಿ ಗ್ಯಾರಂಟಿ’ ಬಗ್ಗೆ ದೇಶದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಇಡೀ ಜಗತ್ತು ಭಾರತವನ್ನು ‘ಉತ್ತಮ ಆದಾಯದ ಗ್ಯಾರಂಟಿ’ ಎಂದು ಪರಿಗಣಿಸುತ್ತಿದೆ.
ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, “ನಾನು ‘ವಿಕಸಿತ್ ಭಾರತ್’ ಬಗ್ಗೆ ಮಾತನಾಡುವಾಗ, ಹೊಸ ಚಿಂತನೆ ಮತ್ತು ಹೊಸ ನಿರ್ದೇಶನದ ಅಗತ್ಯವಿದೆ, ಸ್ವಾತಂತ್ರ್ಯಾನಂತರ ದಶಕಗಳ ಕಾಲ ದೇಶದಲ್ಲಿ ಚಾಲ್ತಿಯಲ್ಲಿದ್ದ ಚಿಂತನೆಯನ್ನೇ ನಾವು ಅನುಸರಿಸಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.
ಇದನ್ನೂ ಓದಿ:ನಾಳೆ ಪ್ರಧಾನಿ ಮೋದಿ ಜಮ್ಮುವಿಗೆ ಭೇಟಿ; ₹30,500 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ
ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯನ್ನು ಉಲ್ಲೇಖಿಸಿದ್ದಾರೆ.”ಮೋದಿಯವರ ಗ್ಯಾರಂಟಿ” ಹೊಂದಿರುವ ವಾಹನವು ಉತ್ತರ ಪ್ರದೇಶದ ವಿವಿಧ ಭಾಗಗಳನ್ನು ತಲುಪಿತು, ಇದರಿಂದಾಗಿ ಸರ್ಕಾರದ ಕಲ್ಯಾಣ ಯೋಜನೆಗಳು ಪರಿಪೂರ್ಣತೆ ಹೊಂದಿದೆ. “ವಿಕಸಿತ್ ಭಾರತ್’ ಗಾಗಿ ‘ವಿಕಸಿತ್ ಉತ್ತರ ಪ್ರದೇಶ’ ನಿರ್ಮಿಸುವ ಸಂಕಲ್ಪದೊಂದಿಗೆ ನಾವು ಇಲ್ಲಿ ಸೇರಿದ್ದೇವೆ. ತಂತ್ರಜ್ಞಾನದ ಮೂಲಕ, ಯುಪಿಯ 400 ಕ್ಕೂ ಹೆಚ್ಚು ವಿಧಾನಸಭಾ ಸ್ಥಾನಗಳಿಂದ ಲಕ್ಷಾಂತರ ಜನರು ಈ ಕಾರ್ಯಕ್ರಮಕ್ಕೆ ಸಂಪರ್ಕ ಹೊಂದಿದ್ದಾರೆ ಎಂದು ನನಗೆ ತಿಳಿಸಲಾಗಿದೆ.7 -8 ವರ್ಷಗಳ ಹಿಂದೆ, ಹೂಡಿಕೆ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಇಂತಹ ವಾತಾವರಣ ಇರಬಹುದೆಂದು ನಾವು ಯೋಚಿಸಲು ಸಹ ಸಾಧ್ಯವಾಗಲಿಲ್ಲ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Mon, 19 February 24