No Helmet No Fuel Campaign: ಹೆಲ್ಮೆಟ್​ ಇಲ್ಲ ಅಂದ್ರೆ ಪೆಟ್ರೋಲ್ ಇಲ್ಲ, ಒಂದು ತಿಂಗಳ ವಿಶೇಷ ಅಭಿಯಾನ

ಉತ್ತರ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸಲು ಹೆಲ್ಮೆಟ್​ ಇಲ್ಲ ಅಂದ್ರೆ ಪೆಟ್ರೋಲ್ ಇಲ್ಲ ಎಂಬ ವಿಶೇಷ ರಸ್ತೆ ಸುರಕ್ಷತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ಮೇರೆಗೆ ಅಭಿಯಾನ ನಡೆಸಲಾಗುತ್ತಿದೆ. ಈ ಉಪಕ್ರಮವು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿದೆ.

No Helmet No Fuel Campaign:  ಹೆಲ್ಮೆಟ್​ ಇಲ್ಲ ಅಂದ್ರೆ ಪೆಟ್ರೋಲ್ ಇಲ್ಲ, ಒಂದು ತಿಂಗಳ ವಿಶೇಷ ಅಭಿಯಾನ
ಹೆಲ್ಮೆಟ್
Image Credit source: Moglix

Updated on: Aug 28, 2025 | 2:27 PM

ಲಕ್ನೋ, ಆಗಸ್ಟ್​ 28: ಉತ್ತರ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸಲು ಹೆಲ್ಮೆಟ್(Helmet)​ ಇಲ್ಲ ಅಂದ್ರೆ ಪೆಟ್ರೋಲ್ ಇಲ್ಲ ಎಂಬ ವಿಶೇಷ ರಸ್ತೆ ಸುರಕ್ಷತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ಮೇರೆಗೆ ಅಭಿಯಾನ ನಡೆಸಲಾಗುತ್ತಿದೆ. ಈ ಉಪಕ್ರಮವು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿದೆ.

1988 ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129 ದ್ವಿಚಕ್ರ ವಾಹನ ಚಾಲಕರು ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುತ್ತದೆ, ಸೆಕ್ಷನ್ 194D ಉಲ್ಲಂಘನೆಗಳಿಗೆ ದಂಡ ವಿಧಿಸುತ್ತದೆ.
ಸುಪ್ರೀಂ ಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿಯು ರಾಜ್ಯಗಳು ಹೆಲ್ಮೆಟ್ ಅನುಸರಣೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದೆ.

ಹೆಲ್ಮೆಟ್​ ಇಲ್ಲ ಅಂದ್ರೆ ಇಂಧನವಿಲ್ಲ ಎಂಬ ಅಭಿಯಾನದ ಗುರಿ ಶಿಕ್ಷಿಸುವುದು ಅಲ್ಲ, ಬದಲಾಗಿ ರಸ್ತೆ ಸುರಕ್ಷತೆ ಬಗ್ಗೆ ದ್ವಿಚಕ್ರ ವಾಹನ ಸವಾರರಿಗೆ ಜಾಗೃತಿ ಮೂಡಿಸುವುದಾಗಿದೆ. ಸಾರಿಗೆ ಆಯುಕ್ತ ಬಿ.ಎನ್. ಸಿಂಗ್ ಮಾತನಾಡಿ, ಈ ಅಭಿಯಾನವು ಸಂಪೂರ್ಣವಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಆಧರಿಸಿದೆ. ಹಿಂದಿನ ಅನುಭವಗಳು ದ್ವಿಚಕ್ರ ವಾಹನ ಮಾಲೀಕರು ಹೆಲ್ಮೆಟ್ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ ಎನ್ನುವ ಭರವಸೆ ಇದೆ.

ಮತ್ತಷ್ಟು ಓದಿ: ಕಳಪೆ ಹೆಲ್ಮೆಟ್​​ಗೆ ಕೇಂದ್ರ ತಡೆ: ವಾಹನ ಸವಾರರಿಗೆ BIS ಪ್ರಮಾಣೀಕರಿಸಿದ ISI ಗುರುತುಳ್ಳ ಹೆಲ್ಮೆಟ್‌ ಕಡ್ಡಾಯ

ಇದು ಇಂಧನ ಮಾರಾಟದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ತೈಲ ಮಾರುಕಟ್ಟೆ ಕಂಪನಿಗಳು – ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಮತ್ತು ಎಲ್ಲಾ ಪೆಟ್ರೋಲ್ ಪಂಪ್ ನಿರ್ವಾಹಕರು ಈ ಪ್ರಯತ್ನದಲ್ಲಿ ಸಕ್ರಿಯವಾಗಿ ಸಹಕರಿಸಲು ವಿನಂತಿಸಲಾಗಿದೆ. ಈ ಅಭಿಯಾನವು ಸೆಪ್ಟೆಂಬರ್ 1 ರಿಂದ 30 ರವರೆಗೆ ನಡೆಯಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:23 pm, Thu, 28 August 25