ರಾಹುಲ್ ಗಾಂಧಿಯ ಬಿಹಾರ ಯಾತ್ರೆಯಲ್ಲಿ ಮೋದಿಯ ತಾಯಿಯ ನಿಂದನೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ
ಬಿಹಾರದಲ್ಲಿ ರಾಹುಲ್ ಗಾಂಧಿಯ ಯಾತ್ರೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಮೇಲೆ ನಿಂದನೆಗಳನ್ನು ಮಾಡಲಾಯಿತು. ಇದಕ್ಕೆ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಬಿಹಾರದ ದರ್ಭಾಂಗದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಬಳಸಲಾದ ಪದಗಳ ಕುರಿತು ಬಿಜೆಪಿ ರಾಹುಲ್ ಗಾಂಧಿಯನ್ನು ಕಟುವಾಗಿ ಟೀಕಿಸಿದೆ.

ನವದೆಹಲಿ, ಆಗಸ್ಟ್ 28: ಬಿಹಾರದಲ್ಲಿ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಯಾತ್ರೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ತಾಯಿಯ ಮೇಲೆ ನಿಂದನೆಯ ಘೋಷಣೆಗಳನ್ನು ಕೂಗಲಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ. ಹೀಗಾಗಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಮೇಲೆ ಅವರು ವಾಗ್ದಾಳಿ ನಡೆಸಿದ್ದಾರೆ. ಪ್ರಚಾರದ ಸಮಯದಲ್ಲಿ ಪ್ರಧಾನಿ ಮೋದಿಯ ತಾಯಿಯ ವಿರುದ್ಧ ನಿಂದನೆಗಳನ್ನು ಮಾಡಲಾಗಿದೆ ಎಂದು ಹೇಳಿರುವ ಬಿಜೆಪಿ, ಕಾಂಗ್ರೆಸ್ನ ಈ ಯಾತ್ರೆಯು ಎಲ್ಲಾ ಅವಮಾನ, ದ್ವೇಷದ ಮಿತಿಗಳನ್ನು ಮೀರಿದೆ ಎಂದು ಆರೋಪಿಸಿದೆ.
“ಪ್ರಧಾನಿ ಮೋದಿ ಅವರ ದಿವಂಗತ ತಾಯಿಯ ವಿರುದ್ಧ ಅಸಭ್ಯ ಭಾಷೆ ಬಳಸಿರುವುದು ಅತ್ಯಂತ ನಾಚಿಕೆಗೇಡಿನ ಮತ್ತು ಖಂಡನೀಯ. ಈ ಭಾಷೆ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರ ಇಡೀ ಇಂಡಿಯ ಬ್ಲಾಕ್ ಸೇರಿದಂತೆ ಪ್ರಧಾನಿ ಮೋದಿ ವಿರುದ್ಧದ ದ್ವೇಷದ ಉತ್ತುಂಗವನ್ನು ಪ್ರತಿಬಿಂಬಿಸುತ್ತದೆ. ಆರ್‌ಜೆಡಿ-ಕಾಂಗ್ರೆಸ್ ಚುನಾವಣಾ ವೇದಿಕೆಯಿಂದ ಬಂದಿರುವ ಈ ದ್ವೇಷಪೂರಿತ ಹೇಳಿಕೆಯು ಬಿಹಾರ ಮತ್ತು ದೇಶಾದ್ಯಂತ ತಮ್ಮ ತಾಯಿಯನ್ನು ದೇವರಿಗೆ ಸಮಾನವೆಂದು ಪರಿಗಣಿಸುವ ಪ್ರತಿಯೊಬ್ಬ ಭಾರತೀಯನಿಗೆ ಮಾಡಿದ ಅವಮಾನವಾಗಿದೆ” ಎಂದು ಧರ್ಮೇಂದ್ರ ಪ್ರಧಾನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಗುಜರಾತ್ನಲ್ಲಿ ಆರಂಭವಾದ ಮತ ಕಳ್ಳತನವನ್ನು ಬಿಜೆಪಿ 2014ರಲ್ಲಿ ರಾಷ್ಟ್ರಮಟ್ಟಕ್ಕೂ ತಂದಿತು; ರಾಹುಲ್ ಗಾಂಧಿ ಆರೋಪ
“ಬಿಹಾರವನ್ನು ಅವಮಾನಿಸುವವರನ್ನು ಉತ್ತೇಜಿಸಿದ ನಂತರ, ವೈಯಕ್ತಿಕ ಕೋಪ ಮತ್ತು ದ್ವೇಷದಿಂದ ಪ್ರಧಾನಿ ಮೋದಿಯವರ ದಿವಂಗತ ತಾಯಿಯ ವಿರುದ್ಧ ಅಂತಹ ಭಾಷೆಯನ್ನು ಬಳಸುವುದು ಕಾಂಗ್ರೆಸ್ ನಾಯಕರು, ಪಕ್ಷಗಳ ಕೆಟ್ಟ ಮನಸ್ಥಿತಿ ಮತ್ತು ತೀವ್ರ ಹತಾಶೆಗೆ ಪುರಾವೆಯಾಗಿದೆ.
राहुल गांधी और तेजस्वी यादव की यात्रा के मंच से प्रधानमंत्री श्री नरेंद्र मोदी जी की स्वर्गीय माताजी के लिए बेहद अभद्र भाषा का प्रयोग किया गया।
राजनीति में ऐसी नीचता पहले कभी नहीं देखी गई। यह यात्रा अपमान, घृणा और स्तरहीनता की सारी हदें पार कर चुकी है।
तेजस्वी और राहुल ने पहले…
— BJP (@BJP4India) August 28, 2025
ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರ ಯಾತ್ರೆಯ ವೇದಿಕೆಯಿಂದ ಪ್ರಧಾನಿ ನರೇಂದ್ರ ಮೋದಿಯವರ ದಿವಂಗತ ತಾಯಿಯ ವಿರುದ್ಧ ಅತ್ಯಂತ ಅಸಭ್ಯ ಭಾಷೆಯನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




