Viral News: 1 ಕೆಜಿ ಜಿಲೇಬಿಯಿಂದ ಕೆಲಸವನ್ನೇ ಕಳೆದುಕೊಂಡ ಪೊಲೀಸ್; ಏನಿದು ವಿಚಿತ್ರ ಘಟನೆ?

|

Updated on: Aug 28, 2024 | 9:18 PM

ಜಿಲೇಬಿ ಬಹುತೇಕ ಜನರ ಇಷ್ಟದ ಸ್ವೀಟ್. ಬಿಸಿ ಬಿಸಿಯಾದ ಜಿಲೇಬಿ ತಿನ್ನಲು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಆದರೆ, ಈ ಬಿಸಿ ಜಿಲೇಬಿ ಪೊಲೀಸ್ ಕಾನ್​​ಸ್ಟೆಬಲ್ ಒಬ್ಬನ ಕೆಲಸವನ್ನೇ ಕಿತ್ತುಕೊಂಡಿದೆ. ಏನಿದು ವಿಚಿತ್ರ ಘಟನೆ? ಇಲ್ಲಿದೆ ಮಾಹಿತಿ.

Viral News: 1 ಕೆಜಿ ಜಿಲೇಬಿಯಿಂದ ಕೆಲಸವನ್ನೇ ಕಳೆದುಕೊಂಡ ಪೊಲೀಸ್; ಏನಿದು ವಿಚಿತ್ರ ಘಟನೆ?
ಜಿಲೇಬಿ
Follow us on

ನೊಯ್ಡಾ: ಬಿಸಿ ಬಿಸಿ ಜಿಲೇಬಿಯ ಸುವಾಸನೆಯು ಬಾಯಿಯಲ್ಲಿ ನೀರು ಬರುವಂತೆ ಮಾಡುತ್ತದೆ. ಆದರೆ ಕೆಲವೊಮ್ಮೆ ಇಂತಹ ಬಿಸಿ ಜಿಲೇಬಿ ತಿಂದರೆ ಬಾಯಿ ಸುಟ್ಟುಹೋಗುವ ಅಪಾಯವಿರುತ್ತದೆ. ಬಹುಶಃ ಹಾಪುರದ ಬಹದ್ದೂರ್‌ಗಢ ಪೊಲೀಸ್ ಠಾಣೆಯ ಕಾನ್​ಸ್ಟೆಬಲ್​ಗಿಂತ ಚೆನ್ನಾಗಿ ಈ ಬಗ್ಗೆ ಯಾರೂ ಹೇಳಲಾರರು. ಏಕೆಂದರೆ, ಬಿಸಿ ಜಿಲೇಬಿ ತಿನ್ನುವ ಆಸೆಯಿಂದ ಅವರು ಕೆಲಸವನ್ನೇ ಕಳೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಡಲು ಬಂದ ಯುವಕನ ಬಳಿ ಪೊಲೀಸ್ ಕಾನ್​ಸ್ಟೆಬಲ್ 1 ಕೆಜಿ ಬಿಸಿ ಜಿಲೇಬಿಗೆ ಬೇಡಿಕೆಯಿಟ್ಟಿದ್ದರು. ಆ ವ್ಯಕ್ತಿ ತನ್ನ ಕಳೆದುಹೋದ ಮೊಬೈಲ್ ಬಗ್ಗೆ ದೂರು ದಾಖಲಿಸಲು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಬಹದ್ದೂರ್​ಗಢ ಪೊಲೀಸ್ ಠಾಣೆಗೆ ಹೋಗಿದ್ದರು. ಠಾಣೆಯಲ್ಲಿ ಕುಳಿತಿರುವ ಕಾನ್​ಸ್ಟೆಬಲ್ ಆತನ ದೂರನ್ನು ಬರೆದರೂ ಠಾಣೆಯ ಸೀಲ್ ಹಾಕಿರಲಿಲ್ಲ. ತಾನು ಆ ಕಂಪ್ಲೆಂಟ್​ಗೆ ಸೀಲ್ ಹಾಕಬೇಕೆಂದರೆ 1 ಕೆಜಿ ಬಿಸಿಯಾದ ಜಿಲೇಬಿ ತಂದುಕೊಡಬೇಕು ಎಂದು ಆ ಪೊಲೀಸ್ ಹೇಳಿದ್ದರು. ಅದನ್ನು ಕೇಳಿದ ಆ ವ್ಯಕ್ತಿ ಕೂಡ ತೀವ್ರವಾಗಿ ಆಘಾತಕ್ಕೊಳಗಾದರು.

ಇದನ್ನೂ ಓದಿ: Shocking Video: ಗುಪ್ತಾಂಗಕ್ಕೆ ಮೆಣಸಿನ ಪುಡಿ ತುಂಬಿ ಚಿತ್ರಹಿಂಸೆ; ಶಾಕಿಂಗ್ ವಿಡಿಯೋ ವೈರಲ್

ಬೇಗ ಹೋಗಿ ಒಂದು ಕಿಲೋ ಬಿಸಿ ಬಿಸಿ ಜಿಲೇಬಿಯನ್ನು ತಂದು ಪೊಲೀಸ್ ಠಾಣೆಯಲ್ಲಿರುವ ಎಲ್ಲಾ ಪೊಲೀಸರಿಗೆ ತಿನ್ನಿಸಬೇಕು. ಆಗ ಮಾತ್ರ ಅರ್ಜಿಗೆ ಸೀಲ್ ಹಾಕಲಾಗುತ್ತದೆ. ಇಲ್ಲದಿದ್ದರೆ ಈ ಕಂಪ್ಲೆಂಟ್ ತೆಗೆದುಕೊಳ್ಳುವುದಿಲ್ಲ ಎಂದಿದ್ದರು. ಈ ವಿಚಿತ್ರ ಲಂಚದ ಸುದ್ದಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಲುಪಿದ ತಕ್ಷಣ ಎಲ್ಲರೂ ದಿಗ್ಭ್ರಮೆಗೊಂಡರು. ಬಿಸಿ ಜಿಲೇಬಿಗೆ ಆರ್ಡರ್ ಮಾಡಿದ ಕಾನ್​ಸ್ಟೆಬಲ್​ನನ್ನು ಕೆಲಸದಿಂದ ತೆಗೆದುಹಾಕಲಾಯಿತು.

ಈ ರೀತಿ ಜಿಲೇಬಿ ಆಸೆಗೆ ಸಸ್ಪೆಂಡ್ ಆಗಿರುವ ಕಾನ್​ಸ್ಟೆಬಲ್​ಗೆ ದೂರು ನೀಡಲು ಬಂದಿದ್ದ ಚಂಚಲ್ ಕುಮಾರ್ ಹಾಪುರ್‌ನ ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕಣೌರ್ ಗ್ರಾಮದ ನಿವಾಸಿ. ಚಂಚಲ್ ಕುಮಾರ್ ಸೋಮವಾರ ಸಂಜೆ ಔಷಧ ಖರೀದಿಸಲು ಮಾರುಕಟ್ಟೆಗೆ ತೆರಳಿದ್ದರು. ದಾರಿಯಲ್ಲಿ ಮೊಬೈಲ್ ಕಳೆದುಕೊಂಡರು. ಸಾಕಷ್ಟು ಹುಡುಕಾಟ ನಡೆಸಿದರೂ ಕಳೆದು ಹೋದ ಮೊಬೈಲ್ ಸಿಗದೇ ಇದ್ದಾಗ ಚಂಚಲ್ ಕುಮಾರ್ ಪೊಲೀಸ್ ಠಾಣೆಗೆ ತೆರಳಿ ಅಲ್ಲಿನ ಕಾನ್​ಸ್ಟೆಬಲ್ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Crime News: ಅಪ್ಪನ ರೋಗ ಗುಣಪಡಿಸುತ್ತೇನೆಂದು ಕರೆಸಿ ಸ್ಮಶಾನದಲ್ಲೇ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಮಂತ್ರವಾದಿ

ಆಗ ಆ ಪೊಲೀಸ್ ಚಂಚಲ್‌ಗೆ ದೂರು ಪತ್ರ ಬರೆಯುವಂತೆ ಹೇಳಿದರು. ಆ ಪತ್ರವನ್ನೂ ಚಂಚಲ್ ಬರೆದಿದ್ದಾರೆ. ಚಂಚಲ್ ಅವರು ದೂರನ್ನು ಅವರಿಗೆ ಹಸ್ತಾಂತರಿಸಿದಾಗ, ಪೊಲೀಸ್ ಠಾಣೆಯಿಂದ ಸೀಲ್ ಬೀಳುವವರೆಗೆ ಈ ದೂರು ಕೇವಲ ಕಾಗದವಾಗಿ ಉಳಿಯುತ್ತದೆ ಎಂದು ಹೇಳಿದರು. ಇದನ್ನು ಎನ್‌ಸಿಆರ್ ಎಂದು ಪರಿಗಣಿಸಲಾಗುವುದಿಲ್ಲ ಎಂದರು.

ಆದ್ದರಿಂದ ಈ ಪತ್ರದ ಮೇಲೆ ಪೊಲೀಸ್ ಠಾಣೆಯ ಸೀಲ್ ಹಾಕಬೇಕೆಂದರೆ ಸ್ಟೇಷನ್​ನಲ್ಲಿರುವ ಎಲ್ಲರಿಗೂ ಬಿಸಿ ಜಿಲೇಬಿ ತಂದುಕೊಡಬೇಕು ಎಂದರು. ಈ ವಿಚಿತ್ರವಾದ ಲಂಚದ ವಿಷಯ ಕೇಳಿ ಚಂಚಲ್ ಆಘಾತಕ್ಕೀಡಾದರು. ಮೊಬೈಲ್ ಕಳೆದುಕೊಂಡು ನಿರಾಶೆಗೊಂಡ ಚಂಚಲ್ ಗುಮಾಸ್ತರ ಈ ಬೇಡಿಕೆಯನ್ನು ನಿರಾಕರಿಸಲಾಗದೆ ಒಂದು ಕೆಜಿ ಜಿಲೇಬಿ ತಂದು ಪೊಲೀಸ್ ಠಾಣೆಯ ಪೊಲೀಸರಿಗೆ ಹಂಚಿದರು. ಇದಾದ ಬಳಿಕ ಠಾಣೆಗೆ ಬಂದಿದ್ದ ಪೊಲೀಸರು ಮೊಬೈಲ್ ಕಳೆದು ಹೋಗಿರುವ ದೂರಿನ ಮೇಲೆ ಸೀಲ್ ಹಾಕಿ ಮನೆಗೆ ಕಳುಹಿಸಿದರು.

ಆದರೆ, ನಂತರ ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಕಟವಾದ ಸುದ್ದಿ ಕೋಲಾಹಲಕ್ಕೆ ಕಾರಣವಾಯಿತು. ಈ ಜಿಲೇಬಿ ಲಂಚದ ಬಗ್ಗೆ ಮರುದಿನ ಪತ್ರಿಕೆಯಲ್ಲಿ ಬಿಸಿ ಬಿಸಿ ಸುದ್ದಿ ಪ್ರಕಟವಾಗಿತ್ತು. ಸುದ್ದಿ ಪ್ರಕಟವಾಗುತ್ತಲೇ ಇಡೀ ನಗರದಲ್ಲಿ ಜಿಲೇಬಿಯ ಪರಿಮಳ ಹರಡತೊಡಗಿತು. ಈ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ವಿಷಯ ಮುಟ್ಟಿದ್ದು, ಆ ಕಾನ್​ಸ್ಟೆಬಲ್​ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪೊಲೀಸ್ ಠಾಣೆಯಿಂದ ತೆಗೆದುಹಾಕಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ