AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಅಪ್ಪನ ರೋಗ ಗುಣಪಡಿಸುತ್ತೇನೆಂದು ಕರೆಸಿ ಸ್ಮಶಾನದಲ್ಲೇ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಮಂತ್ರವಾದಿ

ದೆಹಲಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ 12 ವರ್ಷದ ಬಾಲಕಿಯೊಬ್ಬಳ ತಂದೆಯನ್ನು ಗುಣಪಡಿಸಲು ಮಾಟ ಮಾಡುವ ನೆಪದಲ್ಲಿ ಆ ಅಪ್ರಾಪ್ತ ಬಾಲಕಿಯನ್ನು ಸ್ಮಶಾನಕ್ಕೆ ಕರೆಸಿಕೊಂಡ ಮಂತ್ರವಾದಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

Crime News: ಅಪ್ಪನ ರೋಗ ಗುಣಪಡಿಸುತ್ತೇನೆಂದು ಕರೆಸಿ ಸ್ಮಶಾನದಲ್ಲೇ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಮಂತ್ರವಾದಿ
ಅತ್ಯಾಚಾರ
ಸುಷ್ಮಾ ಚಕ್ರೆ
|

Updated on: Aug 28, 2024 | 8:08 PM

Share

ನವದೆಹಲಿ: ಪಶ್ಚಿಮ ದೆಹಲಿಯ ರೋಹಿಣಿಯಲ್ಲಿ ಅತೀಂದ್ರಿಯ ಆಚರಣೆಗಳನ್ನು ಮಾಡುವ ನೆಪದಲ್ಲಿ 12 ವರ್ಷದ ಬಾಲಕಿಯ ಮೇಲೆ ಸ್ಮಶಾನದಲ್ಲಿ ಅತ್ಯಾಚಾರ ಮಾಡಿದ ಆರೋಪದ ಮೇಲೆ 52 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಮಂತ್ರವಾದಿಯಂತೆ ನಟಿಸಿ ಬಾಲಕಿಯನ್ನು ಕಾಂಝಾವಾಲಾದ ಸ್ಮಶಾನಕ್ಕೆ ಕರೆದೊಯ್ದ ಆತ ಆಕೆಯ ಅನಾರೋಗ್ಯಪೀಡಿತ ತಂದೆಯನ್ನು ‘ಮಾಟ-ಮಂತ್ರ’ ಪದ್ಧತಿಗಳ ಮೂಲಕ ಗುಣಪಡಿಸಬಹುದೆಂದು ನಂಬಿಸಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಆರೋಪಿಯು ಆರಂಭದಲ್ಲಿ ಬಾಲಕಿಯ ಮನೆಗೆ ಭೇಟಿ ನೀಡಿ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ತರಕಾರಿ ಮಾರಾಟಗಾರನಾಗಿದ್ದ ಆಕೆಯ ತಂದೆಗೆ ತನ್ನ ಮಗಳನ್ನು ತನ್ನೊಂದಿಗೆ ಧಾರ್ಮಿಕ ಕ್ರಿಯೆಗೆ ಕಳುಹಿಸುವಂತೆ ಮನವೊಲಿಸಿದ್ದ. ಅದರಂತೆ ಆಕೆಯ ತಂದೆ ತನ್ನ 12 ವರ್ಷದ ಮಗಳನ್ನು ಮಂತ್ರವಾದಿಯ ಬಳಿಗೆ ಕಳುಹಿಸಿದ್ದ. ಸೋಮವಾರ ಈ ಘಟನೆ ನಡೆದಿದೆ. ಆ ಹುಡುಗಿ ಆ ದಿನ ರಾತ್ರಿ ಮನೆಗೆ ಮರಳಿದವಳು ಬಹಳ ಮೌನವಾಗಿದ್ದಳು. ಮರುದಿನ ಅನಾರೋಗ್ಯಕ್ಕೆ ಒಳಗಾದಳು.

ಇದನ್ನೂ ಓದಿ: Crime News: ಆಟೋ ಹತ್ತಿದ ನರ್ಸಿಂಗ್ ವಿದ್ಯಾರ್ಥಿನಿಗೆ ಅಮಲು ಬರುವ ನೀರು ಕುಡಿಸಿ ಅತ್ಯಾಚಾರವೆಸಗಿದ ಚಾಲಕ

ಇದರಿಂದ ಚಿಂತೆಗೀಡಾದ ಆಕೆಯ ಮನೆಯವರು ವಿಚಾರಣೆ ಮಾಡಿದರೂ ಆಕೆ ಏನೂ ಹೇಳಿರಲಿಲ್ಲ. ಆರೋಪಿ ಆ ಬಾಲಕಿಗೆ ಬೆದರಿಕೆ ಹಾಕಿದ್ದು, ಅತ್ಯಾಚಾರ ನಡೆಸಿದ್ದನ್ನು ಯಾರಿಗೂ ಹೇಳಬೇಡ. ಒಂದುವೇಳೆ ಹೇಳಿದರೆ ನಿನ್ನ ತಂದೆ ಸಾಯುವುದಾಗಿ ಎಚ್ಚರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ.

ಇದನ್ನೂ ಓದಿ: Crime News: ತನ್ನ ಮೇಲೆ ಅತ್ಯಾಚಾರವೆಸಗಿದವನನ್ನು ಬಂಧಿಸಲು ಬಟ್ಟೆ ಬಿಚ್ಚಿ ಪ್ರತಿಭಟಿಸಿದ ಯುವತಿ

ಬಾಲಕಿಯ ಕುಟುಂಬವು ಮಂಗಳವಾರ ಪೊಲೀಸರಿಗೆ ಈ ಕೃತ್ಯದ ಬಗ್ಗೆ ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 65(2) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಘಟನೆ ವರದಿಯಾದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More