Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಪ್ರಿಯಕರನಿಗಾಗಿ ಹೆತ್ತ ಕಂದಮ್ಮನನ್ನೇ ಕೊಂದು ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪೊದೆಗೆ ಎಸೆದ ಪಾಪಿ ತಾಯಿ

ಈ ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರ್ಬೋದು ಆದ್ರೆ ಆದ್ರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂದು ಹೇಳ್ತಾರೆ. ಆದ್ರೆ ಇಲ್ಲೊಂದು ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, ಪ್ರಿಯಕರನೊಂದಿಗೆ ಕಾಲ ಕಳೆಯಲು ಮಗು ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ ಪಾಪಿ ತಾಯಿ ತನ್ನ ಪ್ರಿಯಕರನೊಂದಿಗೆ ಸೇರಿ ಕರುಳ ಕುಡಿಯನ್ನೇ ಕೊಂದು, ಮೃತ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪೊದೆಗೆ ಎಸೆದಿದ್ದಾಳೆ. ಈ ಆಘಾತಕಾರಿ ಪ್ರಕರಣದ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

Viral: ಪ್ರಿಯಕರನಿಗಾಗಿ ಹೆತ್ತ ಕಂದಮ್ಮನನ್ನೇ ಕೊಂದು ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪೊದೆಗೆ ಎಸೆದ ಪಾಪಿ ತಾಯಿ
ವೈರಲ್​​​ ಫೋಟೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 28, 2024 | 4:35 PM

ತಾಯಿಯ ಪಾಲಿಗೆ ಮಕ್ಕಳೇ ಪ್ರಪಂಚ. ಹೆತ್ತ ಮಕ್ಕಳಿಗಾಗಿ ಆಕೆ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧಳಿರುತ್ತಾಳೆ. ತಾಯಿಯ ಪ್ರೀತಿಯೇ ಅಂತಹದ್ದು, ಯಾವುದೇ ಸ್ವಾರ್ಥ ಭಾವವಿಲ್ಲದೇ ತನ್ನ ಇಡೀ ಜೀವನವನ್ನು ಮಕ್ಕಳಿಗಾಗಿ ಮುಡಿಪಾಗಿಡುತ್ತಾಳೆ. ಇದೇ ಕಾರಣಕ್ಕೆ ಈ ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರ್ಬೋದು ಆದ್ರೆ ಆದ್ರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂದು ಹೇಳೋದು. ಆದ್ರೆ ಇಲ್ಲೊಂದು ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಡೆದಿದ್ದು, ತನ್ನ ಸ್ವಾರ್ಥಕ್ಕಾಗಿ ಪಾಪಿ ತಾಯಿ ಹೆತ್ತ ಕಂದಮ್ಮ ಕಥೆಯನ್ನೇ ಮುಗಿಸಿದ್ದಾಳೆ. ಹೌದು ಪ್ರಿಯಕರನೊಂದಿಗೆ ಕಾಲ ಕಳೆಯಲು ಮಗು ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ ಪಾಪಿ ತಾಯಿ ತನ್ನ ಪ್ರಿಯಕರನೊಂದಿಗೆ ಸೇರಿ ಕರುಳ ಕುಡಿಯನ್ನೇ ಕೊಂದು, ಮೃತ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪೊದೆಗೆ ಎಸೆದಿದ್ದಾಳೆ. ಈ ಆಘಾತಕಾರಿ ಪ್ರಕರಣದ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಈ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಮಿಥುನ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಮಬಾಗ್‌ ಪ್ರದೇಶದಲ್ಲಿ ಪಾಪಿ ತಾಯಿಯೊಬ್ಬಳು ಪ್ರಿಯಕರನಿಗಾಗಿ ತನ್ನ ಮೂರು ವರ್ಷ ವಯಸ್ಸಿನ ಮಗುವನ್ನೇ ಕೊಂದು ಹಾಕಿದ್ದಾಳೆ.

ಇದನ್ನೂ ಓದಿ: ಪರ್ವತದ ಮೇಲಿನಿಂದ ಸೆಲ್ಫಿ ತೆಗೆದುಕೊಳ್ಳಲು ಹೋಗಿ 262 ಅಡಿ ಕಂದಕಕ್ಕೆ ಬಿದ್ದು ಯುವತಿ ಸಾವು

ವೈರಲ್​​​​​ ಪೋಸ್ಟ್ ಇಲ್ಲಿದೆ ನೋಡಿ:

ಕಾಜಲ್‌ ಎಂಬಾಕೆಗೆ ಇದಾಗಲೇ ಮದುವೆಯಾಗಿದ್ದು, ಆಕೆಗೆ ಮೂರು ವರ್ಷದ ಮಗು ಕೂಡಾ ಇತ್ತು. ಆದ್ರೆ ಗಂಡನೊಂದಿಗೆ ಆಕೆಗೆ ಬಾಳ್ವೆ ನಡೆಸಲು ಇಷ್ಟವಿರಲಿಲ್ಲ. ಈ ನಡುವೆ ಆಕೆ ಫೇಸ್‌ಬುಕ್‌ ಮೂಲಕ ಪರಿಚಯವಾದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದು, ತಮ್ಮ ಪ್ರೀತಿಗೆ ಹೆತ್ತ ಕಂದಮ್ಮ ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ ಮನೆಯಲ್ಲಿ ಯಾರೂ ಇಲ್ಲದಿರುವ ವೇಳೆ ಆಕೆ ಮತ್ತು ಆಕೆಯ ಪ್ರಿಯಕರ ಕ್ರೈಂ ಪೆಟ್ರೋಲ್‌ ಶೋ ನೋಡಿ ಮಗುವನ್ನು ಕೊಂದು, ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ಮನೆಯ ಪಕ್ಕದ ಪೊದೆಗೆ ಎಸೆದಿದ್ದಾಳೆ. ಇದೀದ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ಹಣ ಆಧಾರ್‌ ಕಾರ್ಡ್‌ ತೆಗೆದುಕೊಂಡು ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಮಗುವಿನ ಶವ ಪತ್ತೆಯಾಗುತ್ತಿದ್ದಂತೆ ಕಾಜಲ್‌ನ ಮೊಬೈಲ್‌ ಟ್ರೇಸ್‌ ಮಾಡಿ 48 ಗಂಟೆಗಳ ಒಳಗೆ ಮಗುವನ್ನು ಕೊಂದ ಪಾಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Wed, 28 August 24