ಉತ್ತರ ಪ್ರದೇಶ: ಮುಸ್ಲಿಂ ಯುವತಿಗಾಗಿ ಮತಾಂತರಗೊಂಡ ಯುವಕ ಆಮೇಲೆ ನಡೆದಿದ್ದು ಅವಳಿ ಕೊಲೆ

ತಾನು ಇಷ್ಟ ಪಟ್ಟಿದ್ದ ಅದರಲ್ಲೂ ಆಕೆಗಾಗಿ ಧರ್ಮವನ್ನೇ ಬದಲಾಯಿಸಿಕೊಂಡಿದ್ದ ಯುವಕನಿಗೆ ಮೋಸ ಮಾಡಿದ್ದಕ್ಕೆ ಬೇಸರಗೊಂಡ ವ್ಯಕ್ತಿ ಆಕೆಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆದರೆ ಆಕೆ ಬೇರೊಬ್ಬನನ್ನು ಮದುವೆಯಾಗಿದ್ದಾಳೆಂದು ತಿಳಿದು ಕೋಪಗೊಂಡ ಆತ ಆಕೆಯನ್ನು ಹತ್ಯೆ ಮಾಡಿದ್ದಾನೆ. ಆಕೆಯ ಕುಟುಂಬದವರು ಅದೇ ಕೋಪದಲ್ಲಿ ಮುರ್ಷದ್​ನನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶ: ಮುಸ್ಲಿಂ ಯುವತಿಗಾಗಿ ಮತಾಂತರಗೊಂಡ ಯುವಕ ಆಮೇಲೆ ನಡೆದಿದ್ದು ಅವಳಿ ಕೊಲೆ
ಕೊಲೆಯಾದ ಯುವಕ
Image Credit source: OpIndia

Updated on: Feb 18, 2025 | 11:03 AM

ಹಿಂದೂ ಯುವಕನೊಬ್ಬನಿಗೆ ಮುಸ್ಲಿಂ ಯುವತಿ ಮೇಲೆ ಪ್ರೇಮಾಂಕುರವಾಗಿತ್ತು, ಬಳಿಕ ಆತ ರಾಹುಲ್​ನಿಂದ ಮುರ್ಷದ್ ಆಗಿ ಕೇವಲ ಹೆಸರು ಬದಲಾಯಿಸಿಕೊಂಡಿದ್ದು ಮಾತ್ರವಲ್ಲದೆ, ಆತ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. ಆದರೆ ಆಕೆ ಬೇರೊಬ್ಬನನ್ನು ಮದುವೆಯಾಗಿದ್ದಾಳೆಂದು ತಿಳಿದು ಕೋಪಗೊಂಡ ಆತ ಆಕೆಯನ್ನು ಹತ್ಯೆ ಮಾಡಿದ್ದಾನೆ. ಆಕೆಯ ಕುಟುಂಬದವರು ಅದೇ ಕೋಪದಲ್ಲಿ ಮುರ್ಷದ್​ನನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಬ್ಬರ ಪ್ರೇಮ ಸಾವಿನಲ್ಲಿ ಅಂತ್ಯ ಕಂಡಿತ್ತು.

ಮುರ್ಷಿದ್ ಕಳೆದ ಎರಡು ವರ್ಷಗಳಿಂದ ಮುಸ್ಲಿಂ ಯುವತಿ ಜತೆಗೆ ಡೇಟಿಂಗ್ ಮಾಡುತ್ತಿದ್ದ, ಆಕೆಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ, ನಮಾಜ್ ಮಾಡುವುದನ್ನು ಕೂಡ ಕಲಿತಿದ್ದ. ಆದರೂ ದಾಖಲೆಗಳಲ್ಲಿ ಆತ ಇನ್ನೂ ಹಿಂದೂವಾಗಿಯೇ ಇದ್ದಾನೆ.

ವರದಿಗಳ ಪ್ರಕಾರ ತನ್ನ ಹುಡುಗಿ ಫೆಬ್ರವರಿ 16ರಂದು ಬೇರೆ ಹುಡುಗನ ಜತೆ ವಿವಾಹವಾಗಿರುವುದನ್ನು ತಿಳಿದು ಆಕೆಯನ್ನು ಭೇಟಿಯಾಗಲು ಹೋಗಿದ್ದ, ಆದರೆ ಇಬ್ಬರ ನಡುವೆ ಜಗಳ ನಡೆದು ಗೆಳತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ.
ಸ್ವಲ್ಪ ಸಮಯದ ಬಳಿಕ ಹುಡುಗಿಯ ಕುಟುಂಬದವರು ಬಂದು ಮುರ್ಷದ್​ನನ್ನು ಕ್ರೂರವಾಗಿ ಥಳಿಸಿದ್ದರು, ಪೊಲೀಸರು ಸ್ಥಳಕ್ಕೆ ಆಗಮಿಸಿ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಮತ್ತಷ್ಟು ಓದಿ: ಲವರ್​ನ ಕೊಂದು ಆತ್ಮಹತ್ಯೆಗೆ ಆನ್​ಲೈನ್​ನಲ್ಲಿ ಹಗ್ಗ ಆರ್ಡರ್​: ಪ್ರೀತಿ ಕೊಂದ ಕೊಲೆಗಾರನ ಸ್ಫೋಟಕ ಅಂಶ ಬೆಳಕಿಗೆ

ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ಅಂಕುರ್ ಅಗರ್ವಾಲ್ ತಿಳಿಸಿದ್ದಾರೆ.

ಪಳನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಹಲವು ಪೊಲೀಸ್ ಠಾಣೆಗಳ ಪೊಲೀಸ್ ಪಡೆಗಳು ಹಾಗೂ ಡಿಐಜಿ ಮತ್ತು ಎಸ್ಪಿ ಈ ಪ್ರದೇಶದಲ್ಲಿ ನಿಗಾ ವಹಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ