ಲವರ್​ನ ಕೊಂದು ಆತ್ಮಹತ್ಯೆಗೆ ಆನ್​ಲೈನ್​ನಲ್ಲಿ ಹಗ್ಗ ಆರ್ಡರ್​: ಪ್ರೀತಿ ಕೊಂದ ಕೊಲೆಗಾರನ ಸ್ಫೋಟಕ ಅಂಶ ಬೆಳಕಿಗೆ

ಇಂದಿರಾನಗರದಲ್ಲಿ ನಡೆದ ಯುವತಿ ಕೊಲೆ ಪ್ರಕರಣದ ಆರೋಪಿ ಆರವ್​​ ತಮ್ಮ ಬಳಿ ಹಣ ಖಾಲಿಯಾದ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕೊಲೆಯ ನಂತರ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ನಂತರ ವಾರಣಾಸಿಗೆ ಪಾರಾರಿಯಾಗಿದ್ದ. ಆದರೆ ಈ ವೇಳೆ ಹಣದ ಕೊರತೆಯಿಂದಾಗಿ ವಾಪಸ್ ಬಂದಿದ್ದಾನೆ.

ಲವರ್​ನ ಕೊಂದು ಆತ್ಮಹತ್ಯೆಗೆ ಆನ್​ಲೈನ್​ನಲ್ಲಿ ಹಗ್ಗ ಆರ್ಡರ್​: ಪ್ರೀತಿ ಕೊಂದ ಕೊಲೆಗಾರನ ಸ್ಫೋಟಕ ಅಂಶ ಬೆಳಕಿಗೆ
ಲವರ್​ನ ಕೊಂದು ಆತ್ಮಹತ್ಯೆಗೆ ಆನ್​ಲೈನ್​ನಲ್ಲಿ ಹಗ್ಗ ಆರ್ಡರ್​: ಪ್ರೀತಿ ಕೊಂದ ಕೊಲೆಗಾರನ ಸ್ಫೋಟಕ ಅಂಶ ಬೆಳಕಿಗೆ
Follow us
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ

Updated on: Dec 01, 2024 | 6:45 PM

ಬೆಂಗಳೂರು, ಡಿಸೆಂಬರ್​ 01: ಇಂದಿರಾನಗರದಲ್ಲಿ ನಡೆದ ಯುವತಿ (girl) ಕೊಲೆ‌ ಕೇಸ್​​ನಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಆರೋಪಿ‌ ಆರವ್ ಕೊಲೆ‌ ಮಾಡಿದ ಬಳಿಕ ಒಂದು ದಿನವಲ್ಲಾ, ಎರಡೂ ದಿನವೂ ಆತ್ಮಹತ್ಯೆಗೆ ಯತ್ನಿಸಿದ್ದು ಬೆಳಕಿಗೆ ಬಂದಿದೆ. ಇದಲ್ಲದೆ ಆರೋಪಿ ಬಳಿಯಿದ್ದ ಹಣ ಸಾಲದೇ ಪೊಲೀಸರಿಗೆ ಸಿಕ್ಕಿಬಿದ್ದ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ. ಮುಂದೆ ಓದಿ.

ದುಡ್ಡಿಲ್ದೆ ಪೊಲೀಸರಿಗೆ ಲಾಕ್​ ಆದ ಆರೋಪಿ

ಹೌದು.. ಇಂದಿರಾನಗರದ ಸರ್ವಿಸ್ ಅಪಾರ್ಟ್ಮೆಂಟ್​ನಲ್ಲಿ ನಡೆದ ಯುವತಿ ಮಾಯ ಕೊಲೆ ಪ್ರಕರಣದ ತನಿಖೆ ಎಲ್ಲಾ ಆಯಾಮದಲ್ಲಿ ನಡೆಸಲಾಗುತ್ತಿದೆ. ಕೊಲೆಗೆ ಯುವತಿ ಮೇಲೆ ಅನುಮಾನವೇ ಕಾರಣ ಅನ್ನೋದು ಗೊತ್ತಾಗಿದೆ. ಹೀಗಿರುವಾಗ ಪೊಲೀಸರು ತನಿಖೆಯಲ್ಲಿ ಆರೋಪಿಗೆ ತಿಂಗಳಿಗೆ ಕೇವಲ 14 ಸಾವಿರ ರೂ. ಸಂಬಳ ಬರುತ್ತಿತ್ತು. ಅದನ್ನೂ ಮಾಯಾಗೆ ಖರ್ಚು ಮಾಡ್ತಿದ್ದ ಆರೋಪಿಗೆ ದುಡ್ಡು ಸಾಕಾಗುತ್ತಿರಲಿಲ್ಲ. ಹೀಗೆ ರೂಂ ಗೆ ಹೋದ‌ ಬಳಿಕವೂ ತಾನೇ ಹಣ ಖರ್ಚು ಮಾಡಿದ್ದ. ಆದರೆ ಕೊಲೆ ಮಾಡಿದ ಬಳಿಕ ಆರವ್ ಬಳಿ ಕೇವಲ 1500 ರೂ. ಮಾತ್ರ ಇತ್ತು.ಇದ್ರಿಂದ ರೂಂ ಬಾಡಿಗೆ ಕೂಡ ಕಟ್ಟದೆ ಎಸ್ಕೇಪ್ ಆಗಿದ್ದ ಅಂತೇಳಲಾಗಿದೆ.

ಇದನ್ನೂ ಓದಿ: ಪ್ರೇಯಸಿಯನ್ನು ಕೊಂದು ಬೇರೆ ಬೇರೆ ರಾಜ್ಯಗಳಲ್ಲಿ ಸುತ್ತಾಡಿ ಕೊನೆಗೆ ಬೆಂಗಳೂರಿನಲ್ಲೇ ಹಂತಕ ಲಾಕ್

ಒಂದು ದಿನಕ್ಕೆ ಸರ್ವಿಸ್ ಪ್ಲಾಟ್ ಬಾಡಿಗೆ 1800 ರೂ ಇತ್ತು. ಮೊದಲ ದಿನ ಹಣ ಪೇ ಮಾಡಿದ್ದು, ಉಳಿದದ್ದು ಹೋಗುವ ದಿನ ಕೊಡುವುದಾಗಿ ತಿಳಿಸಿದ್ದ. ಇದ್ದ ಎರಡೂವರೆ ಸಾವಿರ ರೂ. ಆನ್ ಲೈನ್​ನಲ್ಲಿ ಫುಡ್ ತರಿಸಿಕೊಂಡಿದ್ದ. ಹಾಗೇ ನೈಲಾನ್ ಹಗ್ಗ ತರಿಸಿಕೊಂಡಿದ್ದನಂತೆ. ಕೊಲೆ ಮಾಡಿದ ಬಳಿಕ ಒಂದು ದಿನವಲ್ಲ ಎರಡೂ ದಿನವೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ನೈಲಾನ್ ಹಗ್ಗವಾಗಿದ್ರಿಂದ ಸರಿಯಾಗಿ ಬಿಗಿಯಾಗದೆ ಉಸಿರುಗಟ್ಟಿ ಭಯಗೊಂಡು ಸುಮ್ಮನಾಗಿದ್ದ. ಎರಡು ಬಾರಿಯ ಪ್ರಯತ್ನದಲ್ಲಿ ಸಾಧ್ಯವಾಗದೆ ಮೃತದೇಹದ ಪಕ್ಕದಲ್ಲೇ ಮಲಗಿದ್ದನಂತೆ. ಮರು ದಿನವೇ ಸಿಬ್ಬಂದಿಗೂ ಹೇಳದೆ, ಹಣವೂ ಕಟ್ಟದೆ 1500 ರೂ ತೆಗೆದುಕೊಂಡು ಎಸ್ಕೇಪ್ ಆಗಿದ್ದನಂತೆ. ಕ್ಯಾಬ್ ಬುಕ್ ಮಾಡಿ ಮೆಜೆಸ್ಟಿಕ್​ಗೆ ಹೋಗಿದ್ದ ಆರೋಪಿಗೆ ಯಾವ ಕಡೆ ಹೋಗ್ಬೇಕು ಅಂತನೇ ಪ್ಲಾನ್ ಇರಲಿಲ್ಲ. ಇದೇ ವೇಳೆ ತನ್ನ ಮುಂದೆ ಹೋಗ್ತಿದ್ದ ಪ್ರಯಾಣಿಕನೊಬ್ಬ ವಾರಣಾಸಿ ಕಡೆ ಹೋಗಲು ಟಿಕೆಟ್ ವಿಚಾರಿಸುತ್ತಿದ್ದ. ಹೀಗೆ ಟಿಕೆಟ್ ಪಡೆದು ರನ್ ಆಗುತ್ತಿದ್ದ ಟ್ರೈನ್ ಹತ್ತಿ ವಾರಣಾಸಿ ತಲುಪಿದ್ದ.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಭಯಾನಕ ಕೃತ್ಯ; ಪ್ರೇಯಸಿಯನ್ನು ಕೊಂದ 1 ದಿನ ಕಳೆದು ಪರಾರಿಯಾದ ಪ್ರಿಯಕರ!

ಇನ್ನು ವಾರಣಾಸಿಗೆ ಹೋದ ಬಳಿ ಸ್ವಿಚ್ ಮಾಡಿದ್ದ ಮೊಬೈಲ್ ಆನ್ ಮಾಡಿದ ಆರವ್ ತನ್ನ ಅಜ್ಜನಿಗೆ ಕರೆ ಮಾಡಿದ್ದ. ಅಷ್ಟರಲ್ಲಾಗಲೇ ಪೊಲೀಸರು ಆರೋಪಿಯ ಮನೆಯಲ್ಲಿದ್ದರು. ಆಗ ವಿಚಾರ ಹೇಳಿದ್ದ ಆರವ್​ಗೆ, ವಾಪಸ್ ಬರುವಂತೆ ಅಜ್ಜ ಹೇಳಿದ್ದರು. ಹಣ ಕಡಿಮೆ‌ ಇದ್ದ ಕಾರಣಕ್ಕಾಗಿಯೇ ವಾಪಸ್ ಬಂದಿದ್ದ. ಒಂದ್ವೇಳೆ ಹೆಚ್ಚು ಹಣ ಆರವ್ ಬಳಿಯಿದ್ದಿದ್ರೆ ಯಾರಿಗೂ ಸಿಗದೆ ಎಸ್ಕೇಪ್ ಆಗುತ್ತಿದ್ದ. ಯಾಕಂದ್ರೆ ಪೊಲೀಸ್ ತನಿಖೆ, ಆನ್ ಲೈನ್, ಟ್ರಾವೆಲ್ ಬಗ್ಗೆ ಮೊದಲೇ ತಿಳಿದುಕೊಂಡಿದ್ದ ಎನ್ನಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ