ಯುಪಿಎಸ್‌ಸಿ-2019: ಕರ್ನಾಟಕದ 37ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆ, ಜಯದೇವ್‌ಗೆ 5ನೇ ಱಂಕ್‌

|

Updated on: Aug 04, 2020 | 8:58 PM

ನವದೆಹಲಿ: ಅಖಿಲ ಭಾರತ ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶವನ್ನ ಪ್ರಕಟಿಸಲಾಗಿದೆ. ಇದರಲ್ಲಿ ಈ ಬಾರಿ ಕರ್ನಾಟಕದ 37 ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತಿರ್ಣರಾಗಿದ್ದಾರೆ. ಹೌದು ಇಂದು ಯುಪಿಎಸ್‌ಸಿ 2019ರ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶವನ್ನ ಪ್ರಕಟಿಸಿದೆ. ಇದರಲ್ಲಿ ಸಧ್ಯ ಐಆರ್‌ಎಸ್‌ ಸೇವೆಯಲ್ಲಿರುವ ಪ್ರದೀಪ್ ಸಿಂಗ್​ ಮೊದಲ ಸ್ಥಾನ ಗಳಿಸಿದ್ದಾರೆ. ಜತಿನ್ ಕಿಶೋರ್​ಗೆ ಎರಡನೇ ಸ್ಥಾನ ಪಡೆದಿದ್ದು, ಪ್ರತಿಭಾ ವರ್ಮಾಗೆ ಮೂರನೇ ಸ್ಥಾನ ಲಭಿಸಿದೆ. ಕರ್ನಾಟಕದ ಜಯದೇವ್‌ಗೆ 5ನೇ ಱಂಕ್‌ ಕರ್ನಾಟಕದ ಅದರಲ್ಲೂ ಬೆಂಗಳೂರಿನ ಹುಡುಗ ಜಯದೇವ್‌ […]

ಯುಪಿಎಸ್‌ಸಿ-2019: ಕರ್ನಾಟಕದ 37ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆ, ಜಯದೇವ್‌ಗೆ 5ನೇ ಱಂಕ್‌
Follow us on

ನವದೆಹಲಿ: ಅಖಿಲ ಭಾರತ ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶವನ್ನ ಪ್ರಕಟಿಸಲಾಗಿದೆ. ಇದರಲ್ಲಿ ಈ ಬಾರಿ ಕರ್ನಾಟಕದ 37 ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತಿರ್ಣರಾಗಿದ್ದಾರೆ.

ಹೌದು ಇಂದು ಯುಪಿಎಸ್‌ಸಿ 2019ರ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶವನ್ನ ಪ್ರಕಟಿಸಿದೆ. ಇದರಲ್ಲಿ ಸಧ್ಯ ಐಆರ್‌ಎಸ್‌ ಸೇವೆಯಲ್ಲಿರುವ ಪ್ರದೀಪ್ ಸಿಂಗ್​ ಮೊದಲ ಸ್ಥಾನ ಗಳಿಸಿದ್ದಾರೆ. ಜತಿನ್ ಕಿಶೋರ್​ಗೆ ಎರಡನೇ ಸ್ಥಾನ ಪಡೆದಿದ್ದು, ಪ್ರತಿಭಾ ವರ್ಮಾಗೆ ಮೂರನೇ ಸ್ಥಾನ ಲಭಿಸಿದೆ.

ಕರ್ನಾಟಕದ ಜಯದೇವ್‌ಗೆ 5ನೇ ಱಂಕ್‌
ಕರ್ನಾಟಕದ ಅದರಲ್ಲೂ ಬೆಂಗಳೂರಿನ ಹುಡುಗ ಜಯದೇವ್‌ ದೇಶಕ್ಕೆ 5ನೇ ಱಂಕ್‌ ಗಳಿಸಿದ್ದು ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾನೆ.

ಈ ಬಾರಿ 829 ವಿದ್ಯಾರ್ಥಿಗಳು ಅಖಿಲ ಭಾರತ ಸೇವೆಗೆ ಆಯ್ಕೆಯಾಗಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ಜನರಲ್‌ ಕೋಟಾದಲ್ಲಿ 304, ಓಬಿಸಿ ಕೋಟಾದಲ್ಲಿ 251, ಎಸ್‌ಸಿ 129, ಎಸ್‌ಟಿ 67 ಹಾಗೂ ಎಕಾನಾಮಿಕ್‌ ವೀಕರ್‌ ಸೆಕ್ಸನ್‌ನಲ್ಲಿ 78 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಕರ್ನಾಟಕದಿಂದ ಆಯ್ಕೆಯಾದವರು 
ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕರ್ನಾಟಕದ 37 ಕ್ಕೂ ಹೆಚ್ಚು ಅಭ್ಯರ್ಥಿಗಳು ಉತೀರ್ಣರಾಗಿದ್ದು  ಱಂಕ್‌ ಪಟ್ಟಿ ಹೀಗಿದೆ. ಯಶಸ್ವಿನಿ ಬಿ 71, ವಿನೋದ ಪಾಟೀಲ್ ಹೆಚ್​ 132, ಕೀರ್ತನಾ ಹೆಚ್​ ಎಸ್​ 167, ಸಚಿನ್ ಹಿರೇಮಠ 213, ಹೇಮಾ ನಾಯ್ಕ್ 225, ಅಭಿಶೇಕ್​ಗೌಡ ಎಮ್​​ ಜೆ278, ಕೀರ್ತಿ ಬಿ 297, ವೆಂಕಟ್​ ಕೃಷ್ಣಾ336, ವಿಥುನ್​ ಹೆಚ್​​ಎನ್​359, ವೆಂಕಟರಮಣ ಕವಡಿಕೇರಿ 364, ಕೌಶಿಕ್​ ಹೆಚ್ ಆರ್​​ 380, ವರುಣ ಬಿ ಆರ್​ 395, ಮಂಜುನಾಥ್​ ಆರ್​ 406, ಹರೀಶ್ ಬಿ ಸಿ 409, ಜಗದೀಶ ಅಡಹಳ್ಳಿ 440, ವಿವೇಕ್ ಹೆಚ್​ ಬಿ 444, ಆನಂದ್ ಕಲ್ಲದಗಿ 446, ಮೊಹಮ್ಮದ್ ನದಿಮುದ್ದಿನ್ 461, ಮೇಘನಾ ಕೆ ಟಿ 465, ಸಯೈದ್ ಜಾಹೆದ್ ಅಲಿ 476, ವಿವೇಕ್​ ರೆಡ್ಡಿ ಎನ್​ 485, ಹೇಮಂತ್ ಎನ್ 498, ಖಮ್ಮರುದ್ಧಿನ್ 511, ವರುಣ ಕೆ ಗೌಡ 528, ಪ್ರಫೂಲ್ ದೇಸಾಯಿ 532, ರಾಘವೇಂದ್ರ ಎನ್ 536, ಭರತ್ ಕೆ ಆರ್​ 545, ದರ್ಶನ್ ಕುಮಾರ್ ಹೆಚ್​ ಜಿ 594, ಪೃತ್ವಿ ಎಸ್​ ಹುಲ್ಲತ್ತಿ 582, ಸುಭಾಶ್ ಬಿ 583, ಅಭೀಲಾಶ್ ಸಶಿಕಾಂತ್ ಬಡ್ಡೂರ 591, ಸವಿತಾ ಗೋಟ್ಯಾಳ 626, ಪ್ರಜ್ವಲ್ 636, ರಮೇಶ್ 646, ಚೈತ್ರಾ ಎ ಎಮ್ 713, ಚಂದನ್ ಜಿ ಎಸ್ 777, ಮಂಜೇಶ್​ಕುಮಾರ್ ಎ ಪಿ 800ನೇ ಱಂಕ್‌ ಗಳಿಸಿದ್ದಾರೆ.

 

Published On - 1:45 pm, Tue, 4 August 20