ಲಾಕ್‌ಡೌನ್ ಎಫೆಕ್ಟ್! ಡಿಜಿಟಲ್ ವಹಿವಾಟು ಹೆಂಗಿದೆ ಗೊತ್ತಾ?
ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿನ ಹಾವಳಿಯಿಂದ ಲಾಕ್‌ಡೌನ್ ಇದ್ದಿದ್ದರ ಪರಿಣಾಮ ಡಿಜಿಟಲ್ ವಹಿವಾಟು ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಜೂನ್ ತಿಂಗಳಲ್ಲಿ 1.34 ಬಿಲಿಯನಷ್ಟು UPI ಡಿಜಿಟಲ್ ವಹಿವಾಟು ನಡೆದಿದೆ. ಭಾರತಕ್ಕೆ ಕೊರೊನಾ ಸೋಂಕು ಕಾಲಿಡುವ ಮುನ್ನ, ಅಂದರೆ ಫೆಬ್ರವರಿ ತಿಂಗಳಲ್ಲಿ 1.32 ಬಿಲಿಯನಷ್ಟು UPI ಡಿಜಿಟಲ್ ವಹಿವಾಟು ನಡೆದಿತ್ತು. ಆದರೆ ಲಾಕ್‌ಡೌನ್ ಕಾರಣದಿಂದಾಗಿ ಏಪ್ರಿಲ್‌ನಲ್ಲಿ ಡಿಜಿಟಲ್ ವಹಿವಾಟು ಕೊಂಚ ಇಳಿಕೆ ಕಂಡಿತ್ತು. ನಂತರ ಮೇ ತಿಂಗಳಲ್ಲಿ ಹಂತ ಹಂತವಾಗಿ ಚೇತರಿಕೆ ಕಂಡಿತ್ತು. ಡಿಜಿಟಲ್ ವಹಿವಾಟು ಬಯಸದೆ […]
ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿನ ಹಾವಳಿಯಿಂದ ಲಾಕ್‌ಡೌನ್ ಇದ್ದಿದ್ದರ ಪರಿಣಾಮ ಡಿಜಿಟಲ್ ವಹಿವಾಟು ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಜೂನ್ ತಿಂಗಳಲ್ಲಿ 1.34 ಬಿಲಿಯನಷ್ಟು UPI ಡಿಜಿಟಲ್ ವಹಿವಾಟು ನಡೆದಿದೆ. ಭಾರತಕ್ಕೆ ಕೊರೊನಾ ಸೋಂಕು ಕಾಲಿಡುವ ಮುನ್ನ, ಅಂದರೆ ಫೆಬ್ರವರಿ ತಿಂಗಳಲ್ಲಿ 1.32 ಬಿಲಿಯನಷ್ಟು UPI ಡಿಜಿಟಲ್ ವಹಿವಾಟು ನಡೆದಿತ್ತು. ಆದರೆ ಲಾಕ್‌ಡೌನ್ ಕಾರಣದಿಂದಾಗಿ ಏಪ್ರಿಲ್‌ನಲ್ಲಿ ಡಿಜಿಟಲ್ ವಹಿವಾಟು ಕೊಂಚ ಇಳಿಕೆ ಕಂಡಿತ್ತು. ನಂತರ ಮೇ ತಿಂಗಳಲ್ಲಿ ಹಂತ ಹಂತವಾಗಿ ಚೇತರಿಕೆ ಕಂಡಿತ್ತು.
ಡಿಜಿಟಲ್ ವಹಿವಾಟು ಬಯಸದೆ ಬಂದ ಭಾಗ್ಯ ಫೆಬ್ರವರಿಯಲ್ಲಿ 2.22 ಲಕ್ಷ ಕೋಟಿ ರೂ.ವಹಿವಾಟು ನಡೆದಿತ್ತು. ಅದಕ್ಕೆ ಹೋಲಿಸಿದರೆ ಜೂನ್ ತಿಂಗಳಲ್ಲಿ 2.61 ಲಕ್ಷ ಕೋಟಿ ವಹಿವಾಟು ನಡೆದಿದೆ ಎಂದು UPI ಅನ್ನು ನಿರ್ವಹಿಸುತ್ತಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮಾಹಿತಿಯ ನೀಡಿದೆ. ಜೂನ್‌ನಲ್ಲಿ ಭಾರತ್ ಬಿಲ್ ಪೇ ಮೂಲಕ ಅಗತ್ಯ ವಸ್ತುಗಳು, ಔಷಧಿ ಮತ್ತು ದಿನಸಿ ಶಾಪಿಂಗ್ ಹೆಚ್ಚಾದ ಕಾರಣದಿಂದಾಗಿ 17 ಮಿಲಿಯನ್ ವಹಿವಾಟು ಅಂದರೆ ಸುಮಾರು 2,970 ಕೋಟಿ ರೂ. ವಹಿವಾಟು ನಡೆದಿದ್ದರಿಂದ ಚೇತರಿಕೆ ಕಂಡಿದೆ ಎನ್ನಲಾಗಿದೆ.
ನಾವು ಫೆಬ್ರವರಿ ತಿಂಗಳ ವಹಿವಾಟಿಗೆ ಹತ್ತಿರದಲ್ಲಿದ್ದೇವೆ, ಜೊತೆಗೆ ಈ ನಾಲ್ಕು ತಿಂಗಳಲ್ಲಿ ಡಿಜಿಟಲ್ ಹಣ ವಹಿವಾಟು ಕೊಂಚ ಇಳಿಮುಖ ಕಂಡಿದೆ. ಇನ್ನು ಮುಂದೆ ದೇಶದ ದೊಡ್ಡ ನಗರಗಳಲ್ಲಿನ ಆರ್ಥಿಕ ಚಟುವಟಿಕೆ ಹೀಗೆಯೇ ಮುಂದುವರೆಯುತ್ತದೆಂದು ನಾವು ಭಾವಿಸಿದ್ದೇವೆ, ಇದು ಮುಂಬರುವ ತಿಂಗಳುಗಳಲ್ಲಿ ಡಿಜಿಟಲ್ ಪಾವತಿಗಳ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಯುಪಿಐ ಮತ್ತು ರುಪೇನಲ್ಲಿ ಶೂನ್ಯ ವ್ಯಾಪಾರಿ ದರ ರಿಯಾಯಿತಿ ಅಥವಾ MDR ಅನ್ನು ಪರಿಶೀಲಿಸಲು ನಾವು ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು NPCI, ಎಂಡಿ ಮತ್ತು CEO ದಿಲೀಪ್ ಅಸ್ಬೆ ಹೇಳಿದ್ದಾರೆ.
ದೇಶದ ಹೆಚ್ಚಿನ ಭಾಗಗಳಲ್ಲಿ ಆಫ್‌ಲೈನ್ ಮತ್ತು ಆನ್‌ಲೈನ್ ವ್ಯಾಪಾರಗಳು ಈಗ ತೆರೆದಿವೆ, ಹಾಗೆಯೇ ಕಳೆದ 3 ತಿಂಗಳುಗಳಲ್ಲಿ ಹೊಸ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ರೀಚಾರ್ಜ್‌ಗಳು ಮತ್ತು ಬಿಲ್ ಪಾವತಿಗಳ ಸಂಖ್ಯೆ ಹೆಚ್ಚಾಗಿದೆಯೆಂದು ಫೋನ್‌ಪೇ ಸಹ-ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್ ಹೇಳಿದರು.
Published On - 12:29 pm, Tue, 4 August 20