ಪೂಜಾ ಖೇಡ್ಕರ್ ಪ್ರಕರಣ​ದ ಬಳಿಕ ಎಚ್ಚೆತ್ತ ಯುಪಿಎಸ್​ಸಿ, ಪರೀಕ್ಷೆಗಳಿಗೆ ಹೊಸ ಸುಧಾರಿತ ತಂತ್ರಜ್ಞಾನಗಳ ಬಳಕೆ

|

Updated on: Jul 25, 2024 | 12:43 PM

ಟ್ರೈನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್ ವಂಚನೆ ಪ್ರಕರಣ ಬೆಳಕಿಗೆ ಬಂದ ಬಳಿಕ ಯುಪಿಎಸ್​ಸಿ ಎಚ್ಚೆತ್ತುಕೊಂಡಿದೆ. ಪರೀಕ್ಷಾ ವ್ಯವಸ್ಥೆಯನ್ನು ನವೀಕರಿಸಲು ಸುಧಾರಿತ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳಲು ನಿರ್ಧರಿಸಿದೆ.

ಪೂಜಾ ಖೇಡ್ಕರ್ ಪ್ರಕರಣ​ದ ಬಳಿಕ ಎಚ್ಚೆತ್ತ ಯುಪಿಎಸ್​ಸಿ, ಪರೀಕ್ಷೆಗಳಿಗೆ ಹೊಸ ಸುಧಾರಿತ ತಂತ್ರಜ್ಞಾನಗಳ ಬಳಕೆ
ಯುಪಿಎಸ್​ಸಿ
Follow us on

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್(ಯುಪಿಎಸ್​ಸಿ) ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ತಡೆಯಲು ಹೊಸ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಟ್ರೈನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್ ವಂಚನೆ ಪ್ರಕರಣ ಬೆಳಕಿಗೆ ಬಂದ ಬಳಿಕ ಯುಪಿಎಸ್​ಸಿ ಎಚ್ಚೆತ್ತುಕೊಂಡಿದೆ.

ಪರೀಕ್ಷಾ ವ್ಯವಸ್ಥೆಯನ್ನು ನವೀಕರಿಸಲು ಸುಧಾರಿತ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಅಭ್ಯರ್ಥಿಗಳಿಗೆ ಅತ್ಯಾಧುನಿಕ ಆಧಾರ್ ಆಧಾರಿತ ಫಿಂಗರ್​ಪ್ರಿಂಟ್ ದೃಢೀಕರಣ ಹಾಗೂ ಫೇಸ್​ ರೆಕಗ್ನಿಷನ್ ಸಿಸ್ಟಂ ಅಳವಡಿಸಲಿದೆ.

ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್ (CCTV) ಕಣ್ಗಾವಲು, ಇ-ಅಡ್ಮಿಟ್ ಕಾರ್ಡ್‌ಗಳ QR ಕೋಡ್ ಸ್ಕ್ಯಾನಿಂಗ್‌ನಂತಹ ತಾಂತ್ರಿಕ ಪರಿಹಾರಗಳನ್ನು ಯೋಜಿಸಲಾಗುತ್ತಿದೆ.

UPSC ಪ್ರತಿ ವರ್ಷ 14 ಪರೀಕ್ಷೆಗಳನ್ನು ನಡೆಸುತ್ತದೆ, ಇದರಲ್ಲಿ ನಾಗರಿಕ ಸೇವೆಗಳ ಪರೀಕ್ಷೆ (CSE) ಮತ್ತು ಹಲವಾರು ನೇಮಕಾತಿ ಪರೀಕ್ಷೆಗಳು ಮತ್ತು ಉನ್ನತ ಸರ್ಕಾರಿ ಹುದ್ದೆಗಳಿಗೆ ಸಂದರ್ಶನಗಳು ಸೇರಿವೆ.

ಮತ್ತಷ್ಟು ಓದಿ: ಗಡುವು ಮುಗಿದರೂ ಐಎಎಸ್​ ಅಕಾಡೆಮಿಗೆ ವಾಪಸಾಗದ ಪೂಜಾ ಖೇಡ್ಕರ್​

ಯುಪಿಎಸ್‌ಸಿಯು ತಾನು ನಡೆಸುವ ಪರೀಕ್ಷೆಗಳ ಸಮಯದಲ್ಲಿ ತಂತ್ರಜ್ಞಾನ ಸೇವೆಗಳನ್ನು ಒದಗಿಸಲು ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಟೆಂಡರ್ ಕರೆದಿದೆ.

ಪರೀಕ್ಷೆಯ ವೇಳಾಪಟ್ಟಿ, ಪರೀಕ್ಷಾ ಸ್ಥಳಗಳ ಪಟ್ಟಿ ಮತ್ತು ಅಭ್ಯರ್ಥಿಗಳ ಸಂಖ್ಯೆಯನ್ನು ಪರೀಕ್ಷೆಗೆ ಎರಡು ಮೂರು ವಾರಗಳ ಮೊದಲು ಈ ಸೇವೆಗಳನ್ನು ಒದಗಿಸುವವರಿಗೆ ಒದಗಿಸಲಾಗುವುದು ಎಂದು ಟೆಂಡರ್ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ಪೂಜಾ ಖೇಡ್ಕರ್ ಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದರು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ