Air India: ವಿಮಾನದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಾಗ ಅಸಭ್ಯ ವರ್ತನೆ ತೋರಿದ ವ್ಯಕ್ತಿಯ ಕೈಕಾಲು ಕಟ್ಟಿ ಕೂರಿಸಿದ ಸಹ ಪ್ರಯಾಣಿಕರು

|

Updated on: Mar 12, 2023 | 11:41 AM

ಏರ್ ಇಂಡಿಯಾ(Air India) ವಿಮಾನದಲ್ಲಿ ಪ್ರಯಾಣಿಕನೊಬ್ಬ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ನಂತರ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 37 ವರ್ಷದ ವ್ಯಕ್ತಿಯೊಬ್ಬ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದಾನೆ.

Air India: ವಿಮಾನದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಾಗ ಅಸಭ್ಯ ವರ್ತನೆ ತೋರಿದ ವ್ಯಕ್ತಿಯ ಕೈಕಾಲು ಕಟ್ಟಿ ಕೂರಿಸಿದ ಸಹ ಪ್ರಯಾಣಿಕರು
ಏರ್ ಇಂಡಿಯಾ ವಿಮಾನ
Follow us on

ಏರ್ ಇಂಡಿಯಾ(Air India) ವಿಮಾನದಲ್ಲಿ ಪ್ರಯಾಣಿಕನೊಬ್ಬ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ನಂತರ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 37 ವರ್ಷದ ವ್ಯಕ್ತಿಯೊಬ್ಬ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದಾನೆ, ಆರೋಪಿ ರತ್ನಾಕರ್ ಕರುಂಕಂತ್ ದ್ವಿವೇದಿ ವಿರುದ್ಧ ಸಹಾರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಲಂಡನ್​ನಿಂದ ಮುಂಬೈಗೆ ಹೊರಟಿದ್ದ ವಿಮಾನ ಅದಾಗಿತ್ತು. ಆತ ಧೂಮಪಾನ ಮಾಡುತ್ತಿದ್ದಾಗ ಫೈರ್ ಅಲರ್ಟ್​ ಅಲಾರಂ ಹೊಡೆದುಕೊಳ್ಳಲು ಶುರುವಾಗಿತ್ತು, ವಿಮಾನ ಸಿಬ್ಬಂದಿ ಆತನನ್ನು ಎಚ್ಚರಿಸಿ, ಶೌಚಾಲಯದ ಹೊರಗೆ ಕರೆದುಕೊಂಡು ಬಂದಿದ್ದರು. ಬಳಿಕ ಸೀಟಿನಲ್ಲಿ ಕೂರಲು ಆತ ಸಿದ್ಧ ಇರಲಿಲ್ಲ, ಪ್ರಯಾಣಿಕರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದ, ಆಗ ಸಹ ಪ್ರಯಾಣಿಕರೆಲ್ಲಾ ಸೇರಿ ವ್ಯಕ್ತಿಯ ಕೈಕಾಲು ಕಟ್ಟಿ ಕೂರಿಸಿದ್ದರು.

ಆಗಲೂ ಆತ ನಿಲ್ಲದೆ ತಲೆ ಚಚ್ಚಿಕೊಳ್ಳಲು ಶುರು ಮಾಡಿದ್ದ, ತಕ್ಷಣ ಅಲ್ಲಿಯೇ ಇದ್ದ ವೈದ್ಯರೊಬ್ಬರು ಆತನ ಬ್ಯಾಗ್​ನಲ್ಲಿ ಏನಾದರೂ ಔಷಧಿ ಇದೆಯೇ ಎಂಬುದನ್ನು ಪತ್ತೆ ಮಾಡಲು ಹೇಳಿದರು, ಆದರೆ ಬ್ಯಾಗ್​ನಲ್ಲಿ ಕೇವಲ ಸಿಗರೇಟ್​ ಮಾತ್ರ ಕಂಡುಬಂದಿತ್ತು. ವಿಮಾನ ಲ್ಯಾಂಡ್ ಆದ ಕೂಡಲೇ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಮತ್ತಷ್ಟು ಓದಿ: Air India: ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ಸ್ವೀಡನ್​ನಲ್ಲಿ ತುರ್ತು ಭೂಸ್ಪರ್ಶ

ಆರೋಪಿ ಭಾರತೀಯ ಮೂಲದವನಾಗಿದ್ದು, ಅಮೆರಿಕದ ಪ್ರಜೆಯಾಗಿದ್ದು, ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ವೈದ್ಯಕೀಯ ಪರೀಕ್ಷೆಗೆ ಸ್ಯಾಂಪಲ್ ಕಳುಹಿಸಲಾಗಿದ್ದು, ಆ ವೇಳೆ ಆತ ಕುಡಿದ ಅಮಲಿನಲ್ಲಿದ್ದನೋ ಅಥವಾ ಮಾನಸಿಕ ಅಸ್ವಸ್ಥನಾಗಿದ್ದನೋ ಎಂಬುದು ಗೊತ್ತಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ