BTech Pani Puri Wali: ಬಿ.ಟೆಕ್‌ ಮುಗಿಸಿ ಪಾನಿಪುರಿ ಸ್ಟಾಲ್‌ ಪ್ರಾರಂಭಿಸಿ 21ನೇ ವಯಸ್ಸಿಗೆ ಯಶಸ್ಸು ಕಂಡ ತಾಪ್ಸಿ ಉಪಾಧ್ಯಾಯ

ಬಿಟೆಕ್ ಪಾನಿಪುರಿವಾಲಿ ಎಂದೇ ಖ್ಯಾತಿಯಾಗಿರುವ 21 ವರ್ಷದ ತಾಪ್ಸಿ ಉಪಾಧ್ಯಾಯ ಯುವ ಪೀಳಿಗೆಗೆ ಮಾದರಿಯಾಗಿದ್ದಾಳೆ. ಇಲ್ಲಿದೆ ನೋಡಿ ವಿಡಿಯೋ.

BTech Pani Puri Wali: ಬಿ.ಟೆಕ್‌ ಮುಗಿಸಿ ಪಾನಿಪುರಿ ಸ್ಟಾಲ್‌ ಪ್ರಾರಂಭಿಸಿ 21ನೇ ವಯಸ್ಸಿಗೆ ಯಶಸ್ಸು ಕಂಡ ತಾಪ್ಸಿ ಉಪಾಧ್ಯಾಯ
ತಾಪ್ಸಿ ಉಪಾಧ್ಯಾಯImage Credit source: Instagram
Follow us
ಅಕ್ಷತಾ ವರ್ಕಾಡಿ
|

Updated on:Mar 12, 2023 | 1:24 PM

ಪದವಿ ಮುಗಿಸಿದ ಕೂಡಲೇ ಒಂದು ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ. ಕೈ ತುಂಬಾ ಸಂಬಳ ಸಿಗಬೇಕೆಂದು ಕನಸು ಹೊತ್ತು, ನಗರಗಳಿಗೆ ಬರುವ ಯುವಪೀಳಿಗೆಯ ಮಧ್ಯೆ ಇಲ್ಲೊಬ್ಬಳು ಬಿ.ಟೆಕ್‌ ಪದವಿ ಮುಗಿಸಿ, ಪಾನಿ ಪೂರಿ ಸ್ಟಾಲ್‌ ಪ್ರಾರಂಭಿಸಿದ್ದಾಳೆ. ಪಾನಿಪುರಿ ಸ್ಟಾಲ್‌ ಎಂದಾಕ್ಷಣ ಅಂದೆಲ್ಲಾ ಅನಕ್ಷರಸ್ಥರು ಮಾಡುವ ಕೆಲಸ ಎಂದು ಕೀಳು ಭಾವನೆಯಿಂದ ಕಾಣುವವರ ಮಧ್ಯೆ ನಿಂತು ಇಂದಿಗೂ ಕೂಡ ಯಶಸ್ವಿಯಾಗಿ ತನ್ನ ಕೆಲಸವನ್ನು ಗೌರವದಿಂದ  ಮುನ್ನಡೆಸಿಕೊಂಡು ಹೋಗುತ್ತಿದ್ದಾಳೆ. ಇಂದು ಅನೇಕ ಯುವ ಪೀಳಿಗೆಗೆ ಯುವಕ, ಯುವತಿಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಸ್ಫೂರ್ತಿಯಾಗಿದ್ದಾಳೆ.

ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್​​​ನಲ್ಲಿ ಈಕೆಯ ಕುರಿತು ಪೋಸ್ಟ್​​​ ಒಂದು ಶೇರ್​ ಮಾಡಲಾಗಿದ್ದು, ಇದು ಲಕ್ಷಾಂತರ ಜನರಿಗೆ ಆಕೆಯ ಯಶಸ್ಸಿನ ತಲುಪುವುವಂತೆ ಮಾಡಿದೆ. @are_you_hungry007 ಎಂಬ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಮಾರ್ಚ್​ 1ರಂದು ಹಂಚಿಕೊಳ್ಳಲಾದ ವಿಡಿಯೋ ಭಾರೀ ವೈರಲ್​​ ಆಗಿದೆ. ಜೊತೆಗೆ ಸಾಕಷ್ಟು ಜನರು ಆಕೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪೋಸ್ಟ್​​​ ಇಲ್ಲಿದೆ ನೋಡಿ.

ಇದನ್ನೂ ಓದಿ: ವಿಷಕಾರಿ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ನಾಯಿ, ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ

ವಿಡಿಯೋದಲ್ಲಿ ಬುಲೆಟ್ ಮೇಲೆ ಹುಡುಗಿ, ಹಿಂದೆ ಪಾನಿಪುರಿ ಗಾಡಿಯನ್ನು ಕಾಣಬಹುದು. ಜೊತೆಗೆ ತಾನು ಪ್ರಾರಂಭಿಸಿದ ಈ ಪಾನಿಪುರಿ ಸ್ಟಾಲ್‌ ಎಷ್ಟು ವಿಭಿನ್ನ ಹಾಗೂ ಆರೋಗ್ಯಕರ ಆಹಾರದ ಬಗ್ಗೆ ವಿವರಿಸುತ್ತಾರೆ. ಒಂದು ಹೆಣ್ಣಾಗಿ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವುದು ಅಂದುಕೊಂಡಷ್ಟು ಸುಲಭವಲ್ಲ. ಮಹಿಳೆಯಾಗಿ ತಾನು ಎದುರಿಸುವ ಸಮಸ್ಯೆಯನ್ನು ಕೂಡ ವಿಡಿಯೋದಲ್ಲಿ ಹೇಳಿರುವುದನ್ನು ಕಾಣಬಹುದು. ಆರೋಗ್ಯಕರ ಆಹಾರವನ್ನು ನೀಡುವ ಗುರಿಯನ್ನು ಹೊಂದಿರುವ ಈಕೆ ಪುರಿಯನ್ನು ಎಣ್ಣೆಯಲ್ಲಿ ಕರಿಯುವ ಬದಲು ಏರ್ ಪ್ರೈಯರ್ ಬಳಸುತ್ತಾರೆ. ಜೊತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:01 am, Sun, 12 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ