Video Viral: ಇದು ನಮ್ಮ ಭೂಮಿ, ಇಲ್ಲಿ ನೀವು ಕನ್ನಡ ಮಾತನಾಡಿ, ಭಾರೀ ಚರ್ಚೆಯಾಗುತ್ತಿದೆ ಆಟೋ ಚಾಲಕನ ವಿಡಿಯೋ
ಕರ್ನಾಟಕದಲ್ಲಿ ಕನ್ನಡಿಗರ ಹೊರತಾಗಿ ಉತ್ತರ ಭಾರತೀಯರನ್ನು ಭಿಕ್ಷುಕರಂತೆ ನೋಡುವವರ ವಿರುದ್ಧ, ಹಾಗೂ ಯಾವುದೇ ನಿರ್ದಿಷ್ಟ ಭಾಷೆ ಮಾತನಾಡಲು ಬಲವಂತ ಮಾಡುವವರ ವಿರುದ್ಧ ಸಂವಿಧಾನಿಕವಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಟ್ಟಿಟರ್ನಲ್ಲಿ ಬರೆದು ರೀ ಟ್ವೀಟ್ ಮಾಡಲಾಗಿದೆ.
ಆಟೋ ಚಾಲಕನೊಬ್ಬ ತನ್ನ ಪ್ರಯಾಣಿಕರೊಂದಿಗೆ ಕರ್ನಾಟಕದಲ್ಲಿ ಕನ್ನಡ ಮಾತನಾಡಿ, ಹಿಂದಿಯ ಬದಲು ಕನ್ನಡ ಮಾತನಾಡಬಹುದಲ್ಲ ಎಂದು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಇದೀಗಾ ಈ ವಿಚಾರವಾಗಿ ಸಾಮಾಜಿಕ ಜಾಲತಾಣಲದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಆಟೋ ಚಾಲಕ ಹಾಗೂ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದಿದ್ದು. ಈ ತೀವ್ರ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆದರೆ ಇದೀಗ ಈ ವಿಡಿಯೋ ಟ್ವಿಟರ್ನಲ್ಲಿ ಬೇರೆಯೇ ತಿರುವು ಪಡೆದುಕೊಂಡಿದೆ. ಅಷ್ಟಕ್ಕೂ ಏನಿದು ಘಟನೆ? ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಏನಿದು ಘಟನೆ?
ಆಟೋ ಚಾಲಕರೊಬ್ಬರು ತನ್ನ ಆಟೋದಲ್ಲಿ ಬಂದ ಉತ್ತರ ಭಾರತ ಮೂಲದ ಯುವತಿರೊಂದಿಗೆ ಹಿಂದಿಯ ಬದಲು ಕನ್ನಡ ಮಾತನಾಡುವ ಬಗ್ಗೆ ಜಗಳ ಮಾಡಿಕೊಂಡಿದ್ದಾರೆ. ಆದರೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿರಿಬ್ಬರು, ನಾವು ಹಿಂದಿಯಲ್ಲೇ ಮಾತನಾಡುವುದು, ಕನ್ನಡ ಮಾತನಾಡಲ್ಲ ಎಂದು ಹೇಳಿದ್ದಾರೆ. ಇದರಿಂದ ಆಟೋ ಚಾಲಕ ಕೋಪಗೊಂಡಿದ್ದಾನೆ. ಇದು ನಮ್ಮ ಭೂಮಿ, ನೀವು ಕನ್ನಡದಲ್ಲೇ ಮಾತನಾಡಬೇಕು, ನಾನು ಹಿಂದಿ ಏಕೆ ಮಾತನಾಡಬೇಕು, ನಾನಿರುವುದು ನಮ್ಮ ಕರ್ನಾಟಕದಲ್ಲಿ ಎಂದು ಮಾತಿಗಿಳಿದ್ದಿದ್ದಾರೆ. ಆಟೋ ಚಾಲಕ ಹಾಗೂ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ತೀವ್ರ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವೈರಲ್ ವೀಡಿಯೋ ಕರ್ನಾಟಕದದ್ದು, ಆದರೆ ಕರ್ನಾಟಕದ ನಿಖರವಾದ ಘಟನಾ ಸ್ಥಳ ತಿಳಿದುಬಂದಿಲ್ಲ.
ಟ್ವಿಟರ್ ಪೋಸ್ಟ್:
ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೂ ಚರ್ಚೆ ಮಾಡುತ್ತಿದ್ದಾರೆ. ಹೌದು ಯಾಕೆಂದರೆ Anonymous ಎಂಬ ಟ್ವಿಟರ್ ಖಾತೆಯ ಮೂಲಕ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಕನ್ನಡ ಮಾತನಾಡಲು ಬಲವಂತಪಡಿಸುವುದು ಸರಿಯಲ್ಲ. ಭಾರತದಲ್ಲಿ ಭಾಷೆಯ ಆಧಾರದ ಮೇಲೆ ತಾರತಮ್ಯ ಮಾಡುವವರ ವಿರುದ್ಧ ಕೇಂದ್ರ ಸರ್ಕಾರ ಗಮನಹರಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಕ್ಯಾಪ್ಷನ್ ಕೂಡ ಹಾಕಲಾಗಿದೆ. ಬಳಕೆದಾರರು ಟ್ವೀಟ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: ಹೋಳಿ ಆಚರಣೆಯ ವೇಳೆ ಜಪಾನಿ ಯುವತಿಗೆ ಕಿರುಕುಳ, ವಿಡಿಯೋ ವೈರಲ್
ಕರ್ನಾಟಕದಲ್ಲಿ ಕನ್ನಡಿಗರ ಹೊರತಾಗಿ ಉತ್ತರ ಭಾರತೀಯರನ್ನು ಭಿಕ್ಷುಕರಂತೆ ನೋಡುವವರ ವಿರುದ್ಧ, ಹಾಗೂ ಯಾವುದೇ ನಿರ್ದಿಷ್ಟ ಭಾಷೆ ಮಾತನಾಡಲು ಬಲವಂತ ಮಾಡುವವರ ವಿರುದ್ಧ ಸಂವಿಧಾನಿಕವಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಟ್ಟಿಟರ್ನಲ್ಲಿ ಬರೆದು ಮತ್ತೇ ರೀಟ್ವೀಟ್ ಮಾಡಲಾಗಿದೆ.
ವಿಡಿಯೋದಲ್ಲಿ ಇದು ಕರ್ನಾಟಕ, ನೀವು ಕನ್ನಡದಲ್ಲಿ ಮಾತನಾಡಬೇಕು, ನಾನು ಹಿಂದಿಯಲ್ಲಿ ಏಕೆ ಮಾತನಾಡಬೇಕು,” ಎಂದು ಆಟೋ ಡ್ರೈವರ್ ಹೇಳಿದಾಗ, ವಿಡಿಯೋ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು, “ಇಲ್ಲ ನಾವು ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಹೇಳಿದ್ದಾಳೆ. ಅದಕ್ಕೆ ಆಟೋ ಚಾಲಕ “ನೀವು ಉತ್ತರ ಭಾರತೀಯರು, ಇದು ನಮ್ಮ ಭೂಮಿ, ನಿಮ್ಮ ಭೂಮಿ ಅಲ್ಲ, ನೀವು ಕನ್ನಡದಲ್ಲಿ ಮಾತನಾಡಬೇಕು, ನಾನೇಕೆ ಮಾತನಾಡಬೇಕು” ಎಂದು ವಾಗ್ದಾಳಿ ನಡೆಸಿದ್ದಾರೆ. ಭಾರತದಲ್ಲಿ ದಶಕಗಳಿಂದ ಪ್ರಾದೇಶಿಕ ಭಾಷೆಗಳು ಮತ್ತು ಹಿಂದಿಯ ಸ್ವೀಕಾರದ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ, ತೀವ್ರ ವಾಗ್ವಾದಕ್ಕೆ ಕಾರಣವೇನು ಎಂಬುದು ತಿಳಿದಿಲ್ಲ. ಪ್ರಯಾಣಿಕರು ಆಟೋ ಚಾಲಕನಿಗೆ ಹಿಂದಿ ಮಾತನಾಡಲು ಒತ್ತಾಯಿಸುತ್ತಿದ್ದರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:39 pm, Sat, 11 March 23