AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 62ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಫ್ಲೈಟ್ ಹತ್ತಿದ ಅಜ್ಜಿಯ ವಿಡಿಯೋ ವೈರಲ್

ಯೂಟ್ಯೂಬ್​​ ಚಾನೆಲ್​ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದ ತೆಲಂಗಾಣ ಮೂಲದ ಗಂಗವ್ವ  ಮೊದಲ ಬಾರಿ ವಿಮಾನ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

Viral Video: 62ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಫ್ಲೈಟ್ ಹತ್ತಿದ ಅಜ್ಜಿಯ ವಿಡಿಯೋ ವೈರಲ್
ಮೊದಲ ಬಾರಿಗೆ ಫ್ಲೈಟ್ ಹತ್ತಿದ ಅಜ್ಜಿImage Credit source: Instagram
ಅಕ್ಷತಾ ವರ್ಕಾಡಿ
|

Updated on:Mar 10, 2023 | 11:50 AM

Share

ಯೂಟ್ಯೂಬ್​​ ಚಾನೆಲ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದ ತೆಲಂಗಾಣ ಮೂಲದ ಗಂಗವ್ವ  ಮೊದಲ ಸಲದ ವಿಮಾನ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ ಕೆಲವೇ ದಿನಗಳಲ್ಲಿ ಮಿಲಿಯನ್​​ ವೀಕ್ಷಣೆ ಪಡೆದುಕೊಂಡಿದೆ.

ಪ್ರಾರಂಭದ ದಿನಗಳಲ್ಲಿ ತನ್ನ ಅಳಿಯನ ಮೂಲಕ ಹಳ್ಳಿಯ ಜೀವನದ ಬಗ್ಗೆ ವಿಡಿಯೋಗಳನ್ನು ತನ್ನ ಯೂಟ್ಯೂಬ್​​ ಚಾನೆಲ್​ ಮೂಲಕ ಹರಿಬಿಡುತ್ತಿದ್ದ ಗಂಗವ್ವ ಕಾಲ ನಂತರದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದು ತೆಲುಗು ಬಿಗ್ ಬಾಸ್ ರಿಯಾಲಿಟಿ ಶೋನ ಸೀಸನ್​​ 4ನಲ್ಲಿ ಭಾಗವಹಿಸಿದ್ದರು. ಇದು ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಇದೀಗಾ ಮೊದಲ ಬಾರಿಯ ವಿಮಾನ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್​​ ಇಲ್ಲಿದೆ ನೋಡಿ.

View this post on Instagram

A post shared by Milkuri Gangavva (@gangavva)

ಇದನ್ನೂ ಓದಿ: ರಸ್ತೆಯಲ್ಲಿ ಅಜ್ಜಿಯ ಸರ ಕದಿಯಲು ಬಂದ ಕಳ್ಳನಿಗೆ ತಕ್ಕ ಶಾಸ್ತಿ ಮಾಡಿದ 10ರ ದಿಟ್ಟ ಪೋರಿ

ಕಳೆದ ತಿಂಗಳು( ಫೆ. 24) ಗಂಗವ್ವ ಅವರ ಇನ್‌ಸ್ಟಾಗ್ರಾಮ್‌ ಖಾತೆಯಿಂದ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಪೋಸ್ಟ್ ಮಾಡಿದ ನಂತರ, ಈ ವಿಡಿಯೋ 60 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಶೇರ್​ ಹಾಗೂ ಕಾಮೆಂಟ್​ಗಳನ್ನು ಕಾಣಬಹುದು. ಸಾಕಷ್ಟು ಜನರು ಅವರ ಅಳಿಯ ಈ ಒಳ್ಳೆಯ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನೂ ಮುಂದೆಯೂ ನೀವು ನೂರು ವರ್ಷ ಹೀಗೆಯೇ ಖುಷಿ ಖುಷಿಯಾಗಿರಿ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾನೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 11:49 am, Fri, 10 March 23

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More