AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dog Saves Owner: ವಿಷಕಾರಿ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ನಾಯಿ, ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ

ಈ ಪ್ರಪಂಚದಲ್ಲಿ ನಂಬಿಕೆಗೆ ಅರ್ಹವಾದ ಪ್ರಾಣಿ ಎಂದರೆ ಅದು ನಾಯಿ. ಈ ಶ್ವಾನಗಳು ಪ್ರಾತಿಪಾತ್ರವೂ, ಸ್ವಾಮಿನಿಷ್ಠವೂ ಆಗಿರುವುದರ ಜತೆಗೆ ಜೊತೆಗೆ ಬುದ್ದಿವಂತಿಕೆಯನ್ನೂ ಹೊಂದಿರುತ್ತವೆ ಹಾಗೂ ಇವುಗಳು ಬೇಗ ಒಡೆಯನ ಸಾಮೀಪ್ಯವನ್ನು ಪಡೆದುಕೊಳ್ಳುತ್ತವೆ.

Dog Saves Owner: ವಿಷಕಾರಿ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ನಾಯಿ, ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ
ನಾಯಿ
ನಯನಾ ರಾಜೀವ್
|

Updated on: Mar 12, 2023 | 8:30 AM

Share

ಈ ಪ್ರಪಂಚದಲ್ಲಿ ನಂಬಿಕೆಗೆ ಅರ್ಹವಾದ ಪ್ರಾಣಿ ಎಂದರೆ ಅದು ನಾಯಿ. ಈ ಶ್ವಾನಗಳು ಪ್ರಾತಿಪಾತ್ರವೂ, ಸ್ವಾಮಿನಿಷ್ಠವೂ ಆಗಿರುವುದರ ಜತೆಗೆ ಜೊತೆಗೆ ಬುದ್ದಿವಂತಿಕೆಯನ್ನೂ ಹೊಂದಿರುತ್ತವೆ ಹಾಗೂ ಇವುಗಳು ಬೇಗ ಒಡೆಯನ ಸಾಮೀಪ್ಯವನ್ನು ಪಡೆದುಕೊಳ್ಳುತ್ತವೆ. ತಮ್ಮ ಮಾಲಿಕನನ್ನು ಒಪ್ಪಿಕೊಂಡ ಬಳಿಕ ಇವು ಜೀವನಪರ್ಯಂತ ನಿಸ್ವಾರ್ಥವಾದ ಪ್ರೀತಿಯನ್ನು ತೋರುತ್ತಿರುತ್ತವೆ. ನೀವು ಒಂದೇ ಒಂದು ಹೊತ್ತು ಊಟ ಹಾಕಿದರೆ ಸಾಕು, ಅಪಾರ ಪ್ರೀತಿಯನ್ನು ನೀಡುತ್ತವೆ. ಮನೆಗೆ ಕಳ್ಳ ಅಥವಾ ಅಪರಿಚಿತರು ಯಾರೇ ಬಂದರೂ ಅವರನ್ನು ತಡೆಯುತ್ತಾ ಮನೆಯ ಕಾವಲುಗಾರನಾಗಿ ಇರುತ್ತದೆ.

ಹಾಗೆಯೇ ಇತ್ತೀಚೆಗಷ್ಟೇ ನಾಯಿಯೊಂದು ವಿಷಕಾರಿ ಹಾವಿನಿಂದ ತನ್ನ ಮಾಲೀಕನನ್ನು ರಕ್ಷಿಸಿರುವ ಘಟನೆ ವರದಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಈ ಘಟನೆ ನಡೆದಿದ್ದು ಈ ಘಟನೆಯ ಸಂಪೂರ್ಣ ವಿವರ ಹೀಗಿದೆ.

ದಕ್ಷಿಣ ಆಫ್ರಿಕಾದ ನಾಯಿಯೊಂದು ಹಾಸಿಗೆಯ ಕೆಳಗೆ ಅಡಗಿರುವ ಅಪಾಯಕಾರಿ ಮಾಂಬಾ ಹಾವಿನಿಂದ ತನ್ನ ಮಾಲೀಕರನ್ನು ರಕ್ಷಿಸುವ ಮೂಲಕ ತನ್ನ ಶೌರ್ಯವನ್ನು ಮೆರೆದಿದೆ.

ಮಾಲೀಕರು ಹಾಸಿಗೆಯ ಬಳಿ ಬಂದಾಗಲೆಲ್ಲಾ ನಾಯಿ ಜೋರಾಗಿ ಬೊಗುಳುತ್ತಿತ್ತು. ನಾಯಿ ಪ್ರತಿ ಬಾರಿ ಬೊಗಳುವುದು ಏಕೆ ಎಂದು ಹಾಸಿಗೆಯ ಕೆಳಗೆ ನೋಡಿದಾಗ ವಿಷಪೂರಿತ ಹಾವು ಕಾಣಿಸಿತು. ದಕ್ಷಿಣ ಆಫ್ರಿಕಾದ ಹಾವು ಹಿಡಿಯುವ ನಿಕ್ ಇವಾನ್ಸ್ ಈ ಭಯಾನಕ ಕಥೆಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಹಾವು ಹಿಡಿದ ಕಥೆಯನ್ನೂ ಅವರು ಹಂಚಿಕೊಂಡಿರುವುದು ಗಮನಾರ್ಹ.

ಈ ಘಟನೆ ವೈರಲ್ ಆದಾಗ, ನೆಟ್ಟಿಗರು ನಾಯಿಯ ಮೇಲೆ ಮಾಲೀಕ ಇಟ್ಟಿರುವ ನಂಬಿಕೆ ಹಾಗೂ ಮಾಲೀಕನ ಮೇಲೆ ನಾಯಿ ಇಟ್ಟಿರುವ ಕಾಳಜಿ ಪ್ರಶಂಸೆಗೆ ಪಾತ್ರವಾದದ್ದು ಎಂದಿದ್ದಾರೆ, ನಾಯಿಯ ಸಮಯ ಪ್ರಜ್ಞೆಯನ್ನು ಶ್ಲಾಘಿಸಲಾಗುತ್ತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ