Viral Video: ನಾಯಿ ಮರಿಯನ್ನು ಕಿಡ್ನಾಪ್ ಮಾಡಲು ಬಂದ ಯುವಕನಿಗೆ ಕಾದಿತ್ತು ಶಾಕ್, ಅಯ್ಯೋ ಈ ದೊಡ್ಡ ಸೈನ್ಯ ಎಲ್ಲಿತ್ತು?
ಪುಟ್ಟ ನಾಯಿ ಮರಿ, ಬೆಕ್ಕುಗಳು ಇಂತಹ ಮುದ್ದಾದ ಪ್ರಾಣಿಗಳು ಮನೆಯಲ್ಲಿದ್ದರೆ ಎಲ್ಲರನ್ನು ಅವುಗಳು ಆಕರ್ಷಿಸುತ್ತವೆ. ಅವುಗಳನ್ನು ನೋಡಿದರೆ ಯಾರಿಗಾದರೂ ಮುದ್ದಾಡಬೇಕೆಂದು ಅನ್ನಿಸುತ್ತದೆ.
ಯಾರದ್ದೋ ಮನೆಯ ಗೇಟ್ ಎದುರುಗಡೆ ಮುದ್ದಾದ ನಾಯಿಮರಿಯನ್ನು ಕಂಡು ಯುವಕನೊಬ್ಬ ಆ ಮರಿಯನ್ನು ಹಿಡಿಯಲು ಹೋದಾಗ ನಾಯಿಗಳ ಗುಂಪೊಂದು ಆತನನ್ನು ಅಟ್ಟಾಡಿಸಿಕೊಂಡು ಬಂದಿರುವ ವಿಡಿಯೊ ವೈರಲ್ ಆಗಿದೆ, ಇನ್‌ಸ್ಟಾಗ್ರಾಮ್ ಪೇಜ್ ಒಂದರಲ್ಲಿ ವೈರಲ್ ಆಗಿರುವ ಈ ತಮಾಷೆಯ ವೀಡಿಯೋ ನೆಟ್ಟಿಗರ ಮನ ಗೆದ್ದಿದೆ. ಪುಟ್ಟ ನಾಯಿ ಮರಿ, ಬೆಕ್ಕುಗಳು ಇಂತಹ ಮುದ್ದಾದ ಪ್ರಾಣಿಗಳು ಮನೆಯಲ್ಲಿದ್ದರೆ ಎಲ್ಲರನ್ನು ಅವುಗಳು ಆಕರ್ಷಿಸುತ್ತವೆ. ಅವುಗಳನ್ನು ನೋಡಿದರೆ ಯಾರಿಗಾದರೂ ಮುದ್ದಾಡಬೇಕೆಂದು ಅನ್ನಿಸುತ್ತದೆ. ಈ ಪುಟ್ಟ ನಾಯಿ ಮರಿಗಳನ್ನು ಯಾರಾದರು ಮುಟ್ಟಲು ಪ್ರಯತ್ನಿಸಿದರೆ ಅದರ ಅಮ್ಮ ಕೋಪಗೊಂಡು ಬೊಗಳುತ್ತದೆ, ಇನ್ನು ಕೆಲವು ನಾಯಿಗಳು ಕಚ್ಚಿ ಬಿಡುತ್ತವೆ. ನಾಯಿಯನ್ನು ಸಾಕಿದ ಮನೆಯವರಿಗೆ ಮಾತ್ರ ಅವುಗಳ ಮರಿಗಳನ್ನು ಮುಟ್ಟುವ ಅಧಿಕಾರವನ್ನು ನೀಡಿರುತ್ತದೆ. ಬೇರೆ ಯಾರಿಗೂ ತನ್ನ ಮರಿಗಳನ್ನು ಮುಟ್ಟಲು ಬಿಡುವುದಿಲ್ಲ. ಹೀಗೆ ಬೀದಿಯಲ್ಲಿ ಹೋಗುವ ಯಾರೊಬ್ಬರಾದರೂ ತನ್ನ ಮರಿಯನ್ನು ಮುದ್ದಾಡಲು ಬಂದರೆ ನಾಯಿ ಏನು ಮಾಡಬಹುದು? ಆ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಹೋಗುವುದಂತೂ ನಿಜ.
ಇದೇ ರೀತಿಯ ತಮಾಷೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ಈ ವೀಡಿಯೊ ಕ್ಲಿಪ್ ಯುವಕನೊಬ್ಬ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಒಂದು ಮನೆಯ ಗೇಟ್ ಬಳಿ ಮುದ್ದು ಮುದ್ದಾದ ಪುಟ್ಟದೊಂದು ನಾಯಿ ಮರಿ ನಿಂತಿತ್ತು. ಅದನ್ನು ನೋಡಿದ ಆತ ನೇರವಾಗಿ ಗೇಟ್ ಬಳಿ ಬಂದು, ಅಲ್ಲಿ ಮನೆಯವರು ಯಾರಾದರು ಇದ್ದಾರೆಯೇ ಎಂದು ಅತ್ತ ಇತ್ತ ಒಂದು ಬಾರಿ ಕಣ್ಣಾಡಿಸುತ್ತಾನೆ. ಅಲ್ಲಿ ಯಾರು ಇಲ್ಲದ್ದನ್ನು ಕಂಡ ಆತ ಗೇಟ್ ಓಪನ್ ಮಾಡಿ ನಾಯಿ ಮರಿಯನ್ನು ಎತ್ತಿಕೊಂಡು ತನ್ನ ಮನೆಗೆ ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ, ಆ ನಾಯಿ ಮರಿಯ ಅಮ್ಮ ಮತ್ತು ಇತರ ಒಂದಷ್ಟು ನಾಯಿಗಳು ಆ ಯುವಕನನ್ನು ಅಟ್ಟಾಡಿಸಿಕೊಂಡು ಬರುವುದನ್ನು ತೋರಿಸುತ್ತದೆ. ಆ ಯುವಕ ಪಜೀತಿಗೆ ಸಿಲುಕಿಕೊಳ್ಳುವುದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವನ್ನು ಕೂಡಾ ಆ ವಿಡಿಯೊಗೆ ನೀಡಲಾಗಿದೆ.
View this post on Instagram
ಇದನ್ನೂ ಓದಿ:Video Viral : ಅಣ್ಣ-ತಂಗಿ ಮಧ್ಯೆ ಜಗಳ, ಅಮ್ಮ ಬರದಿದ್ರೆ ಮಹಾಯುದ್ಧ ನಡೆಯುತ್ತಿತ್ತು?
ಈ ವೀಡಿಯೋ ನೋಡುಗರನ್ನು ನಕ್ಕು ನಗಿಸುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೋ 2.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ 393k ಲೈಕ್ಸ್ ಮತ್ತು 954 ಕಮೆಂಟ್‌ಗಳನ್ನು ಪಡೆದಿದೆ. ಒಬ್ಬ ಬಳಕೆದಾರರು ಕೊನೆಯಲ್ಲಿ ಅನಿರೀಕ್ಷಿತ ತಿರುವು ಎಂದು ನಗುತ್ತಾ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಕ್ಲೆಮ್ಯಾಕ್ಸ್ ತುಂಬಾ ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
Published On - 4:32 pm, Tue, 7 March 23