ದೆಹಲಿ ಜುಲೈ 22: ಕನ್ವರ್ ಯಾತ್ರೆಯ (Kanwar yatra) ಮಾರ್ಗದುದ್ದಕ್ಕೂ ಆಹಾರ ಮಳಿಗೆ, ಅಂಗಡಿ ಇಟ್ಟುಕೊಂಡವರು ತಮ್ಮ ಹೆಸರನ್ನು ಪ್ರದರ್ಶಿಸುವಂತೆ ನಿರ್ದೇಶಿಸಿದ ಉತ್ತರ ಪ್ರದೇಶ (Uttar Pradesh) ಮತ್ತು ಉತ್ತರಾಖಂಡ ಸರ್ಕಾರಗಳ ಆದೇಶವನ್ನು ಸುಪ್ರೀಂಕೋರ್ಟ್ (Supreme Court) ಸೋಮವಾರ ತಡೆಹಿಡಿದಿದೆ. ಆಹಾರ ಮಾರಾಟಗಾರರು ಮತ್ತು ಬೀದಿ ಬದಿ ವ್ಯಾಪಾರಿಗಳು ಹೆಸರು ಪ್ರದರ್ಶಿಸುವಂತೆ ಬಲವಂತ ಮಾಡಬಾರದು. ಕನ್ವಾರಿಯಾಗಳಿಗೆ ನೀಡುತ್ತಿರುವ ಆಹಾರ ಯಾವುದು ಎಂಬುದನ್ನು ತೋರಿಸಬಹುದು ಎಂದು ನ್ಯಾಯಪೀಠ ಹೇಳಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶಕ್ಕೆ ನೋಟಿಸ್ ಜಾರಿ ಮಾಡಿದೆ.
“ಹಿಂತಿರುಗಿಸಬಹುದಾದ ದಿನಾಂಕದವರೆಗೆ, ಚರ್ಚೆಗೆ ಸಂಬಂಧಿಸಿದಂತೆ, ಮೇಲಿನ ನಿರ್ದೇಶನಗಳನ್ನು ಜಾರಿಗೊಳಿಸುವುದನ್ನು ನಿಷೇಧಿಸುವ ಮಧ್ಯಂತರ ಆದೇಶವನ್ನು ರವಾನಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆಹಾರ ಮಾರಾಟಗಾರರು, ವ್ಯಾಪಾರಿಗಳು, ಇತರರು ಕನ್ವಾರಿಯಾಗಳಿಗೆ ಯಾವ ರೀತಿಯ ಆಹಾರ ಬಡಿಸುತ್ತದ್ದಾರೆ ಎಂಬುದನ್ನು ಪ್ರದರ್ಶಿಸಬಹುದು ಆದರೆ ಅವರ ಹೆಸರನ್ನು ಬಹಿರಂಗಪಡಿಸಲು ಒತ್ತಾಯಿಸಬಾರದು ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿದೆ.
ಏತನ್ಮಧ್ಯೆ, ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಭಟ್ಟಿ ಅವರು ಅಂತರರಾಷ್ಟ್ರೀಯ ಗುಣಮಟ್ಟದ ನೈರ್ಮಲ್ಯವನ್ನು ಕಾಪಾಡಿಕೊಂಡಿದ್ದರಿಂದ ಕೇರಳದಲ್ಲಿ ಮುಸ್ಲಿಮರೊಬ್ಬರು ನಡೆಸುತ್ತಿದ್ದ ಸಸ್ಯಾಹಾರಿ ರೆಸ್ಟೋರೆಂಟ್‌ಗೆ ಆಗಾಗ್ಗೆ ಹೋಗುತ್ತಿದ್ದೆ ಎಂದು ಹೇಳಿದ್ದಾರೆ.
”ಕೇರಳದಲ್ಲಿದ್ದಾಗ ನನಗೆ ಗೊತ್ತು, ಅದರ ಬಗ್ಗೆ ಅನುಭವವೂ ಇದೆ. ನಾನು ಈ ನ್ಯಾಯಾಲಯದ ಸಿಟ್ಟಿಂಗ್ ಜಡ್ಜ್ ಆಗಿರುವ ಕಾರಣ ಮುಕ್ತವಾಗಿ ಹೇಳಲು ಸಾಧ್ಯವಿಲ್ಲ. ಊರಿನ ಹೆಸರನ್ನು ಬಹಿರಂಗಪಡಿಸದೆ ತಮ್ಮ ಅನುಭವವನ್ನು ಹೇಳಿದ ಭಟ್ಟಿ, ಕೇರಳದಲ್ಲಿ ಹಿಂದೂಗಳು ನಡೆಸುತ್ತಿರುವ ಮತ್ತು ಮುಸ್ಲಿಮರು ನಡೆಸುತ್ತಿರುವ ಸಸ್ಯಾಹಾರಿ ಹೋಟೆಲ್ ಇದೆ. ಆ ರಾಜ್ಯದ ಒಬ್ಬ ಮುಸಲ್ಮಾನ ನಡೆಸುತ್ತಿದ್ದ ಹೊಟೇಲ್‌ಗೆ ನಾನು ಹೋಗುತ್ತಿದ್ದೆ. ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ ವಿಷಯಕ್ಕೆ ಬಂದರೆ ಅವರು ಎಲ್ಲವನ್ನೂ ಪ್ರದರ್ಶಿಸುತ್ತಿದ್ದರು. ಅವರು ದುಬೈನಲ್ಲಿದ್ದು ಬಂದವರು. ಅವರು ಸುರಕ್ಷತೆ, ಶುಚಿತ್ವ ಮತ್ತು ನೈರ್ಮಲ್ಯದ ಅಂತರಾಷ್ಟ್ರೀಯ ಮಾನದಂಡಗಳನ್ನು ಕಾಪಾಡಿಕೊಂಡಿದ್ದರು, ಹಾಗಾಗಿ ಆ ಹೋಟೆಲ್‌ಗೆ ಹೋಗುವುದು ನನ್ನ ಆಯ್ಕೆಯಾಗಿತ್ತು ”ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಲೋಕಸಭಾ ಸಂಸದ ಮಹುವಾ ಮೊಯಿತ್ರಾ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, “ನೀವು ಮೆನು ಕಾರ್ಡ್ ಅನ್ನು ಆಯ್ಕೆ ಮಾಡಿದ್ದೀರಿ, ಹೆಸರು ನೋಡಿ ಅಲ್ಲ ಎಂದಿದ್ದಾರೆ.
ಈ ಆದೇಶದ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸಿತು.
ಯಾವುದೇ ಔಪಚಾರಿಕ ಆದೇಶವನ್ನು ಜಾರಿಗೊಳಿಸಲಾಗಿದೆಯೇ ಎಂದು ಪೀಠವು ಸಿಂಘ್ವಿಗೆ ಕೇಳಿದೆ. ಇದಕ್ಕೆ ಸಿಂಘ್ವಿ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸಬೇಕು ಎಂದು ಅಸ್ಪಷ್ಟವಾದ ಆದೇಶವನ್ನು ರವಾನಿಸಲಾಗಿದೆ ಎಂದು ಅವರು ಉತ್ತರಿಸಿದರು.
ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಪರವಾಗಿ ಹಾಜರಾದ ಹಿರಿಯ ವಕೀಲ ಚಂದರ್ ಉದಯ್ ಸಿಂಗ್, ಇಂತಹ ಆದೇಶವನ್ನು ಹೊರಡಿಸುವ ಅಧಿಕಾರವನ್ನು ಯಾವುದೇ ಕಾನೂನು ಪೊಲೀಸ್ ಆಯುಕ್ತರಿಗೆ ನೀಡಿಲ್ಲ ಎಂದು ಹೇಳಿದರು. ಪೀಠವು ನಂತರ ಉತ್ಪ್ರೇಕ್ಷೆಯಿಂದ ದೂರವಿರಲು ಸಿಂಘ್ವಿಗೆ ಕೇಳಿಕೊಂಡಿತು, ಈ ಆದೇಶಗಳು “ಸುರಕ್ಷತೆ ಮತ್ತು ನೈರ್ಮಲ್ಯ” ಆಯಾಮಗಳನ್ನು ಸಹ ಹೊಂದಿರಬಹುದು ಎಂದು ಹೇಳಿದರು.
ಇದನ್ನೂ ಓದಿ: Kanwar yatra: ಕನ್ವರ್ ಯಾತ್ರಾ ಮಾರ್ಗದಲ್ಲಿ ಆಹಾರ ಮಳಿಗೆಯಲ್ಲಿ ಹೆಸರು ಪ್ರದರ್ಶನ; ಯುಪಿ ಆದೇಶಕ್ಕೆ ಸುಪ್ರೀಂ ತಡೆ
ವಿವಿಧ ಧರ್ಮಗಳ ಜನರು ಯುಗಯುಗಗಳಿಂದ ಕನ್ವಾರಿಯರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ವಕೀಲರು ಉತ್ತರಿಸಿದರು.
ಪ್ರತಿಪಕ್ಷಗಳ ಹೊರತಾಗಿ, ಬಿಜೆಪಿ ನೇತೃತ್ವದ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಲೋಕದಳ (RLD) ಮತ್ತು ಜೆಡಿಯು ಸೇರಿದಂತೆ ಅದರ ಮಿತ್ರಪಕ್ಷಗಳು ಸಹ ವಿರೋಧಿಸಿದವು.
ಪ್ರತಿಪಕ್ಷಗಳು ಆದೇಶವನ್ನು ವಿಭಜಕ ಎಂದು ಕರೆದರೆ, ಧಾರ್ಮಿಕ ಭಾವನೆಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ