ಉತ್ತರ ಪ್ರದೇಶ ಕಾನ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪಡೆದ 14 ಮಕ್ಕಳಿಗೆ ಎಚ್‌ಐವಿ, ಹೆಪಟೈಟಿಸ್ ಬಿ ಹಾಗೂ ಸಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ರಕ್ತದಾನದ ವೇಳೆ ಸೂಕ್ತ ಪರೀಕ್ಷೆ ಮಾಡದ ಕಾರಣ ಈ ಪ್ರಮಾದ ನಡೆದಿದೆ ಎಂದು ವರದಿಯಾಗಿದೆ. ಕಾನ್ಪುರದ ಲಾಲಾ ಲಜಪತ್ ರಾಯ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
180 ಥಲಸ್ಸೆಮಿಯಾ ರೋಗಿಗಳು ಆಸ್ಪತ್ರೆಯಲ್ಲಿ ರಕ್ತ ಪಡೆದಿದ್ದಾರೆ, 14 ಮಕ್ಕಳು ಖಾಸಗಿ ಮತ್ತು ಜಿಲ್ಲಾ ಆಸ್ಪತ್ರೆಗಳಿಂದ ರಕ್ತಪಡೆದರು. ನಂತರದ ಪರೀಕ್ಷೆಯಲ್ಲಿ ಎಚ್‌ಐವಿ ಹಾಗೂ ಹೆಪಟೈಟಿಸ್ ಸೋಂಕಿಗೆ ಒಳಗಾಗಿದ್ದಾರೆ. ಆರರಿಂದ 16 ವರ್ಷದೊಳಗಿನ ಮಕ್ಕಳು ಸೋಂಕಿಗೆ ತುತ್ತಾಗಿದ್ದಾರೆ, ಅದರಲ್ಲಿ ಏಳು ಮಕ್ಕಳಿಗೆ ಹೆಪಟೈಟಿಸ್ ಬಿ ಹಾಗೂ ಐವರಿಗೆ ಹೆಪಟೈಟಿಸ್ ಸಿ ಹಾಗೂ ಇಬ್ಬರಿಗೆ ಎಚ್‌ಐವಿ ಇರುವುದು ಪತ್ತೆಯಾಗಿದೆ.
ಹೆಪಟೈಟಿಸ್ ದೃಢಪಟ್ಟವರನ್ನು ಗ್ಯಾಸ್ಟ್ರೋಎಂಟರಾಲಜಿ ವಿಭಾಗಕ್ಕೆ ಹಾಗೂ ಎಚ್‌ಐವಿ ರೋಗಿಗಳನ್ನು ಕಾನ್ಪುರದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೈರಸ್ಗಳು ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಹೆಚ್ಚು ಗಂಭೀರ ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತದೆ.
ಮತ್ತಷ್ಟು ಓದಿ:HIV AIDS: ಎಚ್‌ಐವಿ ಏಡ್ಸ್ ಕುರಿತು ಈಗಲೂ ತಿಳಿದುಕೊಳ್ಳಬೇಕಾದ ಅಂಶಗಳಿವು
ಯಾರಾದರೂ ರಕ್ತದಾನ ಮಾಡಿದಾಗ ವೈರಸ್ ಇರುವಿಕೆಯನ್ನು ಪರೀಕ್ಷಿಸಲಾಗುತ್ತದೆ. ಆದರೆ ಮಕ್ಕಳು ರಕ್ತ ಪಡೆಯಲು ವಿಂಡೋ ಪೀರಿಯಡ್ನಲ್ಲಿ ಇರಬೇಕಾಗುತ್ತದೆ. ಈ ಹಂತದಲ್ಲಿ ರಕ್ತದಲ್ಲಿ ವೈರಸ್ ಇರುವಿಕೆಯನ್ನು ಪರೀಕ್ಷೆಯಿಂದ ಕಂಡುಹಿಡಿಯಲಾಗುವುದಿಲ್ಲ ಹೆಪಟೈಟಿಸ್ ವೈರಸ್ ನಿಯಂತ್ರಣ ಮಂಡಳಿಯು ಸೋಂಕಿನ ಮೂಲವನ್ನು ಕಂಡುಹಿಡಿಯಲು ತನಿಖೆ ನಡೆಸಲಿದೆ.
ಥಲಸ್ಸೆಮಿಯಾ ಎಂಬುದು ದೇಹವು ಸಾಕಷ್ಟು ಹಿಮೋಗ್ಲೋಬಿನ್ ಅನ್ನು ಉತ್ಪಾದಿಸಲು ಸಾಧ್ಯವಾಗದ ಸ್ಥಿತಿಯಾಗಿದೆ. ಭಾರತದಲ್ಲಿ ಥಲಸ್ಸೆಮಿಯಾದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ