Uttar Pradesh: ಉತ್ತರ ಪ್ರದೇಶದ ಹಾಪುರದಲ್ಲಿ 40 ಮಂಗಗಳ ಸಾವು

ಉತ್ತರ ಪ್ರದೇಶದ ಹಾಪುರದಲ್ಲಿ 40 ಮಂಗಗಳು ಸಾವನ್ನಪ್ಪಿದ್ದು, ವಿಷವುಣಿಸಿರಬಹುದು ಎನ್ನಲಾಗಿದೆ. ಹಾಪುರದ ಗರ್ಮುಕ್ತೇಶ್ವರ ಪ್ರದೇಶದಲ್ಲಿನ ಪೊದೆಗಳಲ್ಲಿ ಮಂಗಗಳು ಮೃತಪಟ್ಟಿವೆ. 

Uttar Pradesh: ಉತ್ತರ ಪ್ರದೇಶದ ಹಾಪುರದಲ್ಲಿ 40 ಮಂಗಗಳ ಸಾವು
ಮಂಗ

Updated on: May 15, 2023 | 12:15 PM

ಉತ್ತರ ಪ್ರದೇಶದ ಹಾಪುರದಲ್ಲಿ 40 ಮಂಗಗಳು ಸಾವನ್ನಪ್ಪಿದ್ದು, ವಿಷವುಣಿಸಿರಬಹುದು ಎನ್ನಲಾಗಿದೆ. ಹಾಪುರದ ಗರ್ಮುಕ್ತೇಶ್ವರ ಪ್ರದೇಶದಲ್ಲಿನ ಪೊದೆಗಳಲ್ಲಿ ಮಂಗಗಳು ಮೃತಪಟ್ಟಿವೆ.  ಸ್ಥಳದಲ್ಲಿ ಹಲವಾರು ಕಲ್ಲಂಗಡಿಗಳು ಮತ್ತು ಬೆಲ್ಲದ ತುಂಡುಗಳು ಕಂಡುಬಂದಿದ್ದರಿಂದ ಮಂಗಗಳು ವಿಷವುಂಡು ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಆಹಾರ ಪದಾರ್ಥಗಳಲ್ಲಿ ವಿಷ ಬೆರೆಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾಗಿದ್ದು, ಅವರ ಸಾವಿಗೆ ಕಾರಣ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಚಿತ್ರದುರ್ಗದಲ್ಲಿ ಮಂಗಗಳ ಸರಣಿ ಸಾವು; ಸತ್ತ ಮಂಗಗಳಿಗೆ ಸಾಂಪ್ರದಾಯಿಕ ಅಂತ್ಯ ಸಂಸ್ಕಾರ

ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ದೂರು ನೀಡಿದ ನಂತರ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಮಂಗಗಳ ಮೃತದೇಹಗಳನ್ನು ಶವಪರೀಕ್ಷೆಗಾಗಿ ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us