AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗದಲ್ಲಿ ಮಂಗಗಳ ಸರಣಿ ಸಾವು; ಸತ್ತ ಮಂಗಗಳಿಗೆ ಸಾಂಪ್ರದಾಯಿಕ ಅಂತ್ಯ ಸಂಸ್ಕಾರ

ಬೇಸಿಗೆ ಆರಂಭದಲ್ಲೇ ಆಹಾರ ಹುಡುಕಿಕೊಂಡು ನಾಡಿಗೆ ಬಂದಿದ್ದ ವಾನರ ಗುಂಪು ಗ್ರಾಮದಲ್ಲೇ ಬೀಡು ಬಿಟ್ಟಿತ್ತು. ಕಳೆದ ಒಂದು ವಾರದಲ್ಲಿ ಗ್ರಾಮದ ವಿವಿಧೆಡೆ ಏಕಾಏಕಿ ಮಂಗಗಳು ಸಾವನ್ನಪ್ಪುತ್ತಿವೆ. ಬಸ್ ನಿಲ್ದಾಣ ಹಿಂಭಾಗ, ಪೊಲೀಸ್ ಕ್ವಾಟ್ರಸ್ ಬಳಿ, ಗ್ರಾಮ ಪಂಚಾಯತಿ ಕಚೇರಿ ಸಮೀಪ ಹೀಗೆ ಗ್ರಾಮದ ವಿವಿಧೆಡೆ ಮಂಗಗಳು ನಿಗೂಢವಾಗಿ ಸಾವನ್ನಪ್ಪಿವೆ

ಚಿತ್ರದುರ್ಗದಲ್ಲಿ ಮಂಗಗಳ ಸರಣಿ ಸಾವು; ಸತ್ತ ಮಂಗಗಳಿಗೆ ಸಾಂಪ್ರದಾಯಿಕ ಅಂತ್ಯ ಸಂಸ್ಕಾರ
ಸತ್ತಿರುವ ಮಂಗಗಳಿಗೆ ಸಾಂಪ್ರದಾಯಿಕವಾಗಿ ಅಂತ್ಯ ಸಂಸ್ಕಾರ
sandhya thejappa
|

Updated on: Apr 22, 2021 | 12:12 PM

Share

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಕಳೆದ ಒಂದು ವಾರದಲ್ಲಿ ನಾಲ್ಕಕ್ಕೂ ಹೆಚ್ಚು ಮಂಗಗಳು ನಿಗೂಢವಾಗಿ ಸಾವಿಗೀಡಾಗಿವೆ. ಮಂಗಗಳ ಸರಣಿ ಸಾವಿನ ಪರಿಣಾಮ ತಾಲೂಕಿನ ಜನರಲ್ಲಿ ಭಾರಿ ಆತಂಕ ಮೂಡಿದೆ. ಮಲೆನಾಡು ಭಾಗದಲ್ಲಿ ಮಂಗಗಳ ಸಾವು ಸೃಷ್ಟಿಸುವ ಅವಾಂತರ ನೆನೆದು ಬರದನಾಡಿನ ಜನರು ಕಂಗೆಟ್ಟಿದ್ದಾರೆ. ರಾಂಪುರ ಗ್ರಾಮ ಪಂಚಾಯತಿ ಸಿಬ್ಬಂದಿ, ಪೊಲೀಸರ ಜೊತೆಗೆ ಕೆಲ ಪ್ರಾಣಿ ಪ್ರಿಯರು ಸೇರಿಕೊಂಡು ಸಾವಿಗೀಡಾದ ಮಂಗಗಳಿಗೆ ಸಾಂಪ್ರದಾಯಿಕ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಗ್ರಾಮದ ಹಿರಿಯ ನಾಗರಿಕರು, ಹನುಮ ಭಕ್ತರು ಸಾಥ್ ನೀಡಿದ್ದಾರೆ. ಮಂಗಗಳ ಶವಕ್ಕೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದ್ದು, ದೇವಸಮುದ್ರ ಗ್ರಾಮ ಕ್ರಾಸ್ ಬಳಿಯ ಅಜ್ಜಯ್ಯನ ದೇಗುಲ ಸಮೀಪದ ಬಯಲಲ್ಲಿ ಗುಂಡಿ ಅಗೆದು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಬೇಸಿಗೆ ಆರಂಭದಲ್ಲೇ ಆಹಾರ ಹುಡುಕಿಕೊಂಡು ನಾಡಿಗೆ ಬಂದಿದ್ದ ವಾನರ ಗುಂಪು ಗ್ರಾಮದಲ್ಲೇ ಬೀಡು ಬಿಟ್ಟಿತ್ತು. ಕಳೆದ ಒಂದು ವಾರದಲ್ಲಿ ಗ್ರಾಮದ ವಿವಿಧೆಡೆ ಏಕಾಏಕಿ ಮಂಗಗಳು ಸಾವನ್ನಪ್ಪುತ್ತಿವೆ. ಬಸ್ ನಿಲ್ದಾಣ ಹಿಂಭಾಗ, ಪೊಲೀಸ್ ಕ್ವಾಟ್ರಸ್ ಬಳಿ, ಗ್ರಾಮ ಪಂಚಾಯತಿ ಕಚೇರಿ ಸಮೀಪ ಹೀಗೆ ಗ್ರಾಮದ ವಿವಿಧೆಡೆ ಮಂಗಗಳು ನಿಗೂಢವಾಗಿ ಸಾವನ್ನಪ್ಪಿವೆ. ಮಂಗಗಳ ಸಾವು ಗ್ರಾಮದ ಜನರಲ್ಲಿ ಸದ್ಯ ಆತಂಕ ಮೂಡಿಸಿದೆ.

ಸಾವಿನ ರಹಸ್ಯ ಬೇಧಿಸಲು ಜನರ ಆಗ್ರಹ ಕೆಲವರು ಇದು ಕೇಡಿನ ಸೂಚನೆ ಎಂದು ಹೇಳಿ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇನ್ನೂ ಕೆಲವರು ಮಲೆನಾಡಿನಲ್ಲಿ ಮಂಗಗಳ ಸಾವಿನಿಂದ ಸಮಸ್ಯೆ ಸೃಷ್ಟಿ ಆಗುತ್ತದೆ ಎಂದುಕೊಂಡು ಭೀತಿಗೊಳ್ಳುತ್ತಿದ್ದಾರೆ. ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಮಂಗಗಳ ಸಾವಿನ ರಹಸ್ಯ ಬೇಧಿಸಬೇಕು. ಆ ಮೂಲಕ ಅಧಿಕಾರಿಗಳು ಗ್ರಾಮದ ಜನರ ಆತಂಕ ದೂರಾಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಮಂಗಗಳ ಸರಣಿ ಸಾವಾಗಿದೆ. ಮಂಗಗಳ ಸಾವು ಸ್ಥಳೀಯರಲ್ಲಿ ಭೀತಿ ಸೃಷ್ಟಿಸಿದೆ. ಅಂತೆಯೇ ಕಣ್ಣೆದುರೇ ಸತ್ತು ಬಿದ್ದ ಮಂಗಗಳ ಸಾವಿನಿಂದ ನೋವಾಗಿದೆ. ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಮಂಗಗಳ ರಕ್ಷಣೆ ಮಾಡಬೇಕು ಎಂದು ಸ್ಥಳೀಯರಾದ ಮಂಜುನಾಥ್ ಹೇಳಿದರು.

ರಾಂಪುರದಲ್ಲಿ ಮಂಗಗಳು ಸಾವಿಗೀಡಾಗಿರುವ ಮಾಹಿತಿ ಸಿಕ್ಕಿದೆ. ನಾವು ಸ್ಥಳ ಪರಿಶೀಲನೆಗೆ ತೆರಳಿದಾಗ ಮಂಗಗಳ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಬಿಸಿಲಿನ ತಾಪ ಹೆಚ್ಚಿರುವುದರಿಂದ ಬಳಲಿ ಮಂಗಗಳು ಸಾವನ್ನಪ್ಪಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸಿ ಉಳಿದ ಮಂಗಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಶುವೈದ್ಯ ಡಾ.ಆಬೀದ್ ಹುಸೇನ್ ತಿಳಿಸಿದ್ದಾರೆ.

ಇದನ್ನೂ ಓದಿ

ಕೇರಳದಲ್ಲಿ ಆಮ್ಲಜನಕಕ್ಕೆ ಇಲ್ಲ ಬರ, ತಮಿಳುನಾಡು ಕರ್ನಾಟಕಕ್ಕೆ ಇಲ್ಲಿಂದ ಪೂರೈಕೆಯಾಗಲಿದೆ ವೈದ್ಯಕೀಯ ಆಕ್ಸಿಜನ್

ಕನ್ನಡ ಸೇವೆಗೈದವರ ಹೆಸರೇ ತಪ್ಪು: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿ ನಿರ್ಲಕ್ಷಕ್ಕೆ ಆಕ್ರೋಶ

(Monkeys are dying in Chitradurga and doing a traditional funeral for dead monkeys)

ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ