ಮಂಗಳೂರು: ಗೂಡ್ಸ್ ರೈಲು ಡಿಕ್ಕಿಯಾಗಿ 15 ಕ್ಕೂ ಹೆಚ್ಚು ಜಾನುವಾರುಗಳ ಸಾವು

ರೈಲು ಡಿಕ್ಕಿ 15 ಕ್ಕೂ ಹೆಚ್ಚು ಎಮ್ಮೆಗಳು ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಜೋಕಟ್ಟೆ ಅಂಗರಗುಂಡಿ ಎಂಬಲ್ಲಿ ನಡೆದಿದೆ.

ಮಂಗಳೂರು: ಗೂಡ್ಸ್ ರೈಲು ಡಿಕ್ಕಿಯಾಗಿ 15 ಕ್ಕೂ ಹೆಚ್ಚು ಜಾನುವಾರುಗಳ ಸಾವು
ಗೂಡ್ಸ್​​ ರೈಲು
Follow us
|

Updated on:May 15, 2023 | 12:36 PM

ದಕ್ಷಿಣ ಕನ್ನಡ: ರೈಲು (Train) ಡಿಕ್ಕಿಯಾಗಿ  15 ಕ್ಕೂ ಹೆಚ್ಚು ಎಮ್ಮೆಗಳು ಸಾವನ್ನಪ್ಪಿರುವ ಘಟನೆ ಮಂಗಳೂರು (Mangaluru) ಹೊರವಲಯದ ಜೋಕಟ್ಟೆ ಅಂಗರಗುಂಡಿ ಎಂಬಲ್ಲಿ ನಡೆದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಗಳೂರಿನ ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿ ತಡರಾತ್ರಿ ಕಾರ್ಯಾಚರಣೆ ನಡೆಸಿ ಹಳಿ ಬಳಿಯ ಎಮ್ಮೆಗಳ ಮೃತದೇಹಗಳನ್ನು ತೆರವು ಮಾಡಿದ್ದಾರೆ. ಈ ಸಂದರ್ಭ ನಾಲ್ಕು ಎಮ್ಮೆಗಳನ್ನು ರಕ್ಷಿಸಲಾಗಿದೆ. ಸ್ಥಳಕ್ಕೆ ರೈಲ್ವೆ ಹಾಗೂ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ. ಕಂಕನಾಡಿ ಕಡೆಯಿಂದ ಎಂಸಿಎಫ್​​ಕಡೆಗೆ ಗೂಡ್ಸ್ ರೈಲು (Goods Train) ಬರುತ್ತಿತ್ತು. ರೈಲಿನ ಶಬ್ಧದಿಂದ ಭಯಗೊಂಡು ಎಮ್ಮೆಗಳು ರೈಲು ಬ್ರಿಡ್ಜ್ ಮೇಲೆ ಓಡಿದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಅಥವಾ ಗೂಡ್ಸ್ ರೈಲು ಸಾಗುವ ಸಂದರ್ಭದಲ್ಲಿ ಹಾರ್ನ್ ಶಬ್ದವೂ ಎಮ್ಮೆಗಳಿಗೆ ಕೇಳಿಸಿಲ್ಲವೋ ಅಥವಾ ಕೇಳಿಸುವ ಹೊತ್ತಿನಲ್ಲಿ ರೈಲು ಹಾಯ್ದು ಹೋಯಿತೋ ತಿಳಿದುಬಂದಿಲ್ಲ.

ಇದನ್ನೂ ಓದಿ: ತುಂಬೆ ಡ್ಯಾಂನಲ್ಲಿ ಕೇವಲ 20 ದಿನಗಳಿಗೆ ಆಗುವಷ್ಟು ಮಾತ್ರ ನೀರು ಸಂಗ್ರಹ, ಮಂಗಳೂರು ನಗರಕ್ಕೆ ಜಲಕ್ಷಾಮ ಸಾಧ್ಯತೆ

ಇನ್ನು ಸಾಮಾನ್ಯವಾಗಿ ಈ ಭಾಗದಲ್ಲಿ ರೈಲ್ವೆ ಟ್ರ್ಯಾಕ್ ಬಳಿ ನೀರು ನಿಲ್ಲುತ್ತದೆ. ಮಳೆ ಬಂದ ಕಾರಣ ಹಾಗೂ ಅಲ್ಲಿ ಬೇರೆ ಬೇರೆ ಕಾರಣಗಳಿಂದ ನೀರು ಸಂಗ್ರಹವಾಗುವ ಹಿನ್ನೆಲೆಯಲ್ಲಿ ಎಮ್ಮೆಗಳು ಗುಂಪುಗೂಡಿ ರೈಲ್ವೆ ಮಾರ್ಗದ ಬಳಿ ನಿಲ್ಲುತ್ತವೆ. ಕಳೆದ ವರ್ಷವೂ ಇದೇ ರೀತಿ ದುರ್ಘಟನೆ ಸಂಭವಿಸಿ, ನಾಲ್ಕೈದು ಎಮ್ಮೆಗಳು ಸಾವನ್ನಪ್ಪಿದ್ದವು.

2021ರಲ್ಲೂ ಇದೇ ರೀತಿ ನಡೆದಿತ್ತು:

2021ರಲ್ಲಿ ಸುರತ್ಕಲ್‌ನ ತೋಕೂರು ಬಳಿ ಬೀಡಾಡಿ ಎಮ್ಮೆಗಳು ಗುಂಪುಗುಂಪಾಗಿ ಒಂದೆಡೆಯಿಂದ ಇನ್ನೊಂದು ಕಡೆಗೆ ತೆರಳುತ್ತಿದ್ದವು. ತಡರಾತ್ರಿ ರೈಲ್ವೆ ಹಳಿ ಮೇಲೆ ಗುಂಪುಗುಂಪಾಗಿ ಸಾಗುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದಿತ್ತು. ಈ ವೇಳೆ 13 ಎಮ್ಮೆಗಳು ಸಾವನ್ನಪ್ಪಿದ್ದವು.

ಹಳಿ ತಪ್ಪಿದ ಡಬಲ್‌ ಡೆಕ್ಕರ್ ರೈಲು, ತಪ್ಪಿದ ಭಾರಿ ರೈಲು ದುರಂತ

ಕೋಲಾರ: ಡಬಲ್‌ ಡೆಕ್ಕರ್ ರೈಲು ಹಳಿ ತಪ್ಪಿರುವ ಘಟನೆ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಬಿಸನತ್ತಮ್ ಬಳಿ ನಡೆದಿದೆ. ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ಡಬಲ್ ಡೆಕ್ಕರ್ ರೈಲು ಬಿಸನತ್ತಮ್ ಬಳಿ  ಬರುತ್ತಿದ್ದಂತೆ  ಸಿ-1 ಕೋಚ್ ಹಾಗೂ ಸೇಪ್ ಗಾರ್ಡ್ ಎರಡು ಕೋಚ್ ಹಳಿ ಬಿಟ್ಟು ಪಕ್ಕಕ್ಕೆ ಇಳಿದಿದೆ. ತಕ್ಷಣ ಗಮನಿಸಿದ ಲೋಕೊ ಪೈಲೆಟ್​ ರೈಲನ್ನು ನಿಲ್ಲಿಸಿದ್ದಾರೆ. ಇದರಿಂದ ಭಾರಿ ದುರಂತ ತಪ್ಪಿದೆ.  ಸ್ಥಳಕ್ಕೆ ಆಗಮಿಸಿದ ಬಂಗಾರಪೇಟೆ ರೈಲ್ವೇ ತಾಂತ್ರಿಕ ಸಿಬ್ಬಂದಿ ರೈಲು ಸಂಚಾರ ಸರಿಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:24 am, Mon, 15 May 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ