ತುಂಬೆ ಡ್ಯಾಂನಲ್ಲಿ ಕೇವಲ 20 ದಿನಗಳಿಗೆ ಆಗುವಷ್ಟು ಮಾತ್ರ ನೀರು ಸಂಗ್ರಹ, ಮಂಗಳೂರು ನಗರಕ್ಕೆ ಜಲಕ್ಷಾಮ ಸಾಧ್ಯತೆ

ತುಂಬೆಯಿಂದ ಪ್ರತಿದಿನ ಪಂಪಿಂಗ್‌ ಮಾಡುತ್ತಿರುವ ವೇಳೆ 8 ಸಂಟಿಮೀಟರ್‌ನಷ್ಟು ನೀರು ಇಳಿಕೆಯಾಗುತ್ತಿತ್ತು. ಆದರೆ ಈಗ ಪಂಪಿಂಗ್‌ ಮಾಡದೇ ಇದ್ದರೂ 4 ಸೆಂ.ಮೀ ಇಳಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ತುಂಬೆ ಡ್ಯಾಂನಲ್ಲಿ ಕೇವಲ 20 ದಿನಗಳಿಗೆ ಆಗುವಷ್ಟು ಮಾತ್ರ ನೀರು ಸಂಗ್ರಹ, ಮಂಗಳೂರು ನಗರಕ್ಕೆ ಜಲಕ್ಷಾಮ ಸಾಧ್ಯತೆ
ತುಂಬೆ ಡ್ಯಾಂ
Follow us
ಆಯೇಷಾ ಬಾನು
|

Updated on: May 01, 2023 | 1:28 PM

ಮಂಗಳೂರು: ಬೇಸಿಗೆಯ ಬೇಗೆಗೆ ಜನ ತತ್ತರಿಸುತ್ತಿದ್ದಾರೆ. ಇದರ ನಡುವೆ ರಾಜ್ಯದ ಹಲವೆಡೆ ನೀರಿಗೆ ಹಾಹಾಕಾರ ಎದುರಾಗಿದೆ. ಮಂಗಳೂರು ನಗರ ಹಾಗೂ ಸುತ್ತಾಮುತ್ತಲಿನ ಪ್ರದೇಶಗಳಿಗೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನಿರಂತರವಾಗಿ ನೀರು ಕಡಿಮೆಯಾಗುತ್ತಿದೆ. ತುಂಬೆ ಡ್ಯಾಂನಲ್ಲಿ ಕೇವಲ 20 ದಿನಕ್ಕೆ ಮಂಗಳೂರು ನಗರಕ್ಕೆ ಪೂರೈಕೆ ಮಾಡುವಷ್ಟು ನೀರಿನ ಸಂಗ್ರಹವಿದೆ. ಸದ್ಯ ನೀರು ಪಂಪಿಂಗ್‌ ಮಾಡದೇ ಇದ್ದರೂ ಕೂಡ ಪ್ರತಿದಿನ 4 ಸೆಂಟಿಮೀಟರ್‌ನಷ್ಟು ನೀರಿನ ಪ್ರಮಾಣ ಇಳಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ತುಂಬೆಯಿಂದ ಪ್ರತಿದಿನ ಪಂಪಿಂಗ್‌ ಮಾಡುತ್ತಿರುವ ವೇಳೆ 8 ಸಂಟಿಮೀಟರ್‌ನಷ್ಟು ನೀರು ಇಳಿಕೆಯಾಗುತ್ತಿತ್ತು. ಆದರೆ ಈಗ ಪಂಪಿಂಗ್‌ ಮಾಡದೇ ಇದ್ದರೂ 4 ಸೆಂ.ಮೀ ಇಳಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲ್ಲಲ್ಲೇ ನೀರಿನ ಹಾಹಾಕಾರ ಏಳಲಿದೆ. ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ಪ್ರಕಾರ, ಹರೇಕಳ ಬ್ಯಾರೇಜ್‌ನ ಹಿನ್ನೀರಿನಿಂದ ನೀರು ಹರಿಸುವುದರಿಂದ ತುಂಬೆ ಅಣೆಕಟ್ಟಿನ ನೀರಿನ ಮಟ್ಟವು ದಿನಕ್ಕೆ 8 ಸೆಂಟಿಮೀಟರ್‌ನಿಂದ 4 ಸೆಂಟಿಮೀಟರ್‌ಗೆ ಇಳಿಕೆಯಾಗಿದೆ, ಇದು ಇನ್ನೂ ಕಾರ್ಯಾರಂಭ ಮಾಡಿಲ್ಲ. ಎಂಸಿಸಿಯು ತುಂಬೆ ಅಣೆಕಟ್ಟಿನ ಕೆಳಭಾಗದಲ್ಲಿರುವ ಹರೇಕಳ ಬ್ಯಾರೇಜ್‌ನ ಹಿನ್ನೀರಿನಿಂದ ಒಂದು ವಾರದ ಹಿಂದೆ ಮತ್ತೆ ನೀರನ್ನು ಪಂಪ್ ಮಾಡಲು ಪ್ರಾರಂಭಿಸಿದೆ.

ಇದನ್ನೂ ಓದಿ: ಭದ್ರಾ ಡ್ಯಾಂನಿಂದ ತುಂಗಭದ್ರ ನದಿಗೆ ನೀರು; ನದಿ ಪಾತ್ರದ ಜನ ಎಚ್ಚರಿಕೆ ವಹಿಸಲು ಸೂಚನೆ

ಈ ಹಿಂದೆ ತುಂಬೆ ಅಣೆಕಟ್ಟಿನ ನೀರಿನ ಮಟ್ಟ ದಿನಕ್ಕೆ ಸರಾಸರಿ 8 ಸೆಂಟಿಮೀಟರ್‌ಗಳಷ್ಟು ಇಳಿಕೆಯಾಗುತ್ತಿತ್ತು. ಆದಾಗ್ಯೂ, ಮಂಗಳೂರು ಪಾಲಿಕೆ, ಹರೇಕಳ ಬ್ಯಾರೇಜ್‌ನಿಂದ ಹಿನ್ನೀರನ್ನು ಪಂಪ್ ಮಾಡಲು ಪ್ರಾರಂಭಿಸಿದ ನಂತರ, ತುಂಬೆ ಅಣೆಕಟ್ಟು ದಿನಕ್ಕೆ 4cm ವರೆಗೆ ಕಡಿಮೆಯಾಗಿದೆ. ಕನಿಷ್ಠ ಮುಂದಿನ 20 ದಿನಗಳವರೆಗೆ ನೀರಿನ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತುಂಬೆ ಡ್ಯಾಂನಲ್ಲಿ ಏಪ್ರಿಲ್ 30 ರಂದು ನೀರಿನ ಮಟ್ಟ 4.48 ಮೀಟರ್‌ಗೆ ಇಳಿಕೆಯಾಗಿದ್ದು, ಸುಮಾರು 2.5ಮೀಟರ್‌ವರೆಗೆ ಮಂಗಳೂರು ನಗರಕ್ಕೆ ಪಂಪಿಂಗ್‌ ಮಾಡಬಹುದಾಗಿದೆ. ಆದುದರಿಂದ ಇನ್ನು 2.5ಮೀಟರ್‌ ಮಾತ್ರ ನೀರು ಬಳಕೆಗೆ ಯೋಗ್ಯವಾಗಿದೆ.

ತುಂಬೆಯಲ್ಲಿರುವ ಪಂಪಿಂಗ್ ಸ್ಟೇಷನ್‌ನಲ್ಲಿ ಎಂಸಿಸಿ ನಿರ್ವಹಣಾ ಕಾರ್ಯವನ್ನು ತೆಗೆದುಕೊಳ್ಳುತ್ತಿದ್ದ ಕಾರಣ ಏಪ್ರಿಲ್ 27 ರಂದು ಬೆಳಿಗ್ಗೆ 6 ರಿಂದ ಏಪ್ರಿಲ್ 29 ರ ಬೆಳಿಗ್ಗೆ 6 ರ ನಡುವೆ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಶನಿವಾರ ನಗರಕ್ಕೆ ನೀರನ್ನು ಪಂಪ್ ಮಾಡುವುದನ್ನು ಪುನರಾರಂಭಿಸಿಲಾಗಿದೆ. ಮತ್ತು ಎತ್ತರದ ಪ್ರದೇಶಗಳಿಗೆ ನೀರು ಬರಲು ಒಂದು ಅಥವಾ ಎರಡು ದಿನಗಳು ಬೇಕಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ