Chhattisgarh Accident: ಛತ್ತೀಸ್​ಗಢದಲ್ಲಿ ಟ್ರಕ್​ ಹಾಗೂ ಪಿಕಪ್ ವ್ಯಾನ್ ನಡುವೆ ಅಪಘಾತ, 6 ಮಂದಿ ಸಾವು, 25 ಜನರಿಗೆ ಗಾಯ

ಟ್ರಕ್ ಹಾಗೂ ಪಿಕಪ್​ ವ್ಯಾನ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ.

Chhattisgarh Accident: ಛತ್ತೀಸ್​ಗಢದಲ್ಲಿ ಟ್ರಕ್​ ಹಾಗೂ ಪಿಕಪ್ ವ್ಯಾನ್ ನಡುವೆ ಅಪಘಾತ, 6 ಮಂದಿ ಸಾವು, 25 ಜನರಿಗೆ ಗಾಯ
ಅಪಘಾತ
Follow us
ನಯನಾ ರಾಜೀವ್
|

Updated on: May 15, 2023 | 9:53 AM

ಟ್ರಕ್ ಹಾಗೂ ಪಿಕಪ್​ ವ್ಯಾನ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಅಪಘಾತದಲ್ಲಿ ಮಗು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ, ಬಲೋದಬಜಾರ್ ರಾಷ್ಟ್ರೀಯ ಹೆದ್ದಾರಿಯ ಗೋದಾ ಪುಲಿಯಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.

ಅಪಘಾತದ ಸಮಯದಲ್ಲಿ ಪಿಕಪ್ ವ್ಯಾನ್ ಸುಮಾರು 30 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಅಧಿಕಾರಿಗಳ ಪ್ರಕಾರ, ಮೃತರಲ್ಲಿ ಐವರು ಮಹಿಳೆಯರು ಮತ್ತು ಒಂದು ಮಗು ಸೇರಿದೆ.

ಮತ್ತಷ್ಟು ಓದಿ: Andhra Pradesh Accident: ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ 7 ಮಂದಿ ದುರ್ಮರಣ

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಾಳುಗಳು ಸದ್ಯ ಬಲೋದಬಜಾರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಲಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ವಿಷಯ ಈ ವಿಷಯ ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ