ಉತ್ತರ ಪ್ರದೇಶ: ವಿಧಾನಸಭೆಯ ಬಾಗಿಲಲ್ಲಿ ಶಾಸಕ ಪಾನ್ ಉಗುಳಿದ ವಿಚಾರ, ಆವರಣದೊಳಗೆ ಪಾನ್ ನಿಷೇಧ

ಉತ್ತರ ಪ್ರದೇಶದ ವಿಧಾನಸಭೆ ಆವರಣದಲ್ಲಿ ಇನ್ನುಮುಂದೆ ಯಾರೂ ಕೂಡ ಪಾನ್ ಮಸಾಲ ಬಾಯಿಗೆ ಹಾಕಿಕೊಂಡು ಬರುವಂತಿಲ್ಲ, ಒಂದೊಮ್ಮೆ ಅಂಥವರು ಕಣ್ಣಿಗೆ ಬಿದ್ದರೆ 1 ಸಾವಿರ ರೂ. ದಂಡವಿಧಿಸಲಾಗುವುದು ಎಂದು ಸ್ಪೀಕರ್ ಹೇಳಿದ್ದಾರೆ. ಶಾಸಕನ ಕೃತ್ಯದ ನಂತರ ಕಾರ್ಪೆಟ್ ಸ್ವಚ್ಛಗೊಳಿಸಿರುವುದಾಗಿ ವಿಧಾನಸಭೆಗೆ ತಿಳಿಸಿದ ಒಂದು ದಿನದ ನಂತರ ವಿಧಾನಸಭೆ ಸ್ಪೀಕರ್ ಸತೀಶ್ ಮಹಾನಾ ನಿಷೇಧದ ಘೋಷಣೆ ಮಾಡಿದರು.

ಉತ್ತರ ಪ್ರದೇಶ: ವಿಧಾನಸಭೆಯ ಬಾಗಿಲಲ್ಲಿ ಶಾಸಕ ಪಾನ್ ಉಗುಳಿದ ವಿಚಾರ, ಆವರಣದೊಳಗೆ ಪಾನ್ ನಿಷೇಧ
ಸ್ಪೀಕರ್

Updated on: Mar 05, 2025 | 3:11 PM

ಉತ್ತರ ಪ್ರದೇಶ, ಮಾರ್ಚ್​ 05: ಶಾಸಕರೊಬ್ಬರು ಉತ್ತರ ಪ್ರದೇಶ ವಿಧಾನಸಭೆಯ ಬಾಗಿಲಿನಲ್ಲಿ ಪಾನ್ ಉಗುಳಿರುವ ವಿಚಾರಕ್ಕೆ ಸಂಬಂಧಿಸಿದ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಇನ್ನುಮುಂದೆ ವಿಧಾನಸಭಾ ಆವರಣದಲ್ಲಿ ಪಾನ್ ಮಸಾಲ ಬ್ಯಾನ್​ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರಲಿರುವ ನಿಷೇಧದ ಜೊತೆಗೆ, ಉಲ್ಲಂಘಿಸುವವರಿಗೆ 1,000 ರೂ.ಗಳ ದಂಡವನ್ನು ಸಹ ವಿಧಿಸಲಾಗುವುದು.

ಶಾಸಕನ ಕೃತ್ಯದ ನಂತರ ಕಾರ್ಪೆಟ್ ಸ್ವಚ್ಛಗೊಳಿಸಿರುವುದಾಗಿ ವಿಧಾನಸಭೆಗೆ ತಿಳಿಸಿದ ಒಂದು ದಿನದ ನಂತರ ವಿಧಾನಸಭೆ ಸ್ಪೀಕರ್ ಸತೀಶ್ ಮಹಾನಾ ನಿಷೇಧದ ಘೋಷಣೆ ಮಾಡಿದರು.

ನಾನು ಆ ಶಾಸಕರನ್ನು ವೀಡಿಯೊದಲ್ಲಿ ನೋಡಿದೆ. ಆದರೆ ನಾನು ಯಾವುದೇ ವ್ಯಕ್ತಿಯನ್ನು ಅವಮಾನಿಸಲು ಬಯಸುವುದಿಲ್ಲ. ಆದ್ದರಿಂದ, ನಾನು ಅವರ ಹೆಸರುಗಳನ್ನು ತೆಗೆದುಕೊಳ್ಳುವುದಿಲ್ಲ. ಯಾರಾದರೂ ಹೀಗೆ ಮಾಡುವುದನ್ನು ನೋಡಿದರೆ, ಅವರನ್ನು ತಡೆಯಬೇಕು ಎಂದು ನಾನು ಎಲ್ಲಾ ಸದಸ್ಯರನ್ನು ಒತ್ತಾಯಿಸುತ್ತೇನೆ. ಈ ಸಭೆಯನ್ನು ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ.

ಮತ್ತಷ್ಟು ಓದಿ: ವಿಧಾನಸಭೆಯ ಬಾಗಿಲಲ್ಲೇ ಪಾನ್ ಮಸಾಲ ಉಗುಳಿದ ಶಾಸಕ

ಒಳ್ಳೆಯ ಇ-ಮೇಜ್ ಎಲ್ಲರ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ, ಹಾಗೆಯೇ ಕೆಟ್ಟ ನಡವಳಿಕೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ವಿಧಾನಸಭೆಯು ಉತ್ತರ ಪ್ರದೇಶದ ಜನರಿಗೆ ಸೇರಿದ್ದು, ವ್ಯಕ್ತಿಯ ವೈಯಕ್ತಿಕ ಆಸ್ತಿಯಲ್ಲ ಎಂದು ಸ್ಪೀಕರ್ ಒತ್ತಿ ಹೇಳಿದರು.

ಮಂಗಳವಾರ ಸದನ ಆರಂಭಕ್ಕೂ ಮುನ್ನ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಸ್ಪೀಕರ್ ಸತೀಶ್ ಮಹಾನಾ, ಕೆಲ ಶಾಸಕರು ಪಾನ್ ಮಸಾಲಾ ತಿಂದು ವಿಧಾನಸೌಧದ ಸಭಾಂಗಣದಲ್ಲಿ ಉಗುಳಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಬಳಿಕ ನಾನೇ ಖುದ್ದಾಗಿ ಸ್ವಚ್ಛತೆ ಮಾಡಿಸಿದ್ದೇನೆ. ಪಾನ್ ಮಸಾಲಾ ತಿಂದು ಉಗುಳಿದ ಶಾಸಕನನ್ನು ವಿಡಿಯೋ ಮೂಲಕ ನೋಡಿದ್ದೇನೆ ಎಂದು ಹೇಳಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ