
ಮೀರತ್, ಅಕ್ಟೋಬರ್ 19: ಪೂಜಾ ಎಂಬುವವರ ಸಹೋದರ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು. ಶಸ್ತ್ರಚಿಕಿತ್ಸೆಗೆ ಹಣದ ಅಗತ್ಯವಿತ್ತು. ಹಾಗಾಗಿ ಮಹಿಳೆ ಪತಿಯ ಮನೆಯಲ್ಲಿ ಬರೋಬ್ಬರಿ 30 ಲಕ್ಷ ರೂ. ಕಳ್ಳತನ(Theft) ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಮಹಿಳೆಯ ಪತಿ ಜವಳಿ ವ್ಯಾಪಾರ ನಡೆಸುತ್ತಿದ್ದರು, ಜವಳಿ ವ್ಯಾಪಾರಿಯ ಮನೆಯಿಂದ 30 ಲಕ್ಷ ರೂಪಾಯಿ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ವ್ಯಾಪಾರಿಯ ಹೆಂಡತಿಯೇ ಈ ಅಪರಾಧದ ಹಿಂದಿನ ಸೂತ್ರಧಾರಿ ಎಂದು ತಿಳಿದುಬಂದಿದೆ. ಆಕೆಯ ಸಹೋದರನ ಜೀವ ಉಳಿಸಲು ಮೂತ್ರಪಿಂಡ ಚಿಕಿತ್ಸೆಗೆ ಹಣ ನೀಡುವುದು ಆಕೆಯ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ.
ಅಕ್ಟೋಬರ್ 15 ರಂದು ಬಟ್ಟೆ ವ್ಯಾಪಾರಿ ಪಿಯೂಷ್ ಮಿತ್ತಲ್ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ದೂರಿನಲ್ಲಿ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು, 50 ಸಾವಿರ ರೂ. ನಗದು ಕಳ್ಳತನವಾಗಿವೆ ಎಂದು ತಿಳಿಸಲಾಗಿದೆ.
ದೂರಿನ ನಂತರ, ಪೊಲೀಸರು ಹತ್ತಿರದಲ್ಲಿರುವ ಎಲ್ಲಾ ಸಿಸಿಟಿವಿಯ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಪ್ರಾರಂಭಿಸಿದರು. ತನಿಖೆಯ ಪರಿಣಾಮವಾಗಿ ವ್ಯಾಪಾರಿಯ ಪತ್ನಿ ಪೂಜಾ ಮಿತ್ತಲ್ (32), ಅವರ ಅತ್ತೆ ಅನಿತಾ (53), ಅವರ ಸಂಬಂಧಿ ರವಿ ಬನ್ಸಾಲ್ (36) ಮತ್ತು ರವಿಯ ಸಂಬಂಧಿ ದೀಪಕ್ (24) ಸೇರಿದಂತೆ ನಾಲ್ವರನ್ನು ಬಂಧಿಸಲಾಯಿತು.
ಮತ್ತಷ್ಟು ಓದಿ: ಇಂದೋರ್: ಕಳ್ಳತನ ಆರೋಪ, ಗುಂಪಿನಿಂದ ಹಲ್ಲೆ, 40 ಮೂಳೆಗಳು ಮುರಿತ, ವ್ಯಕ್ತಿ ಸಾವು
ಪೊಲೀಸರ ಪ್ರಕಾರ, ಆರು ತಿಂಗಳ ಹಿಂದೆ ಪೂಜಾ ಪಿಯುಷ್ನನ್ನು ಮದುವೆಯಾಗಿದ್ದಳು, ಆಕೆಗೆ ಅದು ಎರಡನೇ ಮದುವೆ, ಪಿಯೂಷ್ಗೆ ಮೂರನೇ ಮದುವೆಯಾಗಿತ್ತು. ಪೂಜಾ ಕುಟುಂಬದವರು ಆರ್ಥಿಕವಾಗಿ ಸದೃಢರಾಗಿರಲಿಲ್ಲ. ಆಕೆಯ ಸಹೋದರ ರವಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದನು ಮತ್ತು ಅವರ ಚಿಕಿತ್ಸೆಗೆ ಕುಟುಂಬಕ್ಕೆ ಹಣದ ಕೊರತೆಯಿತ್ತು. ಇದರಿಂದಾಗಿ ಪೂಜಾ ತನ್ನ ಗಂಡನ ಮನೆಯಿಂದ ಕಳ್ಳತನ ಮಾಡುವ ಯೋಜನೆಯನ್ನು ರೂಪಿಸಿದ್ದಳು.
ಕಳ್ಳತನ ನಡೆದ ದಿನ, ಪೂಜಾ ಮತ್ತು ಆಕೆಯ ಪತಿ ಮಧ್ಯಾಹ್ನ 3.15 ರಿಂದ ಸಂಜೆ 6ರ ನಡುವೆ ಶಾಪಿಂಗ್‌ಗೆ ಹೋಗಿದ್ದರು. ಹೊರಡುವ ಮೊದಲು, ಪೂಜಾ ರವಿಗೆ ಮನೆ ಎಷ್ಟು ಸಮಯದಲ್ಲಿ ಖಾಲಿ ಇರುತ್ತದೆ ಎಂದು ತಿಳಿಸಿ ಲಾಕರ್ ಕೀ ಇರುವ ಸ್ಥಳವನ್ನು ತಿಳಿಸಿದ್ದಳು. ಅಂದು ಅವರು ಕಳ್ಳತನವೆಸಗಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ